ಭವಿಷ್ಯ

ಈ 5 ರಾಶಿಗಳಲ್ಲಿ ಹುಟ್ಟಿರೋರು ಚಾಣಕ್ಯನ ತರ ಬುದ್ದಿವಂತ್ರು ಅನ್ನುತ್ತೆ ಅವ್ರ ಜಾತಕ

ಈ 5 ರಾಶಿಗಳಲ್ಲಿ ಜನಿಸಿದವರಿಗೆ  ಚಾಣಕ್ಯನ ಚಾಕಚಕ್ಯತೆ  ಇರುತ್ತದೆ.

ಪ್ರಭಲ ರಾಶಿಗಳಲ್ಲಿ ಹುಟ್ಟಿರುವುದೇ ಕೆಲವರಿಗೆ  ವರದಾನವಾಗಿ ಪರಿಣಮಿಸುತ್ತದೆ.ಅದರಲ್ಲಿಯೂ ಐದು  ವಿಶೇಷ ರಾಶಿಗಳು ಅತಿ ಹೆಚ್ಚು ಪ್ರಭಲವೆಂದು ಪರಿಗಣಿಸಲಾಗಿದೆ.ಇಂದು ಈ ರಾಶಿಯ ವ್ಯಕ್ತಿಗಳ ಲಕ್ಷಣಗಳ ಬಗ್ಗೆ ವಿವರಿಸಲಾಗಿದ್ದು ಇವುಗಳಲ್ಲಿ ನಿಮ್ಮ ಜನ್ಮರಾಶಿ ಇದೆಯೇ ? ಇದ್ದರೆ ವಿವರಿಸಲಾಗಿರುವ ಮಾಹಿತಿ ಎಷ್ಟರ ಮಟ್ಟಿಗೆ ನಿಮಗೆ ಅನ್ವಯಿಸುತ್ತದೆ ಎಂಬುದನ್ನು ಹೋಲಿಸಿ ನೋಡಲು ಒಂದು ಉತ್ತಮ ಅವಕಾಶವಾಗಿದೆ.

 

ಮೇಷ ರಾಶಿ:ಈ ವ್ಯಕ್ತಿಗಳು ಸಾಮಾನ್ಯವಾಗಿ ಧೈರ್ಯಶಾಲಿಗಳು. ಜೀವನದಲ್ಲಿ ದೊಡ್ಡ ಹಂತವನ್ನು ಏರಲು ಶಕ್ತರಾಗಿರುತ್ತಾರೆ.ಜೀವನದಲ್ಲಿ ಹೆಚ್ಚು ಹೆಚ್ಚು ಸಾಧಿಸಲು ಇವರು ಒಂದು ಹೆಜ್ಜೆ ಮುಂದೆ ಹೋಗಲು ಉತ್ಸುಕರಾಗಿರುತ್ತಾರೆ. ಈ ವ್ಯಕ್ತಿಗಳನ್ನು ಉಳಿದವರಿಗಿಂತ ಭಿನ್ನವಾಗಿರುತ್ತಾರೆ ಆದರೆ ತದ್ವಿರುದ್ಧವಾಗಿ ತಮ್ಮ ನಿಲುವಿಗೆ ಹೆಚ್ಚು ಬದ್ಧರಾಗಿರುವ ಇವರು ಹೆಚ್ಚು ಹಠಮಾರಿಗಳು ಸಹ ಆಗಿರುತ್ತಾರೆ.

ಕಟಕ ರಾಶಿ:ಈ ರಾಶಿಯ ವ್ಯಕ್ತಿಗಳು ಪ್ರಬಲವಾಗಿದ್ದು ವಿಶೇಷವಾಗಿ ಉತ್ತಮ ಪ್ರೇಮಿಗಳು.ಬೇರೆಯವರ ಬಗ್ಗೆ ಕಾಳಜಿ ವಹಿಸುವವರು ಸಹ ಆಗಿರುತ್ತಾರೆ.ಇವರು ಸದಾ ಮುನ್ನುಗುವ ವ್ಯಕ್ತಿತ್ವದವರಾಗಿದ್ದು ಇದಕ್ಕಾಗಿ ಇವರ ಕೊರತೆಗಳು ಎಂದಿಗೂ ಅಡ್ಡಿಯಾಗುವುದಿಲ್ಲ.ಇವರು ತಮ್ಮ ಗುರಿಯುತ್ತಾ ಹೆಚ್ಚು ಗಮನ ಹರಿಸುವವರಾಗಿದ್ದು.ತಾವು ಕಾಳಜಿ ವಹಿಸುವ ವ್ಯಕ್ತಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ತಾವು ಸಾಧಿಸಬಹುದಾದ ಗುರಿಗಳನ್ನೇ ಹಿಂಬಾಲಿಸಿ ಹೋಗುವ ಇವರು ತಮಗೆ ತಾವೇ ಪ್ರೇರೇಪಿಸಿಕೊಳ್ಳುವ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ.

 

 

 

ಸಿಂಹ ರಾಶಿ:ಈ ರಾಶಿ ಫಲ ಅತ್ಯಂತ ಪ್ರಮುಖವಾಗಿದೆ.ಈ ವ್ಯಕ್ತಿಗಳು ಜನ್ಮತಃ ನಾಯಕತ್ವದ ಗುಣಗಳನ್ನು ಪಡೆದು ಬಂದಿದ್ದು ಕೆಲವು ವಿಷಯಗಳನ್ನು ಸ್ವತಃ ಪ್ರಾರಂಭಿಸುವರು.ಇವರು ತಮ್ಮ ಕೆಲಸವನ್ನು ಸಾಧಿಸಲು ಪ್ರತಿಬಾರಿಯೂ ತಮಗೆ ತಾವೇ ಪ್ರೇರೇಪಿಸಿಕೊಳ್ಳುವರು. ಇವರಿಗೆ ಸಿದ್ಧಿಸಿದ ವಿಶೇಷ ಕೌಶಲ್ಯತೆಯ ಪರಿಣಾಮವಾಗಿ ಇವರು ತಮ್ಮ  ಸುತ್ತಲೂ ಇರುವವರ ಮನೋಭಾವವನ್ನು ತಮಗೆ ಅನುಕೂಲವಾಗುವಂತೆ ಬದಲಿಸಿ ಕೊಳ್ಳುತ್ತಾರೆ. ವಿಶೇಷವಾಗಿ ಇವರ ವಾಕ್ಚಾತುರ್ಯ ಇವರ  ಒಂದು ಋಣಾತ್ಮಕ ಶಕ್ತಿ ಎಂದರೆ ಈ ಗುಣದಿಂದ ಇವರಿಗೆ ಲಭಿಸಿರುವ ಅಹಂಕಾರವಾಗಿದೆ.

ವೃಶ್ಚಿಕ ರಾಶಿ:ಈ ರಾಶಿಯ  ವ್ಯಕ್ತಿಗಳು ತಮ್ಮ ವೃತ್ತಿ ವಲಯದಲ್ಲಿ ಪ್ರಚಂಡರಾಗಿರುತ್ತಾರೆ. ಇವರಿಗೆ ತಮ್ಮ ಕನಸನ್ನು ನನಸಾಗಿಸಲು ಈ ಪ್ರಚಂಡಂತೆ ನೆರವಾಗುತ್ತದೆ.ತಮ್ಮ ಕೆಲಸ ಸಾಧಿಸಲು ಇವರು ಸತತವಾಗಿ  ಕಠಿಣ ಪ್ರಯತ್ನ ಮಾಡುತ್ತಾರೆ.ಇವರನ್ನು ಅರಿತವರು ಇವರ ಸಂಘವನ್ನು ಇಷ್ಟಪಡುತ್ತಾರೆ.ಆದರೆ ಕೆಲವೊಮ್ಮೆ ಇವರು ತಮ್ಮ ಬಗ್ಗೆ ಕೊಚ್ಚಿಕೊಳ್ಳುವ  ಮೂಲಕ ಅವಹೇಳನಗಳಿಗೂ ಒಳಗಾಗುತ್ತಾರೆ.ಆ ಅವಗುಣವೊಂದನ್ನು ಅಲಕ್ಷಿಸಿದರೆ ಇವರು ಉತ್ತಮ ವ್ಯಕ್ತಿಗಳೂ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನಿಸುವವರೂ ಆಗಿದ್ದಾರೆ.

ಕುಂಭ ರಾಶಿ:ಈ ರಾಶಿಯಲ್ಲಿ ಜನಿಸಿದವರು ತಮ್ಮ ತೀಕ್ಷ್ಣ ಬುದ್ಧಿಗೆ  ಹೆಸರಾಗಿದ್ದಾರೆ.ಈ ವ್ಯಕ್ತಿಗಳು ತಮ್ಮ ವಯಸ್ಸಿಗೆ ಮೀರಿದ ಬುದ್ಧಿವಂತಿಕೆಯನ್ನು ಪ್ರಕಟಿಸುವವರಾಗಿದ್ದು.ಯಾವುದೇ ಸಮಸ್ಯೆಗೆ ಸುಲಭವಾದ ಪರಿಹಾರವನ್ನು ಒದಗಿಸುವ ಚಾಣಾಕ್ಷತೆಯನ್ನು ಹೊಂದಿರುತ್ತಾರೆ.ಎಷ್ಟೋ ಜಟಿಲವಾದ ಸಮಸ್ಯೆ ಇದ್ದರೂ ಇವರು ಸುಲಭವಾದ ಪರಿಹಾರವನ್ನು ಕಂಡುಕೊಂಡ ಪರಿಹಾರವನ್ನು ಪಡೆದುಕೊಳ್ಳುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top