fbpx
ಭವಿಷ್ಯ

ಡಿಸೆಂಬರ್ 19ನೇ ತಾರೀಖಿನ ನಂತರ ಈ 3 ರಾಶಿಯವರಿಗೆ ಉತ್ತಮ ದಿನಗಳು ಬರಲಿದ್ದು,ಭಾಗ್ಯದ ಬಾಗಿಲು ತೆರೆಯಲಿದೆ.

ವೈಕುಂಠ ಏಕಾದಶಿಯನ್ನು ಪ್ರತಿಯೊಬ್ಬ ಇಂದೂಗಳು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಆಚರಿಸುತ್ತಾರೆ.ಈ ವೈಕುಂಠ ಏಕಾದಶಿಯನ್ನು ಆಚರಿಸಿದರೆ ಮೋಕ್ಷ ಪ್ರಾಪ್ತಿಗಾಗಿ ವೈಕುಂಠದ ಬಾಗಿಲು ಸಹ ತೆರೆಯುತ್ತದೆ.ವೈಕುಂಠ ಏಕಾದಶಿಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ಕೂಡ ಇದೆ. ಅಂದಿನಿಂದ ಈ ಮೂರು ರಾಶಿಗಳಿಗೆ ಅದೃಷ್ಟ ಒಲಿದು ಬರಲಿದೆ ಎಂದು ಜ್ಯೋತಿಷ್ಯ ಕಾರರು ಹೇಳುತ್ತಿದ್ದಾರೆ.
ಗ್ರಹಗಳ ಸಂಚಾರದಲ್ಲಿ ಈ ಬದಲಾವಣೆಗಳ ಪ್ರಭಾವದಿಂದ ಈ ಮೂರು ರಾಶಿಗಳ ಮೇಲೆ ಸಾಕಷ್ಟು ಶುಭ ಪರಿಣಾಮಗಳು ಬೀರಲಿದ್ದು, ಇವರಿಗೆ ಭಾಗ್ಯದ ಬಾಗಿಲು ತೆರೆಯಲಿದೆ.

 

ಸೂರ್ಯನು ಹನ್ನೆರಡು ರಾಶಿಗಳನ್ನು ಸುತ್ತಿಬರಲು ಒಂದು ಸಂವತ್ಸರ ಕಾಲ ಹಿಡಿಯುತ್ತದೆ. ಅಂದರೆ ಒಂದೊಂದು ರಾಶಿಯಲ್ಲಿ ಸೂರ್ಯನು ಒಂದು ತಿಂಗಳುಗಳ ಕಾಲ ಇರುತ್ತಾನೆ. ಒಂದು ತಿಂಗಳಲ್ಲಿ 12 ರಾಶಿಗಳಲ್ಲಿ ಚಂದ್ರ ಯಾವ ರಾಶಿಯಲ್ಲಿ ಇದ್ದಾನೆ ಎಂದು ಗುರುತಿಸುವುದು ಸ್ವಲ್ಪ ಕಷ್ಟವಾದರೂ ಕೂಡ ಚಂದ್ರನು ಒಂದೊಂದು ದಿನ ಒಂದೊಂದು ನಕ್ಷತ್ರಕ್ಕೆ ಹತ್ತಿರವಾಗಿ ಸಾಗುತ್ತಾ ಮುಂದೆ ಹೋಗುತ್ತಾನೆ. ಇಪ್ಪತ್ತೇಳು ನಕ್ಷತ್ರಗಳು ಇರುವುದರಿಂದ ಚಂದ್ರನು 12 ರಾಶಿಯಲ್ಲಿ 27 ನಕ್ಷತ್ರಗಳನ್ನು ಒಂದು ಬಾರಿ ಸುತ್ತಿ ಬರುತ್ತಾನೆ. 12 ರಾಶಿಯವರಿಗೆ ಈ ಚಂದ್ರನು ಸುತ್ತಿ ಬಂದಂತೆ ಹೀಗಾಗಿ ಮುಖ್ಯವಾದ ಏಕಾದಶಿಯ ನಂತರ ಈ ಮೂರು ರಾಶಿಯವರಿಗೆ ಅನುಕೂಲ ದಿನಗಳು ಒಳ್ಳೆಯ ದಿನಗಳು ಕೂಡಿ ಬರಲಿವೆ. ಉದ್ಯೋಗ ಪ್ರಾಪ್ತಿಯಾಗುತ್ತದೆ, ಉದ್ಯೋಗದಲ್ಲಿ ಅನುಕೂಲಗಳು ಕೂಡಿಬರುತ್ತವೆ, ನಿಶ್ಚಯವಾಗಿರುವ ಅಥವಾ ನಿರ್ಣಯವಾಗಿರುವ ಗುರಿಗಳನ್ನು ಮತ್ತು ಕಾರ್ಯಗಳನ್ನು ಬಹುಬೇಗ ತಲುಪುತ್ತಾರೆ.

 

 

 

ಅಷ್ಟೇ ಅಲ್ಲ ಧನಲಭವೂ ಕೂಡ ಪ್ರಾಪ್ತಿಯಾಗಲಿದೆ, ವ್ಯಾಪಾರದಲ್ಲಿ ಉನ್ನತವಾದಂತಹ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ, ವ್ಯಾಪಾರದಲ್ಲಿ ಸ್ಥಿರತೆ ಇರುತ್ತದೆ, ಲಾಭಗಳು ಹೆಚ್ಚಾಗುತ್ತವೆ, ಆ ರಾಶಿಗಳು ಯಾವುವು ? ಎಂದರೆ ತುಲಾ ರಾಶಿ, ಮಕರ ರಾಶಿ ಮತ್ತು ಸಿಂಹ ರಾಶಿ.

ತುಲಾ ರಾಶಿ
ತುಲಾ ರಾಶಿಯವರಿಗೆ ಅಧಿಪತಿ ಶುಕ್ರ ಗ್ರಹ. ಆದ್ದರಿಂದ ಇದು ತುಂಬಾ ಒಳ್ಳೆಯ ಶುಭ ಸಮಯವಾಗಿದೆ. ಇವರಿಗೆ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ, ಉದ್ಯೋಗಸ್ಥರಿಗೆ ಪದೋನ್ನತಿ, ದೂರ ಪ್ರಯಾಣದಲ್ಲಿ ಲಾಭ, ದನ ಲಾಭವಾಗಲಿದೆ, ಬಹಳಷ್ಟು ಸಾಮಾಜಿಕ ಹಾಗೂ ಉತ್ತಮವಾದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಸನ್ಮಾನಗಳನ್ನು ಪಡೆಯುತ್ತಾರೆ.ರಾಜಕೀಯ ನಾಯಕರಿಗೆ ಇದು ಒಳ್ಳೆಯ ಕಾಲ, ನಾಯಕತ್ವದ ಲಕ್ಷಣಗಳು ಇನ್ನಷ್ಟು ವೃದ್ಧಿಸಿ, ವಿಜಯದ ಪಥವನ್ನು ಹಿಡಿಯುತ್ತಾರೆ. ಧೈರ್ಯದಿಂದ ಇನ್ನಷ್ಟು ಶುಭ ಫಲಿತಾಂಶಗಳನ್ನು ಪಡೆಯಬಹುದು.

ಮಕರ ರಾಶಿ 
ಮಕರ ರಾಶಿಯವರಿಗೆ ಅಧಿಪತಿ ಶನಿ ಇವರಿಗೆ ಈಗ ಒಳ್ಳೆಯ ಕಾಲ ಎಂದೇ ಹೇಳಬಹುದು. ಅನೇಕ ರೀತಿಯಲ್ಲಿ ಉತ್ತಮವಾದ ಬದಲಾವಣೆಗಳು ಉಂಟಾಗುತ್ತವೆ. ಯಾವ ಕೆಲಸಕ್ಕೆ ಕೈಹಾಕಿದರು ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯವಸಾಯ ಮಾಡುವವರಿಗೆ ಒಳ್ಳೆಯ ಬೆಳೆ ಕೈಗೆ ಬರುತ್ತದೆ, ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಸಮಯ ಇದಾಗಿದೆ, ನಿಮ್ಮ ಗುರಿಯನ್ನು ನೀವು ಸುಲಭವಾಗಿ ತಲುಪಬಹುದು, ವ್ಯಾಪಾರಸ್ಥರಿಗೆ ಲಾಭ, ಸ್ಥಿರವಾದ ಆರ್ಥಿಕ ಲಾಭ, ಜೀವನದಲ್ಲಿ ಸಾಕಷ್ಟು ಒಳ್ಳೆಯ ಫಲಗಳನ್ನು ಕಾಣುತ್ತಾರೆ, ಶಿವಾರಾಧನೆಯನ್ನು ಮಾಡುವುದರಿಂದ ಇನ್ನಷ್ಟು ಉತ್ತಮವಾದ ಫಲಿತಾಂಶಗಳನ್ನು ಕಾಣುತ್ತಾರೆ.

ಸಿಂಹ ರಾಶಿ
ರಿಯಲ್ ಎಸ್ಟೇಟ್ ವೃತ್ತಿಯಲ್ಲಿ ಹೆಚ್ಚಿನ ಲಾಭವನ್ನು ಗಳಿಸುತ್ತಾರೆ, ಸಾಲವನ್ನು ತೀರಿಸಿ,ಉನ್ನತ ಮಟ್ಟಕ್ಕೆ ಬೆಳೆದು, ಧನಲಾಭ ಪಡೆಯುತ್ತಾರೆ, ಆಂಜನೇಯನ ಆರಾಧನೆಯನ್ನು ಮಾಡಿದರೆ ಇನ್ನಷ್ಟು ಒಳ್ಳೆಯ ಫಲಿತಾಂಶಗಳನ್ನು ಕಾಣುತ್ತಾರೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top