ಕ್ರಿಕೆಟ್

ಕ್ರಿಕೆಟ್ ಮೈದಾನದಲ್ಲೇ ಸಖತ್ ಡಾನ್ಸ್ ಮಾಡಿದ ಕೊಹ್ಲಿ – ಮಿಸ್ ಮಾಡದೇ ಈ ವಿಡಿಯೋ ನೋಡಿ

ಭಾರತ ಮತ್ತು ಆಸ್ಟ್ರೇಲಿಯಾದ ಪ್ರಥಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ಷೇತ್ರರಕ್ಷಣೆ ಮಾಡುವ ಸಮಯದಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಮಳೆಯ ಅಡಚಣೆಯಿಂದಾಗಿ ಮೂರನೇ ದಿನದಾಟದ ಪಂದ್ಯವು ವಿಳಂಬವಾಗಿ ಆರಂಭಗೊಂಡಿತ್ತು ಈ ವೇಳೆ ಪಂದ್ಯ ಪುನರ್ ಆರಂಭಗೊಂಡ ಬಳಿಕ ಸ್ಲಿಪ್‌ನಲ್ಲಿ ನಿಂತಿದ್ದ ಕೊಹ್ಲಿ ಯಾವುದೊ ಹಾಡನ್ನು ಗುಣುಗುಡುತ್ತಾ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿರುವ ವಿಡಿಯೋ ತುಣುಕು ಈಗ ಎಲ್ಲೆಡೆ ವೈರಲ್ ಆಗಿದ್ದು ಸಾಮಾಜಿಕ ಜಲ ತಾಣದಲ್ಲಿ ಭರ್ಜರಿ ಲೈಕ್ ಮತ್ತು ಶರ್ಸ್ ಗಿಟ್ಟಿಸುತಿದೆ.

ಮೈದಾನಲ್ಲಿ ಆಕ್ರಮಣಕಾರಿ ಆಟವಾಡುವ ವಿರಾಟ್ ಕೊಹ್ಲಿ ಯಾವಾಗಲು ಕ್ರಿಯಾಶೀಲರಾಗಿರುತ್ತಾರೆ. ಒಂದು ನಿಮಿಷವೂ ಸುಮ್ಮನೆ ಕೂರದ ಕೊಹ್ಲಿ ಅವರ ಅಭಿಮಾನಿಗಳಿಗೆ ಏನಾದರು ಖುಷಿ ಕೊಡುತ್ತಲೇ ಇರುತ್ತಾರೆ. ಅದ್ಭುತ ಫಾರ್ಮ್ ನಲ್ಲಿರುವ ಕೊಹ್ಲಿ ಇದೀಗ ಡಾನ್ಸ್ ನಲ್ಲೂ ಫಾರ್ಮ್ ಗೆ ಬಂದಿದ್ದಾರೆ. ಕೊಹ್ಲಿ ಡಾನ್ಸ್ ಸ್ಟೆಪ್ಸ್ ನ ವಿಡಿಯೋ ನೋಡಿದ ಅವರ ಅಭಿಮಾನಿಗಳು ದಿಲ್ ಖುಷ್ ಆಗಿದ್ದು. ಮೆಚ್ಚಿನ ನಾಯಕನ ಡಾನ್ಸ್ ಸ್ಟೆಪ್ಸ್ ಗೆ ಫೀಡ್ ಆಗಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top