ಸಮಾಚಾರ

ಶೀಘ್ರವೇ ಹಸೆಮಣೆಯೇರಲಿದ್ದಾರೆ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ.

ತಮ್ಮ ಪುತ್ರನ ವಿವಾಹದ ವಿಚಾರದ ಕುರಿತು ಕೊನೆಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರದಂದು ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ನಿಖಿಲ್ ಮದುವೆ ವಿಚಾರದ ಬಗ್ಗೆ ಕೂಡ ಚರ್ಚೆ ಮಾಡುವ ಉದ್ದೇಶದಿಂದ ಶ್ರಂಗೇರಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ಶೃಂಗೇರಿ ಶಾರದಾಂಬ ದೇವಾಲಯಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ “ಗುರುಗಳ ಅಶೀರ್ವಾದ, ಶಾರದಾಂಬೆ ದರ್ಶನ ಪಡೆಯಲು ಬಂದಿದ್ದೇನೆ. ಕ್ಷೇತ್ರಕ್ಕೆ ಬಂದು ದೇವಿಯ ದರ್ಶನ, ಗುರುಗಳ ಆಶೀರ್ವಾದದಿಂದ ಹಲವಾರು ರೀತಿಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಂಡಿದ್ದೇನೆ. ಎಲ್ಲಾ ಒಳ್ಳೆಯ ಕಾರ್ಯಕ್ಕೂ ಗುರುಗಳ ಆಶೀರ್ವಾದ ಇರಬೇಕು. ಹೀಗಾಗಿ ಮಗ ನಿಖಿಲ್ ಕುಮಾರಸ್ವಾಮಿಯ ಮದುವೆ ವಿಷಯವನ್ನೂ ಸಹ ಶ್ರೀಗಳ ಬಳಿ ಚರ್ಚೆ ನಡೆಸಿ ಸಲಹೆ ಪಡೆಯುತ್ತಿದ್ದೇನೆ” ಎಂದು ಕುಮಾರಸ್ವಾಮಿ ಹೇಳಿದರು.

ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರಿಗೆ ನಿಶ್ಚಿತಾರ್ಥ ನಡೆದು, ಅದು ಮುರಿದುಬಿದ್ದಿತ್ತು.. ಬಳಿಕ ಆಂಧ್ರದ ಉದ್ಯಮಿಯೊಬ್ಬರ ಮಗಳ ಜತೆಗೆ ನಿಖಿಲ್ ಮದುವೆಯಾಗಲಿದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ ಕುಟುಂಬ ಈ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ಆದ್ರೆ ಇದೀಗ ಮೊದಲ ಬಾರಿಗೆ ಮಾಧ್ಯಮಗಳ ಎದುರು ತಮ್ಮ ಮಗನ ಮದುವೆ ವಿಚಾರವನ್ನೂ ಮಾತನಾಡಲು ಬಂದಿದ್ದೇನೆ ಎಂದಿರುವುದು ಕುತೂಹಲ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top