ಬಿಗ್ ಬಾಸ್

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಇವರನ್ನು ಮನೆಯೊಳಗೇ ಕಳಿಸಬೇಕಂತೆ! ಅವರು ಯಾರು ಗೋತ್ತಾ?

ಬಿಗ್ ಬಾಸ್ ಸೀಸನ್ 6 ಶುರುವಾಗಿ 50 ದಿನಗಳೇ ಆಗಿದ್ದು, ಯಶ್ವಸ್ವಿಯಾಗಿ ನಡೆಯುತ್ತಿದೆ. ಎಂದಿನಂತೆ ಸುದೀಪ್ ನಿರೂಪಣೆ ಎಲ್ಲರ ಫೇವರಿಟ್ ಆಗಿದ್ದು, ಕಿಚ್ಚನ ನಿರೂಪಣೆಗೆ ಔಟ್ ಆಫ್ ಔಟ್ ಸಿಕ್ಕಿದೆ. ಹಾಗೂ ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಈಗ ಜನರಿಗೆ ಚಿರಪರಿಚಿತರಾಗಿ ಹೋಗಿದ್ದಾರೆ. ಕೆಲ ಬಿಗ್ ಬಾಸ್ ಸ್ಪರ್ದಿಗಳು ಎಲ್ಲರ ಫೇವರಿಟ್ ಆಗಿದ್ದಾರೆ. ಈ ಮದ್ಯೆ ಪ್ರತಿನಿತ್ಯ ಬಿಗ್ ಬಾಸ್ ಮನೆಯಲ್ಲಿ ನಡೆಯುವುದರ ಬಗ್ಗೆ ಸಾಮಾಜಿಕ ಜಾಲತಾಣಗಲ್ಲಿ ಚರ್ಚೆಯಾಗುತ್ತಲೇ ಇರುತ್ತಿದ್ದು, ಅದರಲ್ಲೂ ರಾಕೇಶ್ ಮತ್ತು ಅಕ್ಷತಾ ರಂತು ಟ್ರೊಲ್ ಗಳಿಗೆ ಆಹಾರವಾಗಿ ಹೋಗಿರುವುದಲ್ಲದೆ , ನೆಟ್ಟಿಗರ ಹಾಗೂ ವೀಕ್ಷಕರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಮದುವೆಯಾಗಿರುವ ಅಕ್ಷತಾ ರಾಕೇಶ್ ಜತೆಗೆ ನಡೆದುಕೊಳ್ಳುವ ರೀತಿ ಅನೇಕರನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣಗಲ್ಲಿ ಅಕ್ಷತಾ ಮತ್ತು ರಾಕೇಶ್ ರ ನಡವಳಿಕೆಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಈ ನಡುವಲ್ಲಿ ಅಕ್ಷತಾ ಮತ್ತು ರಾಕೇಶ್ ರವರಿಗೆ ಬುದ್ದಿ ಕಲಿಸಲು ಜನ ಅಕ್ಷತಾ ಅವರ ಗಂಡ ಪ್ರಸನ್ನ ಸಾಗರ್ ರನ್ನ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ‌ ಕಳುಹಿಸಿ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರಿಗೆ ಒತ್ತಾಯಿಸುತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top