fbpx
ಭವಿಷ್ಯ

ಅಮಾವಾಸ್ಯೆಯ ದಿನ ಅಪ್ಪಿತಪ್ಪಿನ್ನು ಈ ಕೆಲಸಗಳನ್ನ ಮಾಡ್ಬೇಡಿ, ಮಾಡಿದ್ರೆ ಮನೆಗೆ ದಷ್ಟ ದರಿದ್ರಗಳು ಬರುತ್ತವೆ

ಅಮಾವಾಸ್ಯೆಯ ದಿನ ಯಾವ ಯಾವ ಕೆಲಸಗಳನ್ನು ಮಾಡಬಾರದು.ಅಮಾವಾಸ್ಯೆ ಎಂದರೆ ಚಂದ್ರ ಪೂರ್ಣವಾಗಿ  ಕತ್ತಲಿನಿಂದ  ಅವರಿಸಿರುತ್ತಾನೆ.ಚಂದ್ರ ಸಂಪೂರ್ಣವಾಗಿ ಕತ್ತಲಾಗಿರುವ ದಿನವೇ, ಚಂದ್ರನ ಬೆಳಕಿಲ್ಲದ ದಿನವೇ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.

ಅಮಾವಾಸ್ಯೆ ಪದದ ಅರ್ಥ ಏನು ?
ಅಮಾವಾಸ್ಯೆ ಎಂದರೆ ಅಮಾ ಎಂದರೆ ಆತ್ಮ ವಾಸ್ಯೆ ಎಂದರೆ ವಾಸ ಅಂದರೆ ಆತ್ಮಗಳು (ಪ್ರೇತಾತ್ಮ ,ಅತೃಪ್ತ ಆತ್ಮ) ವಾಸ ಮಾಡುವ ದಿನ ಎಂದರ್ಥ.ಕತ್ತಿಲಿನಲ್ಲಿ ಆತ್ಮಗಳ ವಾಸ ಅದರಲ್ಲೂ  ಕತ್ತಲಿರುವ ಕಾರಣ ಪ್ರೇತಾತ್ಮಗಳು ವಾಸ ಸಾಮಾನ್ಯವಾಗಿ ಅಧಿಕ ಶಕ್ತಿಯನ್ನು ಪಡೆದು ವಾಸಪಡುತ್ತವೆ.ಮತ್ತು ಇವುಗಳ ಪ್ರಭಾವ ಸಹ ಹೆಚ್ಚಾಗಿ ಇರುತ್ತದೆ.ಆದ್ದರಿಂದ ಈ ದಿನವೂ ಅಷ್ಟು ಒಳ್ಳೆಯದಲ್ಲ  ದುಷ್ಟ ಮತ್ತು ಕೆಟ್ಟ ಶಕ್ತಿಗಳ ಪ್ರಭಾವ  ಹೆಚ್ಚಾಗಿರುವ ಕಾರಣ ಈ   ದಿನವನ್ನು ಕೆಟ್ಟ ದಿನವೆಂದು ಸಹ ಪರಿಗಣಿಸಲಾಗಿದೆ. ಈ ಅಮಾವಾಸ್ಯೆಯ ದಿನವೇ ಅಪಘಾತಗಳು ಸಹ ಹೆಚ್ಚಾಗುತ್ತವೆ.

 

 

 

ಅಮಾವಾಸ್ಯೆಯ ದಿನದಂದು ಸೂರ್ಯೋ ಉದಯವಾದ  ನಂತರವೂ ಸಹ  ಮಲಗಿದರೆ ಅದು ಮನೆಗೆ ಒಳ್ಳೆಯದಲ್ಲ,ಅಮಾವಾಸ್ಯೆಯ ದಿನ ತಲೆಸ್ನಾನ ಮಾಡಬಾರದು.ಹಾಗೆ ಮಾಡುವುದು ಶುಭವಲ್ಲ.ಒಂದು ವೇಳೆ ನೀವು ಮಾಡಲೇಬೇಕು ಎಂದರೆ ಬರೀ ನೀರಿನಲ್ಲಿ ಮಾಡಬಹುದು.ಅಮಾವಾಸ್ಯೆಯ ದಿನ ಕೂದಲನ್ನು,ಉಗುರನ್ನು, ಕತ್ತರಿಸವುದು ತಪ್ಪು,ಕತ್ತರಿಸಬಾರದು  ಅದು ಒಳ್ಳೆಯದಲ್ಲ ಬದಲಾಗಿ ಬೇರೆ ದಿನ ಕತ್ತರಿಸಿದರೆ ಒಳ್ಳೆಯದು.ತಲೆಗೆ ಮತ್ತು ಕೂದಲಿಗೆ ಎಣ್ಣೆಯನ್ನು ಸಹ ಹಚ್ಚಬಾರದು.ಅಮಾವಾಸ್ಯೆಯ ದಿನ ಹೊಸ ಬಟ್ಟೆಯನ್ನು ಖರೀದಿಸುವುದು ,ಖರೀದಿಸಿ  ಧರಿಸುವುದು,ಹೊಸ ವಾಹನ ಖರೀದಿಸುವುದು ಒಳ್ಳೆಯದಲ್ಲ.

ಅಮಾವಾಸ್ಯೆಯ ದಿನ ರಾತ್ರಿಯ ಸಮಯದಲ್ಲಿ ಅನ್ನವನ್ನು ತ್ಯಜಿಸಿ,ಫಲಹಾರವನ್ನು ಸೇವಿಸಬೇಕು.ಹೀಗೆ ಮಾಡಿದರೆ ಒಳ್ಳೆಯದು.ಅಮಾವಾಸ್ಯೆಯ ದಿನ ಮಧ್ಯಾಹ್ನದ ಸಮಯದಲ್ಲಿ ಮಲಗಬಾರದು. ಹಾಗೆ ಮಲಗಿದರೆ ಅದು ಅಶುಭ.
ಅಮಾವಾಸ್ಯೆಯ ದಿನ ನಮ್ಮ ಪಿತೃಗಳನ್ನು ಸ್ಮರಿಸಿದರೆ ಒಳ್ಳೆಯದು. ಆ ದಿನ ಬೆಳಗಿನ ಸಮಯದಲ್ಲಿ ಮನೆಯ ಮುಂದೆ ರಂಗೋಲಿ ಹಾಕಬಾರದು ಬದಲಾಗಿ ಸಂಜೆಯ ಸಮಯದಲ್ಲಿ ರಂಗೋಲಿ ಹಾಕಬೇಕು.ಅಮಾವಾಸ್ಯೆಯ ದಿನ ಸಂಜೆ ಗೋಧೂಳಿ ಸಮಯದಲ್ಲಿ ತಪ್ಪದೇ ದೀಪ ಹಚ್ಚಿ  ಲಕ್ಷ್ಮೀ ದೇವಿಗೆ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಬೇಕು.ಇಲ್ಲವಾದರೆ ಅದು ಅಶುಭದ ಸಂಕೇತ ಎಂದು ಪರಿಗಣಿಸಲಾಗಿದೆ.ಅಮಾವಾಸ್ಯೆಯ ದಿನ ಯಾವುದೇ ಬಗೆಯ ಶುಭ  ಕಾರ್ಯಗಳು,ಹೊಸದಾಗಿ ಪ್ರಾರಂಭಿಸುವ ಕೆಲಸಗಳನ್ನು ಮಾಡಬಾರದು ಅಂತಹ ಹೊಸದಾಗಿ ಮಾಡುವ ಕೆಲಸವನ್ನು  ಮುಂದೂಡಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top