ಭವಿಷ್ಯ

09 ಡಿಸೆಂಬರ್: ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ಡಿಸೆಂಬರ್ ೦೯,೨೦೧೮
ಸೂರ್ಯೋದಯ :೦೭:೦೩
ಸೂರ್ಯಾಸ್ತ : ೧೭:೫೭
ಅಮಂತ ತಿಂಗಳು : ಧನುರ್ ಮಾಸ

ಪಕ್ಷ : ಶುಕ್ಲ ಪಕ್ಷ
ತಿಥಿ : ಬಿದಿಗೆ – ೧೫:೪೦ ವರೆಗೆ
ನಕ್ಷತ್ರ : ಮೂಲ – ೦೮:೦೮ ವರೆಗೆ
ಯೋಗ : ಗಂಡ – ೨೧:೧೩ ವರೆಗೆ
ಸೂರ್ಯ ರಾಶಿ -ವೃಶ್ಚಿಕ

ಅಭಿಜಿತ್ ಮುಹುರ್ತ :೧೨:೦೯ – ೧೨:೫೨
ಅಮೃತಕಾಲ : ೨೯:೧೯+ – ೩೧:೦೫+
ರಾಹು ಕಾಲ: ೧೬:೩೨ – ೧೭:೫೩
ಗುಳಿಕ ಕಾಲ: ೧೫:೧೨ – ೧೬:೩೨
ಯಮಗಂಡ:೧೨:೩೦ – ೧೩:೫೧

ಇದ್ದದ್ದನ್ನು ಇದ್ದಂತೆ ಹೇಳಿದರೆ ಎದೆಗೆ ಬಂದು ಒದ್ದ ಎನ್ನುವಂತೆ ನೀವು ಹೇಳುವ ವಿಚಾರ ಸತ್ಯವಾಗಿದ್ದರೂ ಅದನ್ನು ಸ್ವೀಕರಿಸುವ ಜನರಿಗೆ ಅಪಥ್ಯವಾಗುವುದು. ಇದರಿಂದ ನಿಮಗೆ ವಿರೋಧಿಗಳು ಹೆಚ್ಚಾಗುವ ಸಂಭವವಿದೆ.

 

ನೀವು ಹೋಗುತ್ತಿರುವ ದಾರಿ ಸರಿಯಾಗಿದ್ದು ಅದರ ಬಗ್ಗೆ ಗೊಂದಲ ಬೇಡ. ಬೇರೆಯವರ ಮಾತುಗಳು ನಿಮ್ಮ ದಾರಿ ತಪ್ಪಿಸಬಹುದು. ನಿಮ್ಮ ದೃಢ ನಿರ್ಧಾರ ಎಲ್ಲರಿಗೂ ಸಂತಸ ತರಲಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಗೌರವ ಹೆಚ್ಚಿಸಲಿದೆ.

 

ನಿಮ್ಮ ಪ್ರಗತಿ ಸಹಿಸದ ಕೆಲವರು ನಿಮ್ಮನ್ನು ಪ್ರಚೋದಿಸಿ ಬಾಯಿಂದ ನಿಷ್ಠುರದ ಮಾತುಗಳು ಬರುವಂತೆ ಮಾಡುವರು. ಮಾತನಾಡುವಾಗ ಸಮಯ ಸಂದರ್ಭದ ಅರಿವಿರಲಿ.

 

ಕೆಲವು ವಿಷಯಗಳಲ್ಲಿ ಅತಿ ಬುದ್ಧಿವಂತಿಕೆ ತೋರದೆ ಸಹಜವಾಗಿ ಹೊಂದಿಕೊಂಡು ಹೋಗುವುದು ಬುದ್ಧಿವಂತರ ಲಕ್ಷ ಣ. ಬರಲಿರುವ ಉತ್ತಮ ಅವಕಾಶಗಳನ್ನು ನಿಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವುದನ್ನು ಕಲಿಯಿರಿ.

 

 

ಶ್ರಮಕ್ಕೆ ತಕ್ಕ ಪ್ರತಿಫಲ ಯಾವಾಗಲೂ ಇದ್ದೇ ಇರುತ್ತದೆ. ಅಂತೆಯೇ ನಿಮ್ಮ ಶ್ರಮಕ್ಕೆ ಆದಾಯ ಮೂಲದಲ್ಲಿ ಹೆಚ್ಚಳ ಕಂಡುಬರುವುದು. ಆದಾಯದ ಮುಕ್ಕಾಲು ಭಾಗವನ್ನು ಪರೋಪಕಾರಕ್ಕೆ ಮೀಸಲಾಗಿಡಲು ನಿರ್ಧರಿಸುವಿರಿ. ಬಂಧು ಬಾಂಧವರೊಂದಿಗಿನ ಸಂಬಂಧ ಗಟ್ಟಿಗೊಳ್ಳುವುದು. ಕೌಟುಂಬಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವುದರಿಂದ ಕುಟುಂಬದಲ್ಲಿ ನೆಮ್ಮದಿ, ಸಂತೋಷ ನೆಲೆಸುವವು.

 

 

ನಿಮ್ಮ ಮಿತಿಮೀರಿದ ಆಲೋಚನೆಗಳು ನಿಮ್ಮ ಕೆಲಸದಲ್ಲಿ ಅಪಯಶಸ್ಸು ತರುವ ಸಾಧ್ಯತೆ ಇರುವವು. ಹಾಗಾಗಿ ವಸ್ತುಸ್ಥಿತಿಯ ಬಗ್ಗೆ ಚಿಂತಿಸುವುದು ಒಳ್ಳೆಯದು. ಸಜ್ಜನರ ಸಂಪರ್ಕ ನಿಮ್ಮ ಮನಸ್ಸಿನ ತಳಮಳ ಕಡಿಮೆ ಮಾಡುವುದು.

 

 

ಬಂಧು ಬಾಂಧವರೊಂದಿಗೆ ಸೌಹಾರ್ದದಿಂದ ವರ್ತಿಸಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುವ ಸಂಭವವಿದೆ. ಬಿಡುವಿಲ್ಲದ ಕಾರ್ಯಗಳು ನಿಮ್ಮನ್ನು ಬೆಂಬತ್ತಿ ಬರುವವು.

 

 

ನೀವು ಕೆಲಸದ ನಿಮಿತ್ತ ತೋರುವ ಸಾಂಸಾರಿಕ ಅಲಕ್ಷ ್ಯ ಕೌಟುಂಬಿಕ ಕಲಹಗಳಿಗೆ ಕಾರಣವಾಗುವುದು. ಆದಷ್ಟು ತಾಳ್ಮೆ ಪ್ರದರ್ಶಿಸುವುದು ಕ್ಷೇಮ. ಆತ್ಮಬಲದಿಂದ ನೀವು ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗುವವು.

ಹಣಕಾಸಿನ ವಿಷಯದಲ್ಲಿ ಬಿಗು ನಿಲುವು ತೋರುವುದು ಉತ್ತಮ. ಕುಟುಂಬ ಸದಸ್ಯರ ಸಮಸ್ಯೆಗಳಿಗೆ ನೀವೇ ಪರಿಹಾರ ಸೂಚಿಸುವ ಪ್ರಸಂಗ ಬರುವುದು. ಮಿತಿಮೀರಿದ ಹಾಗೂ ಅರ್ಥವಿಲ್ಲದ ಖರ್ಚಿಗೆ ಧನವ್ಯಯವಾಗಲಿದೆ.

 

 

ಬಹುಷಃ ಉಳಿತಾಯಕ್ಕೂ ನಿಮಗೂ ಆಗಿ ಬರುವುದಿಲ್ಲವೆಂದು ಕಾಣುತ್ತದೆ. ಅನೇಕ ಸಂದರ್ಭಗಳಲ್ಲಿ ಖರ್ಚು ನಿಮ್ಮನ್ನು ಬೆಂಬಿಡದೆ ಹಿಂಬಾಲಿಸಿಕೊಂಡು ಬರಲಿದೆ. ಹಾಗಾಗಿ ಪ್ರಯತ್ನ ಪಟ್ಟು ಉಳಿತಾಯದ ಕಡೆ ಗಮನ ಕೊಡಿ.

 

ಬದುಕಿನಲ್ಲಿ ಬರಲಿರುವ ತಿರುವು ನಿಮ್ಮ ಭಾಗ್ಯವನ್ನೇ ಬದಲಾಯಿಸುವುದು ಮತ್ತು ಅದರಿಂದ ನಿಮ್ಮ ಅದೃಷ್ಟ ಖುಲಾಯಿಸಲಿದೆ. ಅನಿರೀಕ್ಷಿತವಾಗಿ ನಡೆಯುವ ಘಟನೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ತೋರಲಿದೆ.

 

ಮನೆಯಲ್ಲಿ ಜರುಗಲಿರುವ ಅಥವಾ ಜರುಗಿದ ಘಟನೆಗಳಿಗೆ ಹೆಚ್ಚಿನ ಮಹತ್ವ ಕೊಡದೆ ನಿಮ್ಮ ಕಾರ್ಯಗಳಲ್ಲಿ ಮಗ್ನರಾಗುವುದು ಉತ್ತಮ. ಅನವಶ್ಯಕ ವಿವಾದಗಳಿಗೆ ತಲೆ ಹಾಕಬೇಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top