ಸಮಾಚಾರ

‘ಪೈಲ್ವಾನ್’ ಪೋಸ್ಟರ್ ನಕಲಿ ಎಂದವರ ಬಾಯಿ ಮುಚ್ಚಿಸಿದ ‘ಬಾದ್‌ಷಾ’.

ಸುದೀಪ್ ನಟಿಸಿರೋ ‘ಪೈಲ್ವಾನ್’ ಸಿನಿಮಾದ ಲುಕ್ಕೊಂದು ಇತ್ತೀಚಿಗಷ್ಟೇ ರಿಲೀಸ್ ಆಗಿತ್ತು. ಹೊಸಾ ಲುಕ್ ನಲ್ಲಿ ಸುದೀಪ್ ದೇಹದಾರ್ಢ್ಯ ಕಂಡು ಅಭಿಮಾನಿಗಳೆಲ್ಲ ಥ್ರಿಲ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಸುದೀಪ್ ತಮ್ಮ ದೇಹವನ್ನು ಸಜ್ಜುಗೊಳಿಸಿಕೊಂಡಿದ್ದಾರೆಂಬ ಸುದ್ದಿಯಾಗಿತ್ತಲ್ಲಾ? ಅದರ ಅಸಲೀ ಖದರ್ ಏನೆಂಬುದು ಈಗ ಬಿಡುಗಡೆಯಾಗಿರೋ ಲುಕ್ ನಲ್ಲಿ ಜಾಹೀರಾಗಿತ್ತು.. ಆದರೆ ಈ ಪೋಸ್ಟರ್ ನೋಡಿ ಕೆಲವರು ಇದು ಸುದೀಪ್ ಅವರ ಫೇಕ್ ಫೋಟೋ ಎಂದು ಹೇಳಲು ಶುರು ಮಾಡಿದ್ದರು.

ನಂತರ ಈ ಕಮೆಂಟುಗಳನ್ನು ನೋಡಿ ಎಚ್ಚೆತ್ತುಕೊಂಡ ನಿರ್ದೇಶಕ ಕೃಷ್ಣಾ ಸುದೀಪ್​ ಮೊದಲು ಹೇಗಿದ್ದರು. ಈ ಚಿತ್ರಕ್ಕಾ​ಗಾಗಿ ಹೇಗೆ ದೇಹ ದಂಡಿಸಿ ಫಿಟ್ ಆದರು ಎಂಬುದನ್ನು ಫೋಟೋಗಳ ಸಮೇತ ಟ್ವೀಟ್​​ ಮಾಡಿದ್ರು.. ಮೊದಲ ಫೋಟೋದಲ್ಲಿ ಸುದೀಪ್​ಗೆ ಕೊಂಚ ಹೊಟ್ಟೆ ಇತ್ತು. ನಂತರ ವರ್ಕೌಟ್​ ಮಾಡಿ ಆ ಹೊಟ್ಟೆ ಕರಗಿಸಿದ್ದಾರೆ ಎಂಬುದು ಈ ಫೋಟೋ ಮೂಲಕ ಸಾಬೀತು ಮಾಡಿದ್ರು.. ಹೇಗಿದ್ದರೂ ಕೆಲ ಕಿಡಿಗೇಡಿಗಳು ಕಿಚ್ಚನ ದೇಹವನ್ನು ಗೇಲಿ ಮಾಡುತ್ತಲೇ ಇದ್ದರು. ಇದೀಗ ಅಂಥಾ ಅಪಾಪೋಲಿಗಳಿಗೆಲ್ಲಾ ಮತ್ತೊಂದು ಏನೇನು ಎಡಿಟ್ ಮಾಡಿರದ ಕಚ್ಛಾ ಫೋಟೋ ಮೂಲಕ ಮುಖಕ್ಕೆ ಹೊಡೆದಹಾಗೆ ಉತ್ತರಿಸಿದ್ದಾರೆ.

 

 

ಚಿತ್ರ ನಿರ್ದೇಶಕ ಕೃಷ್ಣ ಅವರು ಸುದೀಪ್ ಅವರ ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ಸುದೀಪ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಹಿಮ್ಮುಖವಾಗಿ ನಿಂತು ಉಕ್ಕಿನಂತಹ ದೇಹವನ್ನು ಪ್ರದರ್ಶಿಸಿದ್ದಾರೆ. ಕೃಷ್ಣ ಅವರು ಹಂಚಿಕೊಂಡಿರೋ ಫೋಟೋ ಹಿಂದೆ ಮೂಗುಮುರಿದವರಿಗೆ ಟಾಂಗ್ ಕೊಟ್ಟಂತಾಗಿದೆ.

ಅದೇನೇ ಇರಲಿ ಜಿಮ್ ಎಂದರೇನೇ ಮೈಲಿ ದೂರ ಓಡುತ್ತಿದ್ದ ಕಿಚ್ಚ ಸುದೀಪ್ ಈಗ ಚಿತ್ರವೊಂದರ ಪಾತ್ರಕ್ಕಾಗಿ ಇಷ್ಟವಿಲ್ಲದಿದ್ದರೂ ಶ್ರದ್ದೆಯಿಂದ ಜಿಮ್ ನಲ್ಲಿ ಬೆವರಿಳಿಸಿ ಫಿಟ್ ಆಗಿರುವುದು ಎಂತವರಿಗೂ ಸ್ಪೂರ್ತಿದಾಯಕವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top