ದೇವರು

ಡಿಸೆಂಬರ್ 7 ಕಾರ್ತಿಕ ಅಮಾವಾಸ್ಯೆಯ ದಿನ ಸಂಜೆ ಗೋದೂಳಿ ಸಮಯದಲ್ಲಿ ಹೀಗೆ ಮಾಡಿದ್ರೆ ನಿಮ್ಮ ಕಷ್ಟಗಳು ಮಾಯವಾಗಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.

ಕಾರ್ತಿಕ ಮಾಸ ಈಗ ಬರುವ ಕೃಷ್ಣಪಕ್ಷದ ಕಾರ್ತಿಕ ಅಮಾವಾಸ್ಯೆಗೆ ಪೂರ್ಣಗೊಳ್ಳುತ್ತದೆ. ಪರಮ ಪವಿತ್ರವಾದಂತಹ ಕಾರ್ತಿಕ ಮಾಸದಲ್ಲಿ ಹರಿ ಹರರನ್ನೂ ಪೂಜಿಸಿ ಪುನೀತರಾಗಿದ್ದೇವೆ. ಕೊನೆಯ ದಿನವಾದ ಕಾರ್ತಿಕ ಅಮಾವಾಸ್ಯೆಯ ದಿನ, ಸಂಜೆ ಗೋಧೂಳಿ ಸಮಯದಲ್ಲಿ ಈ ರೀತಿಯಾಗಿ ಮಾಡಿದರೆ ನಮ್ಮ ಸಮಸ್ತ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಬಹುದು ಎನ್ನುತ್ತಿದ್ದಾರೆ ಆಧ್ಯಾತ್ಮಿಕ ಚಿಂತಕರು.
ಕೆಲವು ಜನರು ಆರ್ಥಿಕ ಸಮಸ್ಯೆಯಿಂದ ಹಣದ ಬಳಲುತ್ತಿದ್ದರೆ, ಇನ್ನು ಕೆಲವರು ಸಂಕಲ್ಪಿಸಿದ ಕಾರ್ಯಗಳು ಮತ್ತು ಮಾಡುತ್ತಿರುವ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತು ತೊಂದರೆಯನ್ನು ಅನುಭವಿಸುತ್ತಿದ್ದರೆ, ಇನ್ನೂ ಕೆಲವರಿಗೆ ದಾಂಪತ್ಯ ಜೀವನದಲ್ಲಿ ತೊಂದರೆ ಇದ್ದರೆ, ಕಾರ್ತಿಕ ಅಮಾವಾಸ್ಯೆಯ ದಿನ ತುಂಬಾ ವಿಶೇಷವಾಗಿರುವುದರಿಂದ ನೀವು ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ. ಅಮಾವಾಸ್ಯೆಯ ದಿನ ಈ ನಿಯಮಕ್ಕೆ ಪ್ರಶಸ್ತವಾದ ದಿನ ಎಂದು ಹೇಳಲಾಗುತ್ತದೆ. ಅದಕ್ಕೆ ಅಮಾವಾಸ್ಯೆ ಹುಣ್ಣಿಮೆಯನ್ನು ಸಂಧ್ಯಾ ತಿಥಿ ಎಂದು ಕೂಡ ಕರೆಯಲಾಗುತ್ತದೆ.

 

ಕಾರ್ತಿಕ ಅಮಾವಾಸ್ಯೆ ಪರಮ ಪವಿತ್ರವಾದಂತಹ ದಿನ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪ್ರಾತಃಕಾಲದಲ್ಲಿ ಎದ್ದು ಮನೆಯನ್ನು ಶುಚಿಗೊಳಿಸಿಕೊಂಡು ತಾವು ಶುಚಿರ್ಭೂತರಾಗಿ ರಂಗವಲ್ಲಿಯನ್ನು ಹಾಕಿ ಮನೆಯ ಮುಂದೆ ಹೊಸ್ತಿಲಿಗೆ ಅರಿಶಿಣ ಕುಂಕುಮದಿಂದ ಅಲಂಕರಿಸಿ, ಅಕ್ಕ ಪಕ್ಕದಲ್ಲಿ ಸ್ವಸ್ತಿಕ್ ಅನ್ನು ಬರೆದು ಶ್ರೀ ಮಹಾಲಕ್ಷ್ಮಿಯನ್ನು ಆಹ್ವಾನಿಸಬೇಕು. ಆ ಮನೆಯ ಅಂಗಳ ಹೀಗೆ ಇದ್ದಲ್ಲಿ ಶ್ರೀ ಮಹಾಲಕ್ಷ್ಮಿ ಸ್ವತಹ ತಾನಾಗಿಯೇ ಬಂದು ಆ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ. ಹೀಗೆ ಹಣದ ಕೊರತೆಯನ್ನು ಈ ರೀತಿಯಾಗಿ ನಿವಾರಿಸಿಕೊಳ್ಳಬಹುದು.

 

 

 

ಹೀಗೆ ಶ್ರೀ ಮಹಾಲಕ್ಷ್ಮಿಯನ್ನು ಸಂಧ್ಯಾ ಸಮಯದಲ್ಲಿ ಪೂಜಿಸಿ ತುಪ್ಪದ ದೀಪವನ್ನು ಹಚ್ಚಿ,ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿಗಳಿಂದ ಭಕ್ತಿ ಶ್ರದ್ಧೆಗಳಿಂದ ಪೂಜಿಸಿದರೆ ಆಕೆಯ ಸಂಪೂರ್ಣ ಕೃಪಾಕಟಾಕ್ಷ ಒದಗಿ ಬರುತ್ತದೆ. ಹೀಗೆ ಮಾಡಿ ನಿಮ್ಮ ಆರ್ಥಿಕ ತೊಂದರೆಗಳನ್ನು ಹೋಗಲಾಡಿಸಿ ಕೊಳ್ಳಬಹುದು, ಸಂಕಲ್ಪಿಸಿದ ಕಾರ್ಯಗಳು ಅರ್ಧಕ್ಕೆ ನಿಂತು ತೊಂದರೆಯನ್ನು ಅನುಭವಿಸುತ್ತಿದ್ದರೆ, ಮಾಡಬೇಕೆಂದ ಕೆಲಸ ಮುಂದೆ ಸಾಗದೇ ಅಲ್ಲೇ ತಟಸ್ಥವಾಗಿ ನಿಂತು ತೊಂದರೆಯನ್ನು ಅನುಭವಿಸುತ್ತಿದ್ದರೆ, ಇಂಥವರು ಈ ನಿಯಮವನ್ನು ಪಾಲಿಸಬೇಕು.

ಸಂಜೆ 6 ಗಂಟೆಗೆ ಒಂದು ಕೆಜಿ ನೆಲ್ಲನ್ನು ತೆಗೆದುಕೊಂಡು ಒಂದು ಕೆಂಪು ವಸ್ತ್ರದಲ್ಲಿ ಅದನ್ನು ಹಾಕಿ, ಅದರ ಮೇಲೆ ಒಂದು ಮಡಿಕೆಯನ್ನು ಇಟ್ಟು, ಪೂರ್ವಾಭಿಮುಖವಾಗಿ ತುಪ್ಪದ ದೀಪವನ್ನು ಹಚ್ಚಿಡಿ. ಹೀಗೆ ತುಪ್ಪದ ದೀಪವನ್ನು ಬೆಳಗುವುದರಿಂದ ನಿಮಗೆ ನಿಮ್ಮ ಕಾರ್ಯಗಳಿಗೆ ಅಡ್ಡ ಬರುತ್ತಿರುವ ಎಲ್ಲ ವಿಘ್ನಗಳು ತೊಲಗಿ ಹೋಗುತ್ತದೆ. ನಿರ್ವಿಘ್ನವಾಗಿ ಆ ಕಾರ್ಯ ಯಶಸ್ವಿಯಾಗುತ್ತದೆ. ಹಾಗೆಯೇ ದಾಂಪತ್ಯದಲ್ಲಿ ತೊಂದರೆ ಅನುಭವಿಸುತ್ತಿರುವವರು,ಪತಿ ಪತ್ನಿಯ ನಡುವೆ ಪ್ರೀತಿ ಇಲ್ಲದವರು, ಅಮಾವಾಸ್ಯೆಯ ದಿನ ಸಂಜೆಯ ಸಮಯದಲ್ಲಿ ತುಳಸಿ ವೃಂದಾವನದ ಮುಂದೆ ತುಪ್ಪದ ದೀಪವನ್ನು ಹಚ್ಚಿಡಬೇಕು. ಮುಖ್ಯವಾಗಿ ಗೃಹಿಣಿಯರು ರಾಮ ತುಳಸಿ ಹಾಗೂ ಕೃಷ್ಣ ತುಳಸಿ ಗಿಡಕ್ಕೆ ಎರಡು ತಂಬಿಗೆ ನೀರನ್ನು ಹಾಕಿ ಪೂಜೆ ಮಾಡಿ. ತುಳಸಿ ಗಿಡಕ್ಕೆ 11 ಪ್ರದಕ್ಷಿಣೆಗಳನ್ನು ಹಾಕಿ ಆಕೆಯನ್ನು ಮನಸ್ಸಿನಲ್ಲಿ ನೆನೆಸಿಕೊಂಡು ತುಳಸಿ ಮಾತೆಯ ಕೃಪೆಗೆ ಪಾತ್ರರಾಗಬೇಕು. ಹೀಗೆ ಮಾಡುವುದರಿಂದ ಸಂಪೂರ್ಣ ತುಳಸಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಹೀಗೆ ಅನುಗ್ರಹ ಪ್ರಾಪ್ತಿಯಾಗುವುದರಿಂದ ದಾಂಪತ್ಯದಲ್ಲಿ ಸುಖ ಜೀವನ ಕಂಡುಕೊಳ್ಳುತ್ತಾರೆ. ಹೀಗೆ ಅಮಾವಾಸ್ಯೆಯ ಸಂಜೆಯ ದಿನ ಈ ನಿಯಮವನ್ನು ಪಾಲಿಸುವುದರಿಂದ ಸಮಸ್ತ ದುಃಖಗಳು ದೂರ ಸರಿದು ಮಂಗಳ ಉಂಟಾಗಿ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top