ಸಮಾಚಾರ

ಸಿದ್ದಗಂಗಾ ಶ್ರೀಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ – ಶೀಘ್ರವೇ ಗುಣಮುಖರಾದ ನಡೆದಾಡುವ ದೇವರು

ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರನ್ನು ಶುಕ್ರವಾರ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ಹೆಲಿಕಾಪ್ಟರ್‌ನಲ್ಲಿ ಚೆನ್ನೈನ  ರೇಲಾ ಇನ್ಸ್ಟಿಟ್ಯೂಟ್ ಮತ್ತು ಮೆಡಿಕಲ್ ಸೆಂಟರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೂರಕವಾಗಿ ಇಂದು ಬೆಳಗ್ಗೆ ಸ್ವಾಮೀಜಿಯರಿಗೆ ಲಿವರ್ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿದ್ದು, ಯಶಸ್ವಿಯಾಗಿದೆ. ಡಾ. ಮೊಹಮ್ಮದ್ ರೇಲಾ ನೇತೃತ್ವದ ವೈದ್ಯರ ತಂಡ ಸ್ವಾಮೀಜಿಯವರಿಗೆ ಚಿಕಿತ್ಸೆ ನೀಡುತ್ತಿದ್ದು ಶಸ್ತ್ರಚಿಕಿತ್ಸೆಗೂ ಮೊದಲು ತಜ್ಞವೈದ್ಯರ ತಂಡ ಶ್ರೀಗಳಿಗೆ ನೀಡಲಿರುವ ಚಿಕಿತ್ಸೆ ಬಗ್ಗೆ ಸಮಾಲೋಚನೆ ನಡೆಸಿತ್ತು . ಶ್ರೀಗಳಿಗೆ ಪಿತ್ತನಾಳದಲ್ಲಿ ಸಮಸ್ಯೆಯಿದ್ದು, ಅದಕ್ಕೆ ಸಣ್ಣ ಶಸ್ತ್ರಚಿಕಿತ್ಸೆ ಅತ್ಯವಶ್ಯ ಎಂದು ವೈದ್ಯರ ತಂಡ ಹೇಳಿತ್ತು.

ಸುಮಾರು ಮೂರು ಗಂಟೆಗಳ ಕಾಲ ತಜ್ಞವೈದ್ಯರ ತಂಡ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಿತ್ತು. ಶಸ್ತ್ರಚಿಕಿತ್ಸೆ ಬಳಿಕ ಸಿದ್ದಗಂಗಾ ಶ್ರೀಗಳನ್ನು ಐಸಿಯುಗೆ ಸ್ಥಳಾಂತರಿಸಲಾಗಿದ್ದು, ಶ್ರೀಗಳು ಆರೋಗ್ಯವಾಗಿದ್ದಾರೆ. ಶ್ರೀಗಳು 8ರಿಂದ 10 ವಾರ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಹೇಳಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಸುತ್ತೂರ ಮಠದ ಶ್ರೀಗಳು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top