ಸಮಾಚಾರ

ಪ್ರಜ್ವಲ್ ಪತ್ನಿಯ ಮೊದಲ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ ಪುನೀತ್ ರಾಜಕುಮಾರ್.

ಚಂದನವನದ ಮುದ್ದು ಜೋಡಿಗಳಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ರಾಮಚಂದ್ರನ್ ಅವರದ್ದೂ ಒಂದು.. ಚಿತ್ರರಂಗದಲ್ಲಿ ಡೈನಾಮಿಕ್ ಪ್ರಿನ್ಸ್ ಎಂದೇ ಹೆಸರಾಗಿರುವ ಪ್ರಜ್ವಲ್ ರಾಗಿಣಿ ಚಂದ್ರನ್‌ರನ್ನು ವರಿಸಿ ವರ್ಷಗಳೇ ಕಳೆಯುತ್ತಾ ಬಂದಿವೆ.. ಈ ನಡುವೆ ಪ್ರಜ್ವಲ್ ಪತ್ನಿ ರಾಗಿಣಿ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಆಗಾಗ್ಗೆ ಹರಿದಾಡುತ್ತಿತ್ತು. ಇದೀಗ ಈ ಸುದ್ದಿ ನಿಜವಾಗುತ್ತಿದೆ..

ಪ್ರಜ್ವಲ್ ನಾಯಕನಾಗಿ ನಟಿಸುತ್ತಿರುವ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದ ಅತಿಥಿ ಪಾತ್ರವೊಂದರಲ್ಲಿ ರಾಗಿಣಿ ಕೂಡ ನಟಿಸುತ್ತಾರೆ ಎಂಬ ವಿಷಯ ಹೊರಬಿದ್ದ ಬೆನ್ನಲ್ಲೇ ‘ವಿಜಯದಶಮಿ’ ಹೆಸರಿನ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿಯಾಗಿತ್ತು.. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಶೂಟಿಂಗ್ ಇನ್ನೂ ಪ್ರಾರಂಭವೇ ಆಗಿಲ್ಲ. ಇದಕ್ಕೆ ಕಾರಣ ಚಿತ್ರದ ಪ್ರೊಡ್ಯೂಸರ್. ಹೌದು, ಎಲ್ಲವೂ ಓಕೆ ಆಗಿ, ಇನ್ನೇನು ಶೂಟಿಂಗ್ ಶುರುವಾಗಬೇಕು ಎನ್ನುವಾಗ ನಿರ್ಮಾಪಕರು ಬದಲಾಗಿದ್ದಾರೆ. ಈಗ ಚಿತ್ರದ ನಿರ್ಮಾಣ ಹೊಣೆಯನ್ನು ಪುನೀತ್ ರಾಜ್ ಕುಮಾರ್ ಅವರು ಹೊತ್ತಿಕೊಂಡಿದ್ದು ಅವರ PRK ಬ್ಯಾನರಿನ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

ರಘು ಸಮರ್ಥ್ ನಿರ್ದೇಶಿಸುತ್ತಿರುವ ವಿಜಯದಶಮಿ ನಾಯಕಿ ಪ್ರದಾನ ಚಿತ್ರದಲ್ಲಿ ರಾಗಿಣಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಅತೀ ಶೀಘ್ರದಲ್ಲೇ ಈ ಚಿತ್ರದ ಮುಹೂರ್ತ ನೆರವೇರಲಿದೆ. ಉಳಿದಂತೆ ಅಚ್ಯುತ್ ಕುಮಾರ್. ಅವಿನಾಶ್ ಸೇರಿದಂತೆ ಅನೇಕರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top