fbpx
ದೇವರು

ಧನುರ್ಮಾಸದಲ್ಲಿ ಜನಿಸಿದವರು ಈ ತಿಂಗಳಿನಿಂದ ಧನುರ್ಮಾಸ ಮುಗಿಯುವವರೆಗೂ ಈ ವ್ರತಾಚರಣೆಗಳನ್ನು ಮಾಡಿದರೆ ನಿಮ್ಮ ಎಲ್ಲ ಕಷ್ಟಗಳು ತೀರುತ್ತವೆ

ಧನುರ್ಮಾಸದಲ್ಲಿ ಜನಿಸಿದವರು ಧನುರ್ಮಾಸದ ವ್ರತಾಚರಣೆಯನ್ನು ಮಾಡಿದರೆ ಎಲ್ಲವೂ ಶುಭವಾಗುವುದು.
ಧನುರ್ಮಾಸ ಎಂದರೆ ಅಧಿಕವಾಗಿ ಶೀತದ ವಾತಾವರಣವಿರುವ ಮಾಸವಾಗಿದ್ದು, ಮೈ ನಡುಗುವಷ್ಟು ಚಳಿಯನ್ನು  ಈ ಮಾಸ ಉಂಟು ಮಾಡುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶಿಸಿದ ನಂತರ ಆ ಮಾಸವನ್ನು ಧನುರ್ ಮಾಸವೆಂದು ಕರೆಯಲಾಗುತ್ತದೆ.

 

ಈ ಮಾಸದಲ್ಲಿ ಸೂರ್ಯನು ಸಂಪೂರ್ಣ ಒಂದು ತಿಂಗಳುಗಳ  ಕಾಲ ಧನುಸ್ಸು ರಾಶಿಯಲ್ಲಿ ಇರುತ್ತಾನೆ .  ಅದರಲ್ಲೂ ಈ ಡಿಸೆಂಬರ್ 2017 ರಲ್ಲಿ  ಈ ತಿಂಗಳಿನಲ್ಲಿ ಶನಿಯು ಈಗಾಗಲೇ ಧನಸ್ಸು ರಾಶಿಯಲ್ಲಿ ಸ್ಥಿತನಿದ್ದು , ಇದರ ಜೊತೆಗೆ ಸೂರ್ಯನು ಕೂಡ ಜೊತೆಯಾಗಿ ಧನಸ್ಸು ರಾಶಿಯಲ್ಲಿ ಇರುತ್ತಾನೆ. ಇದರಿಂದ ಸೂರ್ಯ ಮತ್ತು ಶನಿ (ತಂದೆ ಮತ್ತು ಮಗ ) ವೈರಿಗಳು. ಈ ಧನುರ್ಮಾಸದಲ್ಲಿ ಭಗವಂತನಾದ ಶ್ರೀ  ವಿಷ್ಣುವಿನ ಆರಾಧನೆಗೆ ವಿಶೇಷವಾದ ಮಹತ್ವವಿದೆ. ಈ ಮಾಸದಲ್ಲಿ  ಯಾವುದೇ ರೀತಿಯ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ.ಭಗವದ್ಗೀತೆಯಲ್ಲಿ ಕೃಷ್ಣನು  ಮಾಸಗಳ ಕುರಿತು ಹೇಳುವಾಗ ಧನುರ್ಮಾಸದ ಮಹತ್ವದ ಬಗ್ಗೆ ಮಾಸದಲ್ಲಿಯೇ ಬಹಳ ಅತ್ಯಂತ ಶ್ರೇಷ್ಠವಾದದ್ದು ಧನುರ್ಮಾಸ ಎಂದು ಹೇಳಿದ್ದಾನೆ.

ಧನುರ್ಮಾಸದ ಫಲ.
ಈ  ಮಾಸದಲ್ಲಿ ಜನಿಸಿದ ವ್ಯಕ್ತಿಗಳ ಜಾತಕದಲ್ಲಿ ಸೂರ್ಯ  ಗ್ರಹವು  ಧನುಸ್ಸು ರಾಶಿಯಲ್ಲಿ ಸಂಚರಿಸುತ್ತಾನೆ. ಧನುರ್ಮಾಸದಲ್ಲಿ ಜನಿಸಿದವರು  ವ್ರತಾಚರಣೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಹೊಂದುತ್ತಾರೆ. ಯಾರ ಜಾತಕದಲ್ಲಿ ಸೂರ್ಯ  ಮತ್ತು ಗುರು ಗ್ರಹ ಒಟ್ಟಿಗೇ ಇರುತ್ತಾರೋ, ಅವರು ಧನುರ್ಮಾಸದ ಪೂಜೆಯನ್ನು ಮಾಡಬೇಕು. ಹೀಗೆ ಪೂಜೆ ಮಾಡುವುದರಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಗರ್ಭಿಣಿಯರು ಈ ವ್ರತವನ್ನು ಆಚರಿಸಿದರೆ ಉತ್ತಮ ಸಂತಾನವನ್ನು ಪಡೆಯುತ್ತಾರೆ.

 

 

 

ಒಮ್ಮೆ ಇಂದ್ರನು ರಾಜ್ಯ ಭ್ರಷ್ಟನಾದಾಗ ಶಚಿದೇವಿಯು  ಹುಗ್ಗಿಯ ನೈವೇದ್ಯ ಮಾಡಿ ಲಕ್ಷ್ಮೀ ದೇವಿಗೆ  ಹುಗ್ಗಿಯ ನೈವೇದ್ಯ ಅರ್ಪಿಸಿ, ದ್ವಾದಶ ನಾಮಗಳಿಂದ ಭಕ್ತಿ ಪೂರ್ವಕವಾಗಿ ಪೂಜಿಸಿದ್ದರಂತೆ. ಆದ್ದರಿಂದಲೇ ಇಂದ್ರನಿಗೆ  ರಾಜ್ಯವು  ಪ್ರಾಪ್ತಿಯಾಯಿತು ಎಂದು ಪುರಾಣಗಳು ಹೇಳುತ್ತವೆ.ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಸಮಯವಾಗಿದ್ದು, ಉತ್ತರಾಯಣವು ಹಗಲಿನ ಸಮಯ ಆದರೆ ಈ ಧನುರ್ಮಾಸ ಹಗಲು ರಾತ್ರಿ ಎರಡೂ ಸೇರಿರುವ ಸಮಯವೆಂದು ಹೇಳಲಾಗುತ್ತದೆ .

ಆರೋಗ್ಯ ಭಾಗ್ಯ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಗಾದೆ ಮಾತೊಂದು ಇದೆ. ಅಂತೆಯೇ ಧನುರ್ಮಾಸದಲ್ಲಿ ಕೊರೆವ ಚಳಿಯಲ್ಲೂ  ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು “ಉಷ್ಣಸ್ಯ  ಉಷ್ಣೆನ ಶೀತಲಾಂ”  ಎನ್ನುವಂತೆ ಕೊರೆವ ಚಳಿಗೆ ವಿರುದ್ಧವಾಗಿ ತಣ್ಣೀರಿನಿಂದ ಸ್ನಾನ ಮಾಡಬೇಕು. ನಂತರ ಮಡಿ ಬಟ್ಟೆಯನ್ನು ಧರಿಸಿ ದೇವರ ಪೂಜೆ ಮಾಡಬೇಕು.
ಭಗವಂತನಾದ  ಶ್ರೀಹರಿ ವಿಷ್ಣುವನ್ನು   ಪೂಜಿಸುವುದು ಮತ್ತು  ಆರಾಧಿಸುವುದು ಬಂದಿರುವ ಪದ್ಧತಿಯಾಗಿದೆ. ಈ ಮಾಸವು ಶ್ರೀ ನಾರಾಯಣನಿಗೆ ಬಹಳ ಪ್ರಿಯವಾದ ಮಾಸ ಎಂದೂ ಸಹ ಹೇಳಲಾಗಿದೆ.ಶ್ರೀ ಮಹಾವಿಷ್ಣುವಿನೊಂದಿಗೆ ಶ್ರೀ ಲಕ್ಷ್ಮೀ ದೇವಿಯನ್ನು ದ್ವಾದಶ ನಾಮದೊಂದಿಗೆ ಪೂಜಿಸಿ , ಪ್ರಾರ್ಥಿಸಿದರೆ ಅನಂತರ ಅತಿಶಯವಾದ ಸಂಪತ್ತು ಒದಗಿ ಬರುತ್ತದೆ. ದೇಹಕ್ಕೆ ತಂಪನ್ನು ನೀಡುವ ಮದ್ಗಳ ಧಾನ್ಯದಿಂದ ತಯಾರಾದ ಪೊಂಗಲ್ ನೈವೇದ್ಯವನ್ನು ಅರ್ಪಿಸಬೇಕು. ತಂಪಾಗಿರುವ ಶೀತಲ ವಾತಾವರಣ, ತಣ್ಣನೆಯ ನೀರು, ತಂಪನೆಯ ಆಹಾರ, ಆದರೂ ದೇಹಕ್ಕೆ ಇದು ಆರೋಗ್ಯವನ್ನು ನೀಡುತ್ತದೆ ಇದೆ ಅಲ್ಲವಾ ಆರೋಗ್ಯದ ಹಿಂದಿನ ಗುಟ್ಟು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top