ಮನೋರಂಜನೆ

ಮದುವೆಯಾಗಿದ್ದೇ ತಡ ತನ್ನ ಹೆಸರನ್ನೇ ಬದಲಿಸಿಕೊಂಡಳು ಪ್ರಿಯಾಂಕಾ ಚೋಪ್ರಾ.

ಕಳೆದೊಂದು ವರ್ಷದಿಂದ ಲವ್ ಅಫೆರಿನ ವಿಚಾರವಾಗಿ ಬಾಲಿವುಡ್ಡಿನಲ್ಲಿ ಭಾರಿ ಸುದ್ದಿಯಲ್ಲಿದೆ ಪ್ರಿಯಾಂಕಾ ಚೋಪ್ರಾ ತನ್ನ ಪ್ರಿಯಕರನನ್ನು ಕಟ್ಟಿಕೊಂಡಿದ್ದಾಳೆ. .ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕದ ಗಾಯಕ ನಿಕ್ ಜೋನಾಸ್ ಅವರ ಬಹು ನಿರೀಕ್ಷಿತ ವಿವಾಹ ಶನಿವಾರ ಅದ್ಧೂರಿಯಾಗಿ ನೆರವೇರಿತು. ಜೋಧ್‍ಪುರದ ಉಮೇದ್ ಭವನ್ ಅರಮನೆಯ ಹೋಟೆಲ್‍ನಲ್ಲಿ ಶನಿವಾರ ಉಂಗುರ ಬದಲಿಸಿಕೊಳ್ಳುವ ಮೂಲಕ ನಿಕ್-ಪ್ರಿಯಾಂಕ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಮದುವೆಗೆ ಮುಂಚೆ ಇದ್ದ ಚಲನವಲನಗಳು ಮದುವೆಯ ನಂತರ ಬದಲಾವಣೆಗಳಾಗುತ್ತವೆ.. ಸಾಮಾನ್ಯವಾಗಿ ಮದುವೆಯಾದ ಹುಡುಗಿಯರಲ್ಲಿ ಹೆಚ್ಚಿನವರು ತಮ್ಮ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುತ್ತಾರೆ. ಆ ಸಾಲಿಗೆ ನಟಿ ಪ್ರಿಯಾಂಕ ಚೋಪ್ರಾ ಕೂಡಾ ಹೊರತಾಗಿಲ್ಲ.

ಮದುವೆಯ ಬಳಿಕ ಹೆಸರಿನ ಮುಂದೆ ತನ್ನ ಗಂಡ ನಿಕ್ ಜೋನ್ಸ್ ಸೇರಿಸಿಕೊಂಡಿದ್ದಾಳೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹೆಸರನ್ನು ಪ್ರಿಯಾಂಕ ಚೋಪ್ರಾ ಜೋನಸ್ ಎಂದು ಬದಲಾಯಿಸಿಕೊಂಡಿದ್ದಾರೆ. ಆದರೆ ಉಳಿದ ಫೇಸ್ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ತನ್ನ ಹೆಸರನ್ನು ಬದಲಿಸಿಕೊಂಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top