fbpx
ಮನೋರಂಜನೆ

ಚಿತ್ರರಂಗಕ್ಕೆ ಎಂಟ್ರಿಕೊಡಲು ಸಜ್ಜಾದ ರವಿಮಾಮನ 2ನೇ ಮಗ ವಿಕ್ರಮ್.

2017ರಲ್ಲಿ ‘ಸಾಹೇಬ’ ಚಿತ್ರದ ಮೂಲಕ ಕನ್ನಡ  ಚಿತ್ರರಂಗಕ್ಕೆ ರವಿಚಂದ್ರನ್ ರವರ ಮೊದಲ ಮಗ ‘ಮನೋರಂಜನ್ ರವಿಚಂದ್ರನ್‘ ಎಂಟ್ರಿ ಕೊಟ್ಟಿದ್ದರು . ಇದೀಗ ರವಿಚಂದ್ರನ್ ರವರ ಎರಡೆನೇ ಮಗನ ಸರದಿಯಾಗಿದ್ದು, ‘ವಿಕ್ರಮ್ ರವಿಚಂದ್ರನ್’ ಕೂಡಾ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಗಾಂಧಿ ನಗರದಲ್ಲಿ ಕೇಳಿ ಬರುತ್ತಿದೆ.

ಈ ಹಿಂದೆ ವಿಕ್ರಮ್ ನಾಯಕರಾಗಿ ನಾಗಶೇಖರ್ ನಿರ್ದೇಶನದ ‘ನವೆಂಬರ್‌ನಲ್ಲಿ ಅವನು ಮತ್ತು ಅವಳು’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ಏನಾಯಿತೇನೋ ಇದ್ದಕ್ಕಿಂದ್ದಂತೆ ನಾಗಶೇಖರ್ ‘ಅಮರ್’ ಚಿತ್ರ ನಿರ್ದೇಶನ ಮಾಡಲು ಶುರುಹಚ್ಚಿಕೊಂಡು ಬಿಟ್ಟರು ಇದರಿಂದಾಗಿ ವಿಕ್ರಮ್ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಗೊಂದಲ ಅಭಿಮಾನಿಗಳಲ್ಲಿ ಏರ್ಪಟ್ಟಿತ್ತು, ಆದರೆ ಇದೀಗ ಈ ಗೊಂದಲಕ್ಕೆ ಉತ್ತರ ಸಿಕ್ಕಿದ್ದು. ‘ಮಾಸ್ ಲೀಡರ್’ ಚಿತ್ರದ ನಿರ್ದೇಶಕ ಸಹನಾಮೂರ್ತಿ ನಿರ್ದೇಶನದ ಚಿತ್ರದೊಂದಿಗೆ ವಿಕ್ರಮ್ ಬೆಳ್ಳಿತೆರೆಗೆ ಲಗ್ಗೆ ಇಡಲಿದ್ದಾರೆ ಅನ್ನುವ ಮಾತುಗಳು ಹರಿದಾಡುತ್ತಿದೆ.

ಈ ಕುರಿತು ವಿಕ್ರಮ್ ರವಿಚಂದ್ರನ್ ರವರನ್ನು ಪ್ರಶ್ನಿಸಿದಾಗ “ಸಿನಿಮಾ ಮಾಡೋದು ನಿಜ. ಸಾಕಷ್ಟು ಆಫರ್ ಬರುತ್ತಿವೆ. ಯಾರ ಜತೆಗೆ ಸಿನಿಮಾ ಮಾಡ್ಬೇಕು, ಮೊದಲ ಸಿನಿಮಾದ ಕತೆ ಹೇಗಿರಬೇಕು ಅನ್ನೋದನ್ನು ನಾವಿನ್ನು ಡಿಸೈಡ್ ಮಾಡಿಲ್ಲ. ಒಂದಷ್ಟು ಸಿದ್ಧತೆಯ ನಂತರ ಸಿನಿಮಾಕ್ಕೆ ಕಾಲಿಡೋಣ ಅಂತಿದ್ದೇನೆ. ಹೊಸ ವರ್ಷಕ್ಕೆ ಹೊಸ ಸುದ್ದಿ ನೀಡುತ್ತೇನೆ”ಎಂದು ಉತ್ತರ ಕೊಟ್ಟರು.

ಒಟ್ಟಿನಲ್ಲಿ ರವಿಚಂದ್ರನ್ ರವರ ಎರಡನೇ ಸುಪುತ್ರ 2019 ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಡೋದಂತೂ ಗ್ಯಾರೆಂಟಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top