fbpx
ಭವಿಷ್ಯ

11 ಡಿಸೆಂಬರ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಮಂಗಳವಾರ, ಡಿಸೆಂಬರ್ ೧೧,೨೦೧೮
ಸೂರ್ಯೋದಯ :೦೭:೦೪
ಸೂರ್ಯಾಸ್ತ : ೧೭:೫೮
ಅಮಂತ ತಿಂಗಳು : ಧನುರ್ ಮಾಸ

ಪಕ್ಷ : ಶುಕ್ಲ ಪಕ್ಷ
ತಿಥಿ : ಚೌತಿ – ೨೦:೨೧ ವರೆಗೆ
ನಕ್ಷತ್ರ : ಉತ್ತರ ಆಷಾಢ – ೧೩:೩೦ ವರೆಗೆ
ಯೋಗ : ಧ್ರುವ – ೨೨:೪೧ ವರೆಗೆ
ಸೂರ್ಯ ರಾಶಿ -ವೃಶ್ಚಿಕ

ಅಭಿಜಿತ್ ಮುಹುರ್ತ :೧೨:೧೦ – ೧೨:೫೩
ಅಮೃತಕಾಲ : ೨೮:೫೨+ – ೩೦:೪೦+
ರಾಹು ಕಾಲ: ೧೫:೧೨ – ೧೬:೩೩
ಗುಳಿಕ ಕಾಲ: ೧೨:೩೧ – ೧೩:೫೨
ಯಮಗಂಡ:೧೦೯:೫೦ – ೧೧:೧೦

ಇಂದು ಹೆಚ್ಚು ಲವಲವಿಕೆಯಿಂದ ಇರಬಹುದು. ಸದ್ಯದ ಗ್ರಹಸ್ಥಿತಿಗಳು ನಿಮ್ಮ ಬೆಂಗಾವಲಿಗೆ ಇರುವುದರಿಂದ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು.

 

ಪರಿವರ್ತನೆ ಜಗದ ನಿಯಮ. ಅಂತೆಯೇ ಸದ್ಯದ ಪರಿಸ್ಥಿತಿಯಲ್ಲಿ ಬದಲಾಗುತ್ತಿರುವ ಕಾಲಘಟ್ಟವನ್ನು ಸ್ವೀಕರಿಸುವುದರಿಂದ ಮುಂದೆ ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾಗಬಹುದು. ಈ ಬಗ್ಗೆ ಅನ್ಯಮಾರ್ಗವನ್ನು ಅನುಸರಿಸಬೇಕಾಗುವುದು. ಅನ್ಯರಿಗೆ ಸಲುಗೆ ಕೊಡಬೇಡಿ ಮತ್ತು ಅಂತರಂಗದ ವಿಷಯಗಳನ್ನು ಬಹಿರಂಗಗೊಳಿಸದಿರಿ.

 

ಅನಾವಶ್ಯಕ ವಾದ, ವಿವಾದಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಇಬ್ಬರ ಜಗಳ ತೀರಿಸಲು ಹೋಗಿ ನೀವೇ ಪೆಟ್ಟು ಮಾಡಿಕೊಳ್ಳುವಿರಿ. ಆರೋಗ್ಯದ ತಪಾಸಣೆಗಳನ್ನು ಸಕಾಲದಲ್ಲಿ ಮಾಡಿಸಿ.

 

 

ಕೆಲವು ಹಿತೈಷಿಗಳ ಪ್ರಯತ್ನದಿಂದ ನಿಮ್ಮ ಮನಸ್ಸಿಗೆ ಒಪ್ಪುವ ಹೊಸ ಕೆಲಸವು ನಿಮಗೆ ದೊರಕುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ.

 

 

ಅನೇಕ ರೀತಿಯ ಒತ್ತಡಗಳ ನಡುವೆಯೂ ಯಶಸ್ಸಿನ ದಾರಿಯನ್ನು ಕಂಡುಕೊಳ್ಳಲು ಸುದಿನವಾಗಿದೆ. ಅಂತೆಯೇ ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದ್ದು ಮೌನ ತಾಳಿ.

 

 

ಮಾತೇ ಮುತ್ತು ಮಾತೇ ಶತ್ರು ಎನ್ನುವಂತೆ ನೀವು ನಿಮ್ಮ ಮಾತಿನ ಮೂಲಕ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವಿರಿ. ಆ ಮೂಲಕ ಹಣಕಾಸಿನ ಹರಿವಿಗೆ ಕಾರಣವಾಗುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.

 

 

ಹಿತಶತ್ರುಗಳು ನಿಮ್ಮ ನೆಮ್ಮದಿಯನ್ನು ಕೆಡಿಸುವ ಹುನ್ನಾರದಲ್ಲಿದ್ದಾರೆ ಮತ್ತು ನಿಮ್ಮ ತಪ್ಪುಗಳನ್ನು ಎತ್ತಿ ಆಡುವರು. ಇದರಿಂದ ಕೋಪಗೊಳ್ಳುವ ನೀವು ಮಾತಿನ ಭರದಲ್ಲಿ ಸತ್ಯವನ್ನು ನುಡಿದು ಪೇಚಿಗೆ ಸಿಲುಕೊಳ್ಳುವಿರಿ. ತಾಳ್ಮೆಯಿಂದ ಇರಿ.

ಕೇವಲ ಹಗಲುಗನಸು ಕಾಣುವುದನ್ನು ಬಿಡಿ. ನಿಮಗೆ ಮಾಡಲು ಸಾಧ್ಯವಾದುದನ್ನೆ ಆಯ್ಕೆ ಮಾಡಿಕೊಂಡು ಕೆಲಸ ಪೂರೈಸಿ. ಗೆಳೆಯರ ಒತ್ತಾಯದ ಮೇರೆಗೆ ಬಹುಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು.

 

 

ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ನಿಮ್ಮನ್ನು ಕಂಡು ಇತರರು ಅಸೂಯೆ ಪಡುವರು. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.

 

ಕಾಡಿನಲ್ಲಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ನಿಮ್ಮ ಪ್ರಯತ್ನಕ್ಕೆ ಭಗವಂತನು ಒಲಿದು ಬರುವನು. ಮನೆ ಬಾಗಿಲಿಗೆ ನಿಮ್ಮ ಕಾರ್ಯಗಳ ಸಫಲತೆಯ ಬಗ್ಗೆ ವಾರ್ತೆ ಬರುವುದು.

 

ಹೆಚ್ಚಿನ ವೇಗದ ಅಥವಾ ನಿರ್ಲಕ್ಷ್ಯದ ವಾಹನ ಚಾಲನೆಯು ಅಪಘಾತವನ್ನು ಉಂಟುಮಾಡುತ್ತದೆ. ಪ್ರಯಾಣದಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿ ಮತ್ತು ಸಂಗಾತಿಯ ಜತೆ ವಾದವಿವಾದವನ್ನು ಮಾಡಿಕೊಳ್ಳದಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top