ಮನೋರಂಜನೆ

ಖ್ಯಾತ ನಟಿ ಕಾಜಲ್ ಅಗರ್ವಾಲ್ ಮದುವೆ ಯಾವಾಗ ?

ಈ ವರ್ಷ ನಟಿ ಮಣಿಯರೆಲ್ಲ ಮದುವೆಯಾಗುತ್ತ ಬಂದಿದ್ದು . ಮದುವೆಯ ಮೇಲೆ ಮದುವೆಯ ಸುದ್ದಿಗಳು ಕೇಳಿ ಬರುತ್ತಿವೆ. ಇತ್ತೀಚಿಗಷ್ಟೇ ಬಾಲಿವುಡ್ ಬೆಡಗಿಯರಾದ ದೀಪಿಕಾ ಪಡುಕೋಣೆ ರಣಬೀರ್ ಸಿಂಗ್ ರೊಂದಿಗೆ ಮತ್ತು ಪ್ರಿಯಾಂಕಾ ಚೋಪ್ರಾ ನಿಕ್ ರೊಟ್ಟಿಗೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಇವರುಗಳ ಮದುವೆ ಭಾರಿ ಸದ್ದು ಮಾಡಿತ್ತು.

ಇದೀಗ ಸಿನಿ ದುನಿಯಾದಲ್ಲಿ ಮತ್ತೊಂದು ಸುದ್ದಿ ಓಡಾಡುತ್ತಿದ್ದು, ಸೌತ್ ನ ಸೂಪರ್ ನಟಿ ‘ಕಾಜಲ್ ಅಗರ್ವಾಲ್’ ಮದುವೆ ಯಾವಾಗ ಎಂಬ ವಿಷಯ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ.

ಕಾಜಲ್ ಅಗರ್ವಾಲ್ ರನ್ನು ದೀಪಿಕಾ, ಪ್ರಿಯಾಂಕಾ ಮದುವೆ ಆಯ್ತು, ನಿಮ್ಮ ಮದುವೆ ಯಾವಾಗ ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ ಕಾಜಲ್ ‘ನಿಮಗೆ ನನ್ನ ಮದುವೆ ಬಗ್ಗೆ ತುಂಬಾ ಯೋಚನೆ ಇದೆ ಅನಿಸುತ್ತಿದೆ, ನೀವು ನಮ್ಮ ತಂದೆ ಬಳಿ ಮಾತಾಡಿ’ ಎಂದು ಉತ್ತರಿಸುವುದರೊಂದಿಗೆ , ‘ಈ ವರ್ಷ ಹಲವರು ಮದುವೆಯಾಗಿದ್ದಾರೆ, ಆಗ್ತಾನೆ ಇದ್ದಾರೆ. ನನಗೂ ಮದುವೆ ಆಗ್ಬೇಕು ಎಂಬ ಪ್ರಚೋದನೆ ಹೆಚ್ಚಾಗ್ತಿದೆ’ ಎಂದು ಮದುವೆಯ ಕುರಿತಾದ ತಮ್ಮ ನಿಲುವನ್ನ ಹೊರಹಾಕಿದ್ದಾರೆ.

ಆದರೆ ಕಾಜಲ್ ಮದುವೆ ಯಾವಾಗ ಎಂಬುದರ ಬಗ್ಗೆ ಆಗಲಿ, ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಆಗುತ್ತಾರಾ ಎಂಬುದರ ಬಗ್ಗೆ ಆಗಲಿ ಯಾವ ಸುಳಿವನ್ನು ಇಲ್ಲಿಯವರೆಗೂ ನೀಡಿಲ್ಲ.

ಒಟ್ಟಿನಲ್ಲಿ ಕಾಜಲ್ ರ ‘ಪ್ಯಾರೀಸ್ ಪ್ಯಾರೀಸ್’ ಚಿತ್ರ ಬಿಡುಗಡೆಯಾಗಬೇಕಿದ್ದು. ನಂತರ ‘ಕವಚಂ’, ಸಿನಿಮಾ ಹಾಗೂ ಕಮಲ್ ಹಾಸನ್ ಅವರ ‘ಇಂಡಿಯನ್ 2’ ಚಿತ್ರದಲ್ಲಿ ಕಾಜಲ್ ನಟಿಸಲಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top