ಮನೋರಂಜನೆ

ಕೊನೆಗೂ ಮುರಿದುಬಿತ್ತು ‘ಡವ್ ರಾಣಿ’ ರಾಖಿಯ ‘ಬೆತ್ತಲೆ ಮದುವೆ’.

ಬಾಲಿವುಡ್‌ನಲ್ಲಿ ಬಿಚ್ಚಿ ತೋರಿಸೋ ಪರಾಕ್ರಮದಿಂದಲೇ ಪ್ರವರ್ಧಮಾನಕ್ಕೆ ಬಂದ ನಟೀಮಣಿಯರದ್ದೊಂದು ದಂಡೇ ಇದೆ. ಅಂಥವರ ಸಾಲಿನಲ್ಲಿ ರಾಖಿ ಸಾವಂತ್‌ಳದ್ದು ಅಗ್ರಸ್ಥಾನ. ಆಕ್ಟಿಂಗಿನ ಗಂಧಗಾಳಿ ಇಲ್ಲದಿದ್ದರೂ ನಟಿ ಅನ್ನಿಸಿಕೊಳ್ಳೋದು ಹೇಗೆ? ಸದಾ ಒಂದಿಲ್ಲೊಂದು ರೀತಿಯಲ್ಲಿ ಪ್ರಚಾರದಲ್ಲಿರೋದು ಹೇಗೆ ಎಂಬ ವಿಚಾರದ ಬಗ್ಗೆ ರಾಖಿ ಖಂಡಿತವಾಗಿಯೂ ಆಸಕ್ತರಿಗೆ ಸದಾ ಹೆಬ್ಬಾಗಿಲು ತೆರೆದು ಕುಂತಿರೋ ಯೂನಿವರ್ಸಿಟಿ!

ಬೇರೇನೂ ಇಶ್ಯೂ ಇಲ್ಲದಿದ್ದರೆ ಕಡಿಮೆ ಬಟ್ಟೆ ತೊಟ್ಟು ಅಂಗಾಂಗ ಪ್ರದರ್ಶಿಸುವ ಮೂಲಕ ಆಗಾಗ ಸುದ್ದಿಯಾಗುತ್ತಾ ವಿವಾದವೆಬ್ಬಿಸೋದು ನಟಿ ರಾಖಿಯ ಹಳೇ ವರಸೆ. ಆದರೆ ಸುದ್ದಿಯಾಗಲು ಮದುವೆ ರೂಟು ಹಿಡಿದುಕೊಂಡಿದ್ದಳು. ಡಿಸೆಂಬರ್ 31ಕ್ಕೆ ನನ್ನ ಮದುವೆ, ಅಲ್ಲದೆ ತಾವು ಬಟ್ಟೆಯ ಖರ್ಚನ್ನು ಉಳಿಸುವುದಕ್ಕಾಗಿ ಬೆತ್ತಲೆ ಮದುವೆಯಾಗುತ್ತೇವೆ, ಹಾಗು ಫರ್ಸ್ಟ್ ನೈಟ್ ಫೇಸ್ಬುಕ್ ಲೈವ್ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಳು.

ಡ್ರಾಮಾ ಕ್ವೀನ್ ಎಂದೇ ಹೆಸರು ಪಡೆದಿರುವ ರಾಖಿ ಸಾವಂತ್ ಮದುವೆ ಮುರಿದು ಬಿದ್ದಿದ್ದು, ಮದುವೆಯಾಗುತ್ತೇನೆ ಎಂದು ಹೇಳಿ ಭಾವಿ ಪತಿ ದೀಪಕ್ ಲಾಲ್ ನಿಂದ ಪಡೆದಿದ್ದ ಒಂದು ಕೋಟಿ ರೂ. ಹಣವನ್ನು ಹಿಂದಿರುಗಿಸುವುದಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಮದುವೆ ಮುರಿದು ಬಿದ್ದ ಕುರಿತು ರಾಖಿ ಸಾವಂತ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು, ವಿಡಿಯೋದಲ್ಲಿ ದೀಪಕ್ ಕಲಾಲ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಗೈದಿದ್ದಾರೆ.

ಈ ಹಿಂದೆ ರಾಖಿ ಸಾವಂತ್ ತಿಳಿಸಿದಂತೆ ಡಿಸೆಂಬರ್ 31 ರಂದು ಮದುವೆ ಕಾರ್ಯಕ್ರಮ ನಡೆಯಬೇಕಿತ್ತು. ಅಂದಹಾಗೆ ರಾಖಿ ಮದುವೆಯ ನಾಟಕ ಆಡುತ್ತಿರುವುದು ಇದೆ ಮೊದಲೇನಲ್ಲ ಈ ಹಿಂದೆಯೂ ಕೂಡ ತಾನು ಮದುವೆಯಾಗುತ್ತಿರುವುದಾಗಿ ಹೇಳಿ ಅಂತಿಮ ಕ್ಷಣದಲ್ಲಿ ಕೈ ಕೊಟ್ಟಿದ್ದಳು.

 

 

 


 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top