ದೇವರು

ಧನುರ್ಮಾಸದಲ್ಲಿ ಸ್ಕಂದ ಷಷ್ಠಿ ಆಚರಣೆ ಹೇಗೆ ಮಾಡ್ಬೇಕು,ಇದರ ಆಚರಣೆ ಮಾಡುವುದರಿಂದ ಯಾವೆಲ್ಲ ಫಲಗಳು ಲಭಿಸುತ್ತವೆ ಗೊತ್ತಾ

ಈ ಷಷ್ಟಿಯಲ್ಲಿ ಕೆಲವು ಗೊಂದಲಗಳಿವೆ. ಸ್ಕಂದ ಷಷ್ಠಿಯ ಬೇರೆ ಸುಬ್ರಹ್ಮಣ್ಯ ಷಷ್ಠಿ ಬೇರೆ ಮತ್ತು ಧನುರ್ಮಾಸದಲ್ಲಿ ಬರುವ ಷಷ್ಟಿಯೇ ಬೇರೆ. ಈ ಧನೂರ್ಬುಧವಾರ ಮತ್ತು ಗುರುವಾರ ಸ್ಕಂದ ಷಷ್ಠಿ ಇದೆ.ಯಾರು ಸೌರಮಾನವನ್ನು ಪಾಲಿಸುತ್ತಾರೋ ಅವರು ಬುಧವಾರದ ದಿನ ಸ್ಕಂದ ಷಷ್ಠಿಯನ್ನು ಆಚರಣೆ ಮಾಡುತ್ತಾರೆ. ಅದು ಚಂದ್ರೋದಯಕ್ಕೆ ಸರಿಯಾಗಿ ಷಷ್ಠಿ ಆಚರಣೆಗೆ ಬರಲಿದೆ. ಇನ್ನು ಚಂದ್ರಮಾನವನ್ನು ಪಾಲಿಸುವವರು ಗುರುವಾರದ ದಿನ ಷಷ್ಟಿಯನ್ನು ಆಚರಣೆ ಮಾಡುತ್ತಾರೆ. ಎಲ್ಲಾ ಸುಬ್ರಮಣ್ಯನ ದೇವಾಲಯಗಳಲ್ಲಿ ಸ್ಕಂದ ಷಷ್ಠಿಯ ವಿಶೇಷ ಪೂಜೆಗಳು ನಡೆಯುತ್ತವೆ.ಇದರ ವಿಶೇಷ ಮಹತ್ವ ಏನೆಂದರೆ

 

 

 

ಬಹಳಷ್ಟು ಜನ ಹೆಣ್ಣು ಮಕ್ಕಳಿಗೆ ತುಂಬಾ ಆಸೆ ಇರುತ್ತದೆ ಕೆಲವರಿಗೆ ಕಂಕಣ ಭಾಗ್ಯ ಕೂಡಿ ಬಂದಿರುವುದಿಲ್ಲ, ಇನ್ನು ಕೆಲವರಿಗೆ ದಾಂಪತ್ಯದಲ್ಲಿ ಅನ್ಯೋನ್ಯತೆ ಇರುವುದಿಲ್ಲ, ಇಂತಹ ಸಮಸ್ಯೆಗಳಿಂದ ಹೊರ ಬರಬೇಕೆಂದರೆ ಮಾಂಗಲ್ಯಕ್ಕೆ ಅಧಿಪತಿಯಾಗಿರುವನು ಕುಜ, ಕುಜನಿಗೆ ಅಧಿಪತಿಯಾಗಿರುವ ಸ್ಕಂದ ದೇವ,ಆದ್ದರಿಂದ ಅಂತಹ ಸ್ಕಂದ ಷಷ್ಠಿಯ ದಿನ ಸ್ಕಂದನಿಗೆ ನಮನವನ್ನು ಸಲ್ಲಿಸಬೇಕು. ಮಾಂಗಲ್ಯ ಭಾಗ್ಯಕ್ಕೊಸ್ಕರ, ದಾಂಪತ್ಯ ಅನ್ಯೋನ್ಯತೆಗೋಸ್ಕರ ಅದರ ಜೊತೆಯಲ್ಲಿ ಭೂಮಿ ಕಾರಕನಾಗಿರುವ ಭೂಮಿಗೆ ಅಧಿಪತಿಯಾಗಿರುವ ಕುಜನಿಗೆ ನಮನ ಸಲ್ಲಿಸಬೇಕು.
ಈ ಭೂಮಿಯ ಮೇಲೆ ಇರುವ ಋಣ ನಮಗೆ ಕುಜನ ಅನುಗ್ರಹ ಬೇಕು.ಅದಕ್ಕೆ ದೊಡ್ಡವರು ಹೇಳುತ್ತಾರೆ. “ಋಣಾನುಬಂಧ ರೂಪೇಣ” ಎಂದು ಎಲ್ಲವೂ ಋಣ ಇದ್ದರೇನೆ ನಮಗೆ ಲಭ್ಯವಾಗುವುದು. ಪ್ರತಿಯೊಂದಕ್ಕೂ ಕೂಡ ಹೆಣ್ಣು, ಹೊನ್ನು, ಮಣ್ಣು ಏನ್ನನಾದರೂ ಅನುಭವಿಸಬೇಕು ಎಂದರೆ ಋಣ ಎನ್ನುವುದು ಬೇಕು. ಬಹಳಷ್ಟು ಜನ ಜಮೀನು ಖರೀದಿ ಮಾಡಬೇಕು, ಮನೆ ಕಟ್ಟಿಸಬೇಕು , ವ್ಯವಸ್ಥಿತವಾದ ಜೀವನ ಇಲ್ಲ ಎಂದು ಯೋಚನೆ ಮಾಡುತ್ತಾರೆ. ಆದರೆ ಆ ಸ್ಕಂದನ ಅನುಗ್ರಹ ಸುಬ್ರಮಣ್ಯನ ಅನುಗ್ರಹ ನಿಮಗೆ ಬಂದ ಮೇಲೆ ನಿಮ್ಮ ಜೀವನದಲ್ಲಿ ಜಮೀನು ಮನೆ ಎಲ್ಲವೂ ಸಹ ಪ್ರಾಪ್ತಿಯಾಗುತ್ತದೆ.

ಸ್ಕಂದ ಷಷ್ಠಿಯ ದಿನ ನೀವು ಏನು ಮಾಡಬೇಕು ?
ಸ್ಕಂದ ಷಷ್ಠಿಯ ದಿನ ನೀವು ಕೆಂಪು ಹೂವುಗಳನ್ನು ಸುಬ್ರಹ್ಮಣ್ಯನಿಗೆ ಅರ್ಪಿಸಬೇಕು. ಅದರ ಜೊತೆಗೆ ಭಸ್ಮವನ್ನು ತೆಗೆದುಕೊಂಡು ಹೋಗಿ ಸುಬ್ರಮಣ್ಯನ ದೇವಾಲಯಕ್ಕೆ ಅರ್ಪಿಸಿ, ನಿಮ್ಮ ಹೆಸರಿನಲ್ಲಿ ಅರ್ಚನೆಯನ್ನು ಮತ್ತು ಸೇವೆಗಳನ್ನು ಮಾಡಿಸಿ, ದೀರ್ಘದಂಡ ನಮಸ್ಕಾರವನ್ನು ಮಾಡಿ. ಸ್ಕಂದ ದೇವ ಈ ಭೂಮಿಯ ಮೇಲೆ ಜೀವಿಸುವುದಕ್ಕೆ ನಿನ್ನ ಅನುಗ್ರಹ ಬೇಕು. ನಮಗೆ ಈ ಭೂಮಿಯ ಮೇಲೆ ಬದುಕಬೇಕು ಅಂದರೆ ನಿನ್ನ ಅನುಗ್ರಹ ಬೇಕೇ ಬೇಕು ನಿನ್ನ ಅನುಗ್ರಹವಿಲ್ಲದೆ ಯಾವುದೂ ಸಾಧ್ಯವಿಲ್ಲ ಆದ್ದರಿಂದ ನಿನ್ನ ಅನುಗ್ರಹ ಸದಾ ನಮ್ಮ ಮೇಲೆ ಇರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top