fbpx
ದೇವರು

ಇಂದಿನಿಂದ ಧನುರ್ಮಾಸ ಪ್ರಾರಂಭ,ಈ ಮಾಸದ ಶ್ರೇಷ್ಠತೆ ಏನು,ಈ ಮಾಸವನ್ನು ಹೇಗೆ ಆಚರಣೆ ಮಾಡಿದ್ರೆ ಶುಭ ಫಲಗಳು ಲಭಿಸುತ್ತವೆ ಗೊತ್ತಾ

ಧನುರ್ಮಾಸ ಶ್ರೇಷ್ಠ ಎಂದು ಹೇಳಲಾಗುತ್ತದೆ. ಇಂದಿನಿಂದ ಮೂಲ ನಕ್ಷತ್ರದಲ್ಲಿ ಧನುರ್ಮಾಸ ಪ್ರಾರಂಭವಾಗಿದೆ. ಇದನ್ನು ಹೇಗೆ ಆಚರಣೆ ಮಾಡಬೇಕು ? ಯಾವೆಲ್ಲಾ ಶುಭ ಫಲಗಳು ಲಭಿಸುತ್ತವೆ ?
ಮೂಲ ನಕ್ಷತ್ರದಲ್ಲಿ ಧನುರ್ಮಾಸ ಪ್ರಾರಂಭವಾಗಿದೆ. ಇದರಿಂದ ಶುಭವಾಗುತ್ತದೆಯೋ ಅಥವಾ ಅಶುಭವಾಗುತ್ತದೆಯೋ ? ಎನ್ನುವ ಗೊಂದಲ ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುತ್ತದೆ. ಬನ್ನಿ ಇದರ ಬಗ್ಗೆ ತಿಳಿದುಕೊಳ್ಳೋಣ.
ಇದು ಚಾಂದ್ರಮಾನದ ಧನುರ್ಮಾಸ ಆರಂಭವಾಗಿದೆ.ಈ ಧನುರ್ಮಾಸದಲ್ಲಿ ಪೂಜೆ ಪುನಸ್ಕಾರಗಳು ಪ್ರಾರಂಭವಾಗುತ್ತವೆ. ಈಗ ಚಾಂದ್ರಮಾನದ ಪ್ರಯುಕ್ತವಾಗಿ ಮಾರ್ಗಶಿರ ಮಾಸದಲ್ಲಿ ಧನುರ್ಮಾಸ ಪ್ರಾರಂಭವಾಗಿದೆ. ಚಂದ್ರನ ಚಲನೆಯ ಪ್ರಕಾರ ಒಂದೊಂದು ರಾಶಿಗೆ ಒಂದೊಂದು ಹೆಸರನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೊಟ್ಟಿದ್ದಾರೆ.ಈ ಆಧಾರದ ಮೇಲೆ ಈಗ ಮಾರ್ಗಶಿರ ಮಾಸದಲ್ಲಿ ಧನುರ್ಮಾಸ ಪ್ರಾರಂಭವಾಗಿದೆ. ಅಂದರೆ “ಚಾಂದ್ರಮಾನ ಧನುರ್ಮಾಸ” ಎಂದು ನಾವು ಕರೆಯುತ್ತೇವೆ.

 

 

 

ಎಲ್ಲರೂ ಕೂಡ ಈ ಮಾಸದಲ್ಲಿ ಪೂಜೆಗಳನ್ನು ಮಾಡಬೇಕು. ಯಾಕೆಂದರೆ ಧನುರ್ಮಾಸ ತುಂಬಾ ಶ್ರೇಷ್ಠ. 12 ರಾಶಿಗಳಲ್ಲಿ ಧರ್ಮ ಕ್ಷೇತ್ರವಾಗಿರುವ ಧನುರ್ಮಾಸ ಅಂದರೆ ಕಾಲಪುರುಷನ ಅಂಗವಾಗಿ ಧರ್ಮ ಕ್ಷೇತ್ರವಾಗಿರುವುದು ಆದ್ದರಿಂದ ಧರ್ಮ ನೆಲೆಸಬೇಕು. ಧರ್ಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕು, ದೈವಾರಾಧನೆ ನಡೆಯಬೇಕು ಎನ್ನುವುದು ಹೆಚ್ಚು ಚಾಲ್ತಿಯಲ್ಲಿದೆ.ಈ ಸಂದರ್ಭದಲ್ಲಿ ಮಾಡುವ ಪೂಜೆ ಪುನಸ್ಕಾರಗಳಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿಯೂ ಸಹ ಇದೆ. ಯಾಕೆಂದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ಅಥವಾ ಇನ್ನೂ ಕೆಲವರು ಗೊತ್ತಿದ್ದೂ ಮಾಡುವ ತಪ್ಪುಗಳು ಕೂಡ ಸಾಕಷ್ಟು ಇವೆ. ಅವೆಲ್ಲವನ್ನೂ ನಿವಾರಣೆ ಮಾಡಿಕೊಳ್ಳುವುದಕ್ಕೆ ಧನುರ್ಮಾಸದಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಬೇಕು. ನಿಮ್ಮ ಇಷ್ಟದೇವತೆಯ ಯಾರಾದರೂ ಆಗಿರಬಹುದು.

ಈ ಮಾಸದಲ್ಲಿ ಇದೇ ದೇವರನ್ನು ಪೂಜೆ ಮಾಡಬೇಕು ಎಂದು ಯಾವ ಧೋರಣೆಯೂ ಇಲ್ಲ. ನಿಮ್ಮ ಮನೆ ದೇವರ ಆಗಿರಬಹುದು ಅಥವಾ ನಿಮ್ಮ ಇಷ್ಟದೇವರ ಆಗಿರಬಹುದು. ಗಣಪತಿ , ದೇವಿ, ಆಂಜನೇಯ, ಭಗವತಿ, ಶಿವ, ವಿಷ್ಣು, ವೆಂಕಟೇಶ್ವರ ನಿಮಗೆ ಯಾವ ದೇವರು ಇಷ್ಟವೋ ಆ ದೇವರನ್ನು ಪೂಜೆ ಮಾಡಿ ಯಾವುದೇ ಪೂಜೆಯನ್ನು ಮಾಡುವುದಾದರೂ ಕೂಡ. ಈ ಧನುರ್ಮಾಸದಲ್ಲಿ ಮಾತ್ರ ಬೆಳಗ್ಗೆ ಸೂರ್ಯ ಉದಯ ಆಗುವುದರ ಒಳಗೆ ದೀಪ ಹಚ್ಚಿ ದೀಪಾರಾಧನೆ ಏನು ಮಾಡಬೇಕು.

ಸೂರ್ಯ ಉದಯ ಆಗುವುದರೊಳಗೆ ನೀವು ಸ್ವಚ್ಛವಾಗಿ, ಶುಚಿರ್ಭೂತರಾಗಿ ಮನೆಯನ್ನು ಕೂಡ ಸ್ವಚ್ಛಗೊಳಿಸಿ ದೀಪವನ್ನು ಹಚ್ಚಿ, ಪೂಜೆ ಮಾಡಬೇಕು ನಂತರ ದೇವಾಲಯಗಳಿಗೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಬೇಕು.
ಈ ಧನುರ್ಮಾಸದಲ್ಲಿ ದಾನವನ್ನು ಮಾಡಬೇಕು. ಈ ಮಾಸದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವ ಇದೆ. ಆದ್ದರಿಂದ ಧನುರ್ಮಾಸದಲ್ಲಿ ಯಾವುದಾದರೂ ಒಂದು ದಿನ ಪ್ರಸಾದವನ್ನು ಮಾಡಿ ಅದನ್ನು ದಾನವಾಗಿ ಅಥವಾ ಪ್ರಸಾದವಾಗಿ ಹಂಚುತ್ತಾರೆ. ದೇವಾಲಯದಲ್ಲಿ ದೇವರಿಗೆ ನೈವೇದ್ಯವನ್ನು ಮಾಡಿ ಪ್ರಸಾದವಾಗಿ ಹಂಚಬೇಕು.ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ತಗ್ಗುತ್ತವೆ ಮತ್ತು ಆರ್ಥಿಕವಾಗಿಯೂ ಕೂಡ ಅಭಿವೃದ್ಧಿಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top