ಮನೋರಂಜನೆ

ಮೈಸೂರು ಅರಮನೆಯಲ್ಲಿ ನಡೆಯಲಿದೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ಸಿನಿಮಾ ಶೂಟಿಂಗ್

ತೆಲುಗಿನಲ್ಲಿ ತಯಾರಾಗ್ತಿರೋ ಅತ್ಯಂತ ಹೈ ಬಜೆಟ್ ಸಿನಿಮಾ ಎಂದೇ ಖ್ಯಾತಿ ಗಳಿಸಿರುವ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈ ರಾ ನರಸಿಂಹರೆಡ್ಡಿ ಪ್ರೇಕ್ಷಕ ವರ್ಗದಲ್ಲಿ ಚಿತ್ರದ ಬಗೆಗಿನ ನಿರೀಕ್ಷೆಯ ಮಟ್ಟವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಮಲ್ಟಿ ಸ್ಟಾರ್ ಕಾಸ್ಟಿಂಗ್ ಸಿನಿಮಾ ಆಗಿರುವ ಸೈ ರಾ ನರಸಿಂಹರೆಡ್ಡಿ ಸಿನಿಮಾದಲ್ಲಿ ಹಿಂದಿ ಸೂಪರ್​ ಸ್ಟಾರ್ ಅಮಿತಾಭ್​ ಬಚ್ಚನ್ , ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ , ತಮಿಳು ಸ್ಟಾರ್ ವಿಜಯ್ ಸೇತುಪತಿ, ಸೇರಿದಂತೆ ಹಲವು ಸ್ಟಾರ್​ಗಳು ಕೂಡ ನಟಿಸಲಿದ್ದಾರೆಂಬ ಸುದ್ದಿ ಹೀಗಾಗಲೇ ಎಲ್ಲೆಡೆ ಹರಿದಾಡುತ್ತಿದ್ದು, ಕನ್ನಡದ ಕಿಚ್ಚ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಕನ್ನಡಿಗರಿಗೆ ಖುಷಿ ತಂದಿದೆ. ಒಟ್ಟಿನಲ್ಲಿ ಸಿನಿ ಪ್ರಿಯರು ಈ ಸಿನಿಮಾದ ಬಿಡುಗಡೆಗೆ ಕಾಯುತ್ತಿರುವುದಂತೂ ಹೌದು.

ಅಂದಹಾಗೆ ಈ ಸಿನಿಮಾದ ಶೂಟಿಂಗ್ ಮೈಸೂರು ಅರಮನೆಯಲ್ಲಿ ನಡೆಯಲಿದೆ ಎಂಬ ಸುದ್ದಿ ಪ್ರಚಲಿತದಲ್ಲಿತ್ತು ಇತ್ತು. ಇದೀಗ ಅದು ನಿಜವಾಗಿದ್ದು, ಅರಮನೆಯಲ್ಲಿ ಚಿತ್ರೀಕರಣಕ್ಕೆ ಅವಕಾಶ ದೊರೆತಿದೆ.  ಈ ಸೋಮವಾರದಿಂದ ಮೈಸೂರು ಅರಮನೆಯಲ್ಲಿ ಚಿತ್ರೀಕರಣ ಸಾಗಲಿದ್ದು ಶೂಟಿಂಗ್​​ನಲ್ಲಿ ​ಚಿರಂಜೀವಿ ಸೇರಿದಂತೆ ಕಿಚ್ಚ ಸುದೀಪ್ ಕೂಡ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top