fbpx
ರಾಜಕೀಯ

ಲೋಕಸಭೆಯಲ್ಲಿ ಅಂಬರೀಷ್ ಗೆ ಅಪಮಾನ- ದೇವೇಗೌಡ ಆಕ್ರೋಶ.

ಅನೇಕ ವರ್ಷಗಳಿಂದ ಸದನದಲ್ಲಿ ಅಗಲಿದ ಮಹಾ ನಾಯಕರಿಗೆ ರಾಜ್ಯ ಅಥವಾ ಕೇಂದ್ರದ ಅಧಿವೇಶನದ ಮೊದಲ ದಿನದಂದು ಸಂತಾಪ ವ್ಯಕ್ತಪಡಿಸುವುದು ಒಂದು ರೀತಿಯ ಸಂಪ್ರಾದಾಯವಾಗಿ ಬೆಳೆದುಕೊಂಡು ಬಂದಿದೆ. ಆದರೆ ನಿನ್ನೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಸಂಸದ ಅಂಬರೀಷ್​ಗೆ ಯಾವುದೇ ಸಂತಾಪ ಸೂಚಿಸದ ಕಾರಣ ಆಕ್ರೋಶ ವ್ಯಕ್ತವಾಗಿದೆ.

ಸಂಸತ್​ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ಕರ್ನಾಟಕ ಮಾಜಿ ಸಂಸದ ಹಾಗೂ ನಟ ಅಂಬರೀಷ್​ಗೆ ಯಾವುದೇ ಸಂತಾಪ ವ್ಯಕ್ತಪಡಿಸದಿರುವುದರ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಗರಂ ಆಗಿದ್ದಾರೆ.

ಕೇವಲ ನಾಯಕ ನಟರಾಗಿ ಮಾತ್ರವಲ್ಲದೇ ಮಹಾನ್ ಸಂಸದರಾಗಿ ಸೇವೆ ಸಲ್ಲಿಸಿದ್ದ ಅಂಬರೀಷ್​ ಅವರಿಗೆ ಸದನದಲ್ಲಿ ಸಂತಾಪ ವ್ಯಕ್ತವಾಗದ ಕಾರಣಕ್ಕೆ ತೀವ್ರ ಅಸಮಾಧಾನಗೊಂಡಿರುವ ಎಚ್​.ಡಿ. ದೇವೇಗೌಡ ಅವರು ಈ ಬಗ್ಗೆ ಸ್ಪೀಕರ್ ಸುಮಿತ್ರಾ ಮಹಾಜನ್​ ಅವರಿಗೆ ಇದರ ಕುರಿತು ಮನದಟ್ಟು ಮಾಡಿದ್ದಾರೆ. ಈ ಕುರಿತು ನಿಗಾ ವಹಿಸಿದ ಸ್ಪೀಕರ್ ಗುರುವಾರದ ಸದನದಲ್ಲಿ ಅಂಬರೀಷ್​ ಅವರ ನಿಧನಕ್ಕೆ ಸಂತಾಪ ಸೂಚಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.

ಕಾಂಗ್ರೆಸ್​ನ ಅಪ್ರತಿಮ ರಾಜಕಾರಣಿಯಾಗಿದ್ದ ಅಂಬರೀಷ್​ 1998-99ರಲ್ಲಿ ಜೆಡಿಎಸ್​ ಪಕ್ಷದಿಂದ 12ನೇ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಳಿಕ ಕಾಂಗ್ರೆಸ್​ ಸೇರಿದ ಅವರು 1999 -2009ರವರೆಗೆ ಲೋಕಸಭಾ ಸದಸ್ಯರಾಗಿದ್ದರು. 2006-08 ರ ಸಮಯದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಅವರು 2008 ರಲ್ಲಿ ಕಾವೇರಿ ನೀರಿನ ವಿವಾದದ ಹಿನ್ನೆಲೆಯಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top