fbpx
ದೇವರು

ಡಿಸೆಂಬರ್ 22ನೇ ತಾರೀಖು ಮಾರ್ಗಶಿರ ಮಾಸದ ಪೌರ್ಣಮಿ ಹಾಗೂ ಜನವರಿ 5ನೇ ತಾರೀಖು ಅಮಾವಾಸ್ಯೆ ಇದರ ಪ್ರಾಮುಖ್ಯತೆ,ಮಹತ್ವ ಹಾಗೂ ಈ ದಿನಗಳನ್ನು ಹೇಗೆ ಆಚರಿಸಿ್ದರೆ ಒಳ್ಳೆಯದು ಗೊತ್ತಾ

ಮಾರ್ಗಶಿರ ಮಾಸದ ಪೌರ್ಣಮಿ ಡಿಸೆಂಬರ್ 22 ನೇ ತಾರೀಖು 2018ಕ್ಕೆ ಮತ್ತು ಅಮಾವಾಸ್ಯೆ ಜನವರಿ 5 ನೇ ತಾರೀಖು 2019 ಕ್ಕೆ.ಇವುಗಳ ವಿಶೇಷತೆ, ಪ್ರಾಮುಖ್ಯತೆ ಹಾಗೂ ಮಹತ್ವ ಏನು ?ಮತ್ತು ಹೇಗೆ ಆಚರಿಸಬೇಕು.
ಮಾರ್ಗಶಿರ ಮಾಸದ ಹುಣ್ಣಿಮೆಯ ದಿನ ಕೊಡವರು ಆಚರಿಸುವರು ಹುತ್ತರಿ ಹಬ್ಬ.
ಮಾರ್ಗಶಿರ ಮಾಸದಲ್ಲಿ ಕೊಡವರು ವಿಶೇಷವಾದ ಒಂದೇ ಒಂದು ಹಬ್ಬವಾದ ಉತ್ತರಿ ಹಬ್ಬವನ್ನು ಅತ್ಯಂತ ಪ್ರಮುಖವಾಗಿ ಆಚರಿಸುತ್ತಾರೆ. ಉತ್ತರಿ ಹಬ್ಬ ಬರುವುದು ಇದೇ ಮಾರ್ಗಶಿರ ಮಾಸದಲ್ಲಿ.ಈ ಉತ್ತರಿ ಹಬ್ಬದ ದಿನ ಕೊಡಗಿನ ಕೃಷಿಕರು, ಕೊಡವರು ಧಾನ್ಯ ಲಕ್ಷ್ಮಿಯನ್ನು ಪೂಜಿಸಿ ಸಂಭ್ರಮಿಸುತ್ತಾರೆ. ಕೊಡವರ ಪಾಲಿಗೆ ಹುತ್ತರಿ ಎಂದರೆ ಅದು ಸುಗ್ಗಿಯ ಹಬ್ಬ. ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಹುತ್ತರಿ ಹಬ್ಬ ಕೊಡವರ ಪಾಲಿಗೆ ಅತ್ಯಂತ ಸಮೃದ್ಧಿಯ ಹಬ್ಬ . ಉತ್ತರಿ ಹಬ್ಬ ಬಂತು ಎಂದರೆ ವೃದ್ಧರಿಂದ ಹಿಡಿದು ಪುಟ್ಟ ಮಕ್ಕಳವರೆಗೂ ಸಂಭ್ರಮವೋ ಸಂಭ್ರಮ. ರೋಹಿಣಿ ನಕ್ಷತ್ರದ ಹುಣ್ಣಿಮೆಯ ಹಿಂದಿನ ರಾತ್ರಿ ಅಂದರೆ ಡಿಸೆಂಬರ್ 21 ನೇ ತಾರೀಖು ರಾತ್ರಿ ಬೆಳೆ ಕಟಾವು ಮಾಡಿ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಹಬ್ಬವಾಗಿ ಆಚರಿಸುತ್ತಾರೆ.

 

 

 

ಮಾರ್ಗಶಿರ ಮಾಸದ ಹುಣ್ಣಿಮೆ ಅತ್ಯಂತ ಶ್ರೇಷ್ಠ.(ಡಿಸೆಂಬರ್ 22 ನೇ ತಾರೀಖು)
ಮಾರ್ಗಶಿರ ಮಾಸದ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಹುಣ್ಣಿಮೆಯ ದಿನ ಮಹಾವಿಷ್ಣುವಿನ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರ .ಈ ದಿನ ಮನೆಯಲ್ಲಿ ಪೂಜಿಸುವ ವಿಗ್ರಹಗಳಿಗೆ ಅಭಿಷೇಕ ಮಾಡಬೇಕು. ಜೊತೆಗೆ ಮನೆಯಲ್ಲಿರುವ ಪಟ್ಟದ ದೇವರಿಗೆ ಅಭಿಷೇಕ ಮಾಡುವ ಪದ್ಧತಿ ಇದೆ. ಈ ಮಾಸದಲ್ಲಿ ಕೆಲವು ಆಚರಣೆಗಳನ್ನು ತಪ್ಪದೆ ಆಚರಿಸಲೇಬೇಕು.
ಮಾರ್ಗಶಿರ ಮಾಸದ ಪ್ರಮುಖ ಆಚರಣೆಗಳು.
ಮಾರ್ಗಶಿರ ಮಾಸದಲ್ಲಿ ಪ್ರಾತಃಕಾಲ ಸಮುದ್ರ ಸ್ನಾನ ಮತ್ತು ನದಿ ಸ್ನಾನ ಮಾಡಿದರೆ ಸಾವಿರ ವರ್ಷದ ಪುಣ್ಯ ಪ್ರಾಪ್ತಿಯಾಗುತ್ತದೆ.ಈ ಮಾರ್ಗಶಿರ ಮಾಸದಲ್ಲಿ ಸಮುದ್ರ ಸ್ನಾನ ಅತ್ಯಂತ ಪುಣ್ಯಪ್ರದ. ಈ ಮಾಸದಲ್ಲಿ ಉಶಃ ಕಾಲ ಪೂಜೆ ಅತ್ಯಂತ ಶ್ರೇಯಸ್ಕರ. ಉಶಃಕಾಲ ಪೂಜೆಯಿಂದ 8 ಮಾಸಗಳ ಪೂಜೆಯ ಫಲ ಲಭಿಸುತ್ತದೆ.ಗರಿಕೆ ,ತುಳಸಿ,ಬಿಲ್ವಪತ್ರೆಯಿಂದ ವಿಷ್ಣುವಿಗೆ ಅರ್ಚನೆ ಮಾಡುವುದು ಪುಣ್ಯಪ್ರದ. ಭಗವಂತನಿಗೆ ಹೊಸ ಧಾನ್ಯ,ತರಕಾರಿ, ನೈವೇದ್ಯ ಶ್ರೇಷ್ಠ. ಈ ಮಾಸದಲ್ಲಿ ಸೂರ್ಯೋದಯದ ವೇಳೆ ದೇವರಿಗೆ ಆರತಿ ಮಾಡಲಾಗುವುದು.

 

ಕೇಶವನಿಗೆ ಯಾವ ನೈವೇದ್ಯ ಶ್ರೇಷ್ಠ.
ಮಾರ್ಗಶಿರ ಮಾಸದ ನಿಯಾಮಕ ದೇವನಾದ ಕೇಶವನಿಗೆ ಮುದ್ಗಾನ್ನ ಅತ್ಯಂತ ಶ್ರೇಷ್ಠ. ಹೆಸರು ಬೇಳೆ, ಕಾಳು ಮೆಣಸು, ಬೆಟ್ಟದ ನೆಲ್ಲಿಕಾಯಿ ಸೇರಿಸಿ ಇದನ್ನು ತಯಾರಿಸಲಾಗುತ್ತದೆ.ಈ ಬಗ್ಗೆ ಶಾಸ್ತ್ರಗಳಲ್ಲಿಯೂ ಕೂಡ ಉಲ್ಲೇಖವಿದೆ. ಹೀಗಾಗಿ ಮಾರ್ಗಶಿರ ಮಾಸದಲ್ಲಿ ಭಗವಂತನಿಗೆ ಮುದ್ಗಾನ್ನ ನೈವೇದ್ಯ ಮಾಡಿದರೆ ಬಹಳ ಬೇಗ ಅವನ ಒಲುಮೆಗೆ ಪಾತ್ರರಾಗಬಹುದು ಎನ್ನಲಾಗುತ್ತದೆ. ಮಾರ್ಗಶಿರ ಮಾಸದಲ್ಲಿ ಮುದ್ಗಾನ್ನವನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ನಂತರ ಸೇವಿಸುವುದು ಆರೋಗ್ಯಕ್ಕೆ ಉತ್ತಮ.ಆದ್ದರಿಂದ ಈ ಮಾಸಕ್ಕೆ ವಿಶೇಷ ಮಹತ್ವವಿದೆ
ಅಮವಾಸ್ಯೆಯ ದಿನ ಪಿತೃ ತರ್ಪಣ ಕೊಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.ಮಾರ್ಗಶಿರ ಮಾಸದ ಅಮಾವಾಸ್ಯೆ ಜನವರಿ 2019 5 ನೇ ತಾರೀಖು ಮೂಲಾ ನಕ್ಷತ್ರವಿದ್ದು, ಈ ದಿನ ಅಮಾವಾಸ್ಯೆ ಆಚರಣೆಗೆ ಬಂದಿದೆ.ಈ ದಿನ ಕರಾವಳಿಯಲ್ಲಿ ಪಿತೃ ತರ್ಪಣ ನೀಡುವ ಪದ್ಧತಿ ಅತಿ ಹೆಚ್ಚಾಗಿ ಕಂಡು ಬರುತ್ತದೆ.ಮಾರ್ಗಶಿರ ಮಾಸ ಅತ್ಯಂತ ಪುಣ್ಯವಾದ ಮಾಸ ಎಂದು ಭಗವಂತನೇ ಖುದ್ದಾಗಿ ಹೇಳಿದ್ದಾನೆ. ಇಂತಹ ಪುಣ್ಯ ಮಾಸವನ್ನು ಅರ್ಥಪೂರ್ಣವಾಗಿ ಕಳೆದರೆ ಭಗವಂತನ ಸಂಪೂರ್ಣ ಕೃಪೆ ನಮ್ಮ ಮೇಲೆ ಇರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top