ಸಮಾಚಾರ

ಸಿಎಂ ಪುತ್ರನ ‘ಸೀತಾರಾಮ ಕಲ್ಯಾಣ’ ಚಿತ್ರಕ್ಕೆ ರಿಲೀಸ್ ಡೇಟ್ ಫಿಕ್ಸ್.

ನಿಖಿಲ್ ಕುಮಾರಸ್ವಾಮಿಯ ಮುಂದಿನ ಚಿತ್ರ ‘ಸೀತಾರಾಮ ಕಲ್ಯಾಣ’ ಚಿತ್ರದ ಚಿತ್ರೀಕರಣವನ್ನು ಇತ್ತೀಚಿಗಷ್ಟೇ ಮುಗಿಸಿಕೊಂಡಿದೆ. ಕುಮಾರಸ್ವಾಮಿ ಹೋಮ್ ಬ್ಯಾನರ್ ನಲ್ಲಿಯೇ ತಯಾರಾಗಿರುವ ಈ ಚಿತ್ರವೂ ಅದ್ಧೂರಿಯಾಗಿ ಮೂಡಿಬಂದಿದೆ. ಸದ್ಯ ಸಿನಿಮಾದ ಸಂಪೂರ್ಣ ಪೋಸ್ಚ್ ಪ್ರೊಡಕ್ಷನ್ ಕೆಲಸವನ್ನು ಖುದ್ದು ನಿಖಿಲ್ ಕುಮಾರ್ ನಿಂತುಕೊಂಡು ಮಾಡುತ್ತಿದ್ದಾರೆ.

ಇದೀಗ ಚಿತ್ರದ ರಿಲೀಸ್ ಡೇಟ್ ಬಗ್ಗೆ ವಿವಿಧ ಮಾತುಗಳು ಕೇಳಿಬರುತ್ತಿವೆ. ಜನವರಿ 22 ರಂದು ನಿಖಿಲ್ ಕುಮಾರಸ್ವಾಮಿ ಹುಟ್ಟು ಹಬ್ಬವಿದ್ದು ಹಾಗಾಗಿ ಜನವರಿ 25 ವೀಕೆಂಡ್ ಆಗಿರುವುದರಿಂದ ಗಣರಾಜ್ಯೋತ್ಸವ ದಿನದ ಹಿಂದಿನ ದಿನ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ. ಸಿನಿಮಾವನ್ನು ಡಿಸೆಂಬರ್ 10 ರಂದು ಸೆನ್ಸಾರ್ ಮಂಡಳಿ ಮುಂದೆ ಪ್ರದರ್ಶಿಸಲಾಗುವುದು. ಅದಾದ ನಂತರ ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಹೇಳಲಾಗುತ್ತಿದೆ.

ಸುನೀಲ್ ಗೌಡ ಅವರ ನಿರ್ಮಾಣ ಮೇಲ್ವಿಚಾರಣೆ ಇರೋ ಸೀತಾರಾಮ ಕಲ್ಯಾಣ ರವಿ ಬಸ್ರೂರು ಅವರ ಸಂಗೀತದಿಂದ ಕಳೆಗಟ್ಟಲಿದೆ. ಇನ್ನುಳಿದಂತೆ ಸ್ವಾಮಿ ಛಾಯಾಗ್ರಹಣ, ರಾಮ್ ಲಕ್ಷಣ್ ಸಾಹಸ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ ಮತ್ತು ಮೋಹನ್ ಬಿ ಕೆರೆ ಕಲಾ ನಿರ್ದೇಶನದಲ್ಲಿ ಸೀತಾರಾಮ ಕಲ್ಯಾಣ ಮೂಡಿ ಬರಲಿದೆ.ಚಿತ್ರದಲ್ಲಿ ನಿಖಿಲ್’ಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top