fbpx
ಸಮಾಚಾರ

ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಸರ್ಕಾರ – ಬರೋಬ್ಬರಿ 75 ಕೋಟಿ ರೂ ದಂಡ!

ಇತ್ತೀಚಿಗೆ ಇಡೀ ದೇಶದಲ್ಲಿ ಬೆಳ್ಳಂದೂರು ಕೆರೆಯ ಜಲಮಾಲಿನ್ಯದ ಕಾರಣಕ್ಕಾಗಿ ಬೆಂಗಳೂರು ಸುದ್ದಿಯಾಗಿತ್ತು. ಇದೀಗ ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಸಂಕಷ್ಟಕೆ ಸಿಲುಕಿದೆ. ಹೌದು, ಬೆಳ್ಳಂದೂರು ಕೆರೆ ಮಾಲಿನ್ಯದ ವಿಚಾರದಲ್ಲಿ ನ್ಯಾಯಾಧಿಕರಣವು ಹಲವು ಆದೇಶಗಳನ್ನು ಹೊರಡಿಸಿತ್ತು ಆದರೆ ಈ ಈ ಆದೇಶಗಳಿಗೆ ಪೂರಕವಾಗಿ ಯಾವುದೇ ಕ್ರಮಗಳನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳದ ನಮ್ಮ ರಾಜ್ಯ ಸರ್ಕಾರ ಇದೀಗ ನ್ಯಾಯಾಧಿಕರಣದ ಕೋಪಕ್ಕೆ ಗುರಿಯಾಗಿದ್ದು ಇದರ ಪರಿಣಾಮವಾಗಿ 75 ಕೋಟಿ ದಂಡ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಹಿಂದೆ ಬೆಳ್ಳಂದೂರು ಕರೆ ಮಲಿನಗೊಂಡು ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸೇರಿದಂತೆ ಹಲವು ಸಂಸ್ಥೆಗಳು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದವು ಹಾಗೂ ಈ
ಸಲ್ಲಿಸಿದ್ದ ಅರ್ಜಿಗಳ ವಿಚಾರ ನಿನ್ನೆ ನಡೆದಿದ್ದು ಇದರ ಕುರಿತು ಮಾತನಾಡಿದ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾ. ಆದರ್ಶಕುಮಾರ್‌ ಗೋಯಲ್‌ ಅವರು, ‘ಬೆಳ್ಳಂದೂರು ಕೆರೆಯ ರಕ್ಷಣೆ ಮತ್ತು ಪುನರುಜ್ಜೀವನದಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ. ಶುದ್ಧೀಕರಿಸದ ಒಳಚರಂಡಿ ನೀರು ಕೆರೆಗೆ ಇನ್ನೂ ಬರುತ್ತಲೇ ಇದೆ’ ಎಂದು ಹೇಳಿದರು.

ಹೀಗಾಗಿ ಬೆಳ್ಳಂದೂರು ಕರೆಯನ್ನು ರಾಜ್ಯ ಸರಕಾರ ಶುದ್ಧಿ ಮಾಡಲು ವಿಫಲವಾಗಿದ್ದಕ್ಕೆ ನ್ಯಾಯಾಧಿಕರಣವು ರಾಜ್ಯ ಸರ್ಕಾರ ಕ್ಕೆ 50 ಕೋಟಿ ರುಪಾಯಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ 25 ಕೋಟಿ ರುಪಾಯಿ ದಂಡ ವಿಧಿಸಿದ್ದು ಈ ಹಣವನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಟ್ಟುವಂತೆ ಆದೇಶ ಹೊರಡಿಸಿದೆ.

ಮುಂದುವರೆದು ಬೆಳ್ಳಂದೂರು ಕೆರೆ ಹಾಗೂ ರಾಜಾಕಾಲುವೆಗಳ ಒತ್ತುವರಿಯ ಬಗ್ಗೆಯೂ ಮಾತನಾಡಿದ ನ್ಯಾ. ಗೋಯಲ್‌, ‘ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗಳು ಬೆಳ್ಳಂದೂರು ಕರೆ ಹಾಗೂ ರಾಜಾಕಾಲುವೆ ಅತಿಕ್ರಮಣ ತಡೆಯಲು ವಿಫಲವಾಗಿವೆ. ಕೆರೆ ಜಲಾನಯನ ಪ್ರದೇಶದ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಬೇಕು’ ಎಂದು ಆದೇಶಿಸಿದರು.

ಇದೇ ಸಮಯದಲ್ಲಿ ಇನ್ನೊಂದು ಮಹತ್ವದ ಆದೇಶ ಹೊರ ಬಂದಿದ್ದು. ಕರ್ನಾಟಕ ಸರ್ಕಾರ ಕೆರೆಯ ಶುದ್ಧೀಕರಣ ಉದ್ದೇಶಕ್ಕಾಗಿ ಬ್ಯಾಂಕ್‌ ಖಾತೆ (ಪ್ರತ್ಯೇಕ ಖಾತೆ) ತೆರೆದು 500 ಕೋಟಿ ರುಪಾಯಿ ಠೇವಣಿ ಇಡಬೇಕು. ಈ ಹಣವನ್ನು ಕೆರೆಯ ಶುದ್ಧೀಕರಣದ ಉದ್ದೇಶಕ್ಕೆ ಬಳಸಬೇಕು ಎಂದೂ ನ್ಯಾಯಾಧಿಕರಣ ಆದೇಶಿಸಿರುವದರೊಂದಿಗೆ ಒಂದು ವೇಳೆ ಈ ಆದೇಶವನ್ನು ಪಾಲಿಸಲು ರಾಜ್ಯಸರ್ಕಾರ  ವಿಫಲವಾದರೆ  ಮುಂದೆ 100 ಕೋಟಿ ರು ದಂಡ ಕಟ್ಟಬೇಕಾಗಬಹುದೆಂದು ನ್ಯಾಯಾಧಿಕರಣ ರಾಜ್ಯ ಸರ್ಕಾರ ಕ್ಕೆ ಎಚ್ಚರಿಕೆ ನೀಡಿದೆ.

ಅದರಂತೆ ನ್ಯಾಯಾಧಿಕರಣ ಕೊಟ್ಟ ಆದೇಶವನ್ನು ಸರ್ಕಾರ ಸರಕಾರ ಪಾಲನೆ ಮಾಡುತ್ತಿದೆಯೇ ಎಂಬುದನ್ನು ನೋಡಿಕೊಳ್ಳಲು ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ, ಐಐಎಸ್ಸಿಯ ನಿವೃತ್ತ ಪ್ರಾಧ್ಯಾಪಕ ಟಿ.ವಿ. ರಾಮಚಂದ್ರನ್‌ ಹಾಗೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಓರ್ವ ಸದಸ್ಯರನ್ನು ಒಳಗೊಂಡ ಉಸ್ತುವಾರಿ ಸಮಿತಿಯನ್ನು ನ್ಯಾಯಾಧಿಕರಣ ರಚಿಸಿದ್ದು. ಬೆಳ್ಳಂದೂರು ಕೆರೆಯ ಪುನರುತ್ಥಾನಕ್ಕೆ 1 ತಿಂಗಳಲ್ಲಿ , ‘ಕಾಲಮಿತಿಯ ಕ್ರಿಯಾಯೋಜನೆ’ ಸಿದ್ಧಪಡಿಸಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.

ಕೆರೆ ಮಾಲಿನ್ಯ ಮಾಡಿದವರಿಂದ ದಂಡ ವಸೂಲು ಮಾಡಲು ಮಾರ್ಗದರ್ಶಿ ನಿಯಮಗಳನ್ನು ರೂಪಿಸುವಂತೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಎನ್‌ಜಿಟಿ ಸಲಹೆ ನೀಡಿತು ಅದರೊಂದಿಗೆ ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಸಂಬಂಧಿಸಿದಂತೆ ವೆಬ್‌ಸೈಟ್‌ ಒಂದನ್ನು ರೂಪಿಸಿ ಜನರಿಂದ ಸಲಹೆ-ದೂರು ಸ್ವೀಕರಿಸಿ ಎಂದೂ ನ್ಯಾಯಮೂರ್ತಿಗಳು ಕರೆಕೊಟ್ಟರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top