ಮನೋರಂಜನೆ

ಕೆಜಿಎಫ್​ ಸಿನಿಮಾದ ಎರಡನೇ ಟ್ರೈಲರ್ ನಲ್ಲಿ ‘ವಿಲನ್’ ಎಂದು ಭರ್ಜರಿ ಡೈಲಾಗ್ ಹೊಡೆದ ಈ ಬಾಲಕ ಯಾರು ಗೊತ್ತಾ?

ಬುಧವಾರ ರಿಲೀಸ್ ಆದ ಕೆಜಿಎಫ್ ನ ಎರಡನೇ ಟ್ರೈಲರ್ ಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು. ಸಿನಿಮಾದ ಮೇಲಿರುವ ನೀರಿಕ್ಷೆಯನ್ನು ಈ ಟ್ರೈಲರ್ ಇನ್ನಷ್ಟು ಹೆಚ್ಚಿಸಿದೆ. ಚಿತ್ರ ರಸಿಕರಂತೂ ಕೆಜಿಎಫ್ ಎರಡನೇ ಟ್ರೈಲರ್ ಗೆ ಫಿದಾ ಆಗಿದ್ದು. ಸಿನಿಮಾದ ಬಿಡುಗಡೆಗಾಗಿ ಸಿನಿ ರಸಿಕರು ಕಾತರದಿಂದ ಕಾಯುತ್ತಿದ್ದಾರೆ.

ಸುಮಾರು ಎರಡು ನಿಮಿಷ ಇರುವ ಟ್ರೈಲರ್ ನಲ್ಲಿ ಬರುವ ಡೈಲಾಗ್ ಗಳು, ಮ್ಯೂಸಿಕ್ ನ ಬಿಜಿಎಂ ಗಳು , ಯಶ್ ನ ಲುಕ್, ಡೈರೆಕ್ಷನ್, ಆಕ್ಷನ್ ಸೀಕ್ವೆನ್ಸ್ , ಸಿನಿಮಾಟೋಗ್ರಫಿ ಎಲ್ಲರ ಮೆಚ್ಚುಗೆ ಗಳಿಸಿದ್ದು. ಸ್ಯಾಂಡಲ್ ವುಡ್ ಕಡೆ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ.

ಈ ನಡುವಲ್ಲೇ ಟ್ರೈಲರ್ ನಲ್ಲಿ ಒಂದು ಖಡಕ್ ಡೈಲಾಗ್ ಇದ್ದು ಆ ಡೈಲಾಗ್ ಹೇಳಿರುವ ಬಾಲಕ ಈಗ ಎಲ್ಲರ ಫೇವರಿಟ್ ಆಗಿ ಹೋಗಿದ್ದಾನೆ. ಹೌದು ಆ ಕೆಜಿಎಫ್ ಟ್ರೈಲರ್ 2 ರಲ್ಲಿ ಒಬ್ಬ ಬಾಲಕ “ಎಲ್ಲ ಸಿನಿಮಾಗಳಲ್ಲಿ ಒಬ್ಬ ಇರ್ತಾನಲ್ಲ, ನಿನ್ನನ್ನು ನೋಡಿದ್ರೆ ಹಾಗೆ ಅನ್ಸುತ್ತೆ..ಯಾರು ನೀನು ಹೀರೋ ನಾ..?” ಎಂದು ಯಶ್ ರವರಿಗೆ ಕೇಳುತ್ತಾನೆ ಆದಕ್ಕೆ ಉತ್ತರಿಸುವ ಇನ್ನೊಬ್ಬ ಬಾಲಕ “ಹೀರೊ ಅಲ್ಲಾ ವಿಲನ್” ಎಂದು ಕಡ್ಡಿ ತುಂಡು ಮಾಡುವಂತೆ ಡೈಲಾಗ್ ಹೊಡೆದಿದ್ದಾನೆ. “ಹೀರೋ ಅಲ್ಲಾ ವಿಲನ್” ಎಂದು ಭರ್ಜರಿ ಡೈಲಾಗ್ ಹೊಡೆದ ಈ ಬಾಲಕನ ಡೈಲಾಗ್ ಡೆಲಿವರಿ ಗೆ ಪ್ರೇಕ್ಷಕ ವರ್ಗ ಕ್ಲೀನ್ ಬೋಲ್ಡ್ ಆಗಿದ್ದು ಹಾಗಾದರೆ ಈ ಟ್ರೈಲರ್ ನಲ್ಲಿ ಬರುವ ಆ ಬಾಲಕ ಯಾರು?ಅವನ ಹೆಸರು ಏನು ಅನ್ನೋ ಪ್ರಶ್ನೆಗೆ ಸಾಮಾಜಿಕ ಜಾಲತಾಣಗಲ್ಲಿ ಹುಡುಕಾಟ ನಡೆಸುತ್ತಿದ್ದಾರಂತೆ.

ಹಾಗಾದರೆ ಆ ಬಾಲಕ ಯಾರು ಅಂತೀರಾ ?

ಭರ್ಜರಿ ಡೈಲಾಗ್ ಹೊಡೆದಿರುವ ಈ ಬಾಲಕನ ಹೆಸರು ರಿತ್ವಿಕ್ ಗೌಡ. ಈತ ಸದ್ಯ ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಪಬ್ಲಿಕ್ ಸ್ಕೂಲ್​ನಲ್ಲಿ ನಾಲ್ಕನೇ ತರಗತಿ ಓದುತ್ತಿದ್ದು. ಕೆಜಿಎಫ್ ಈತನಿಗೆ ಮೊದಲ ಸಿನಿಮಾ. ಕೆಜಿಎಫ್​ ಆಡಿಷನ್​ನಲ್ಲಿ ಐನೂರಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸಿದ್ದರು, ಆದರೆ ಕೊನೆಗೆ 20 ಮಕ್ಕಳು ಮಾತ್ರ ನಟನೆಯ ಅವಕಾಶ ಗಿಟ್ಟಿಸಿಕೊಂಡಿದ್ದರು, ಆ 20 ಮಕ್ಕಳಲ್ಲಿ ರಿತ್ವಿಕ್ ಗೌಡ ಸಹ ಒಬ್ಬ. ಒಟ್ಟಿನಲ್ಲಿ ತನ್ನ ವಿಭಿನ್ನ ಮ್ಯಾನರಿಸಂ ನಿಂದ ಸಿನಿಮಾದ ಟ್ರೈಲರ್ ನಲ್ಲೆ ಜನರಿಂದ ಶಿಳ್ಳೆ ಗಿಟ್ಟಿಸಿಕೊಂಡಿರುವ ಈತ ಸಿನಿಮಾ ಬಿಡುಗಡೆಯಾದ ಬಳಿಕ ತನ್ನ ನಟನೆಯಿಂದ ಇನ್ನು ಯಾವ ರೀತಿ ಸದ್ದು ಮಾಡುತ್ತಾನೋ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top