fbpx
ಭವಿಷ್ಯ

ಚಾಣಕ್ಯನ ಪ್ರಕಾರ ಮನುಷ್ಯ ಈ 4 ಜಾಗದಲ್ಲಿ ಅಪ್ಪಿತಪ್ಪಿನ್ನು ನಿಲ್ಲುವುದು ಒಳ್ಳೆಯದಲ್ಲವಂತೆ

ಮನುಷ್ಯ ಈ ನಾಲ್ಕು ಜಾಗಗಳಲ್ಲಿ ಇಂದಿಗೂ ನಿಲ್ಲಬಾರದು.
ಚಾಣಕ್ಯ ಒಬ್ಬ ಮಹಾನ್ ತತ್ವಜ್ಞಾನಿಯಾಗಿದ್ದರು. ಅವರು ಅನೇಕ ವೇದ ಗ್ರಂಥಗಳ ಬಗ್ಗೆ ಅಭ್ಯಾಸ ಮಾಡಿದ್ದಆರು. ಅವರು ರಚಿಸಿದ ಸಿದ್ದಾಂತ ಇಂದಿಗೂ, ಪ್ರತಿ ಕ್ಷೇತ್ರದಲ್ಲೂ ಕೂಡ ಕೆಲಸಕ್ಕೆ ಬರುತ್ತದೆ. ಚಾಣಕ್ಯರ ಸಿದ್ಧಾಂತದ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ.ಅವರು ಹೇಳಿರುವ ಹಾಗೆ ಮನುಷ್ಯ ಈ 4 ಜಾಗಗಳಲ್ಲಿ ಎಂದಿಗೂ ಇರಬಾರದು. ಅವರ ಈ ಸಿದ್ಧಾಂತವು ನಮ್ಮ ಆತ್ಮವಿಶ್ವಾಸವನ್ನು ಪರೀಕ್ಷೆ ಮಾಡಿಸುತ್ತದೆ.

ಎಲ್ಲಿ ಮನುಷ್ಯನಿಗೆ ಗೌರವ ಸಿಗುವುದಿಲ್ಲವೋ, ಮರ್ಯಾದೆ ಸಿಗುವುದಿಲ್ಲವೋ, ಅಂತಹ ಜಾಗದಲ್ಲಿ ಮನುಷ್ಯ ಯಾವತ್ತೂ ನಿಲ್ಲಬಾರದು. ಪ್ರತಿಯೊಬ್ಬರಿಗೂ ಆತ್ಮಗೌರವ ತುಂಬಾನೇ ಪ್ರಿಯವಾಗಿರುತ್ತದೆ. ಆದರೆ ಅದೇ ಅವರಿಗೆ ಸಿಗಲಿಲ್ಲ ಎಂದರೆ ಅವರನ್ನು ಎಷ್ಟೇ ದೊಡ್ಡ ಅರಮನೆಯಲ್ಲಿ ಇಟ್ಟರೂ ಕೂಡ ಅಲ್ಲಿಗೆ ಹೋಗುವುದಕ್ಕೆ ಅಲ್ಲಿ ಇರುವುದಕ್ಕೇ ಇಷ್ಟ ಪಡುವುದಿಲ್ಲ. ಅವಮಾನ ಸಹಿಸುವ ಬದಲು ಎಲ್ಲಿ ಗೌರವ ಮರ್ಯಾದೆ ಸಿಗುತ್ತದೆಯೋ ಅಲ್ಲಿಗೆ ಹೋಗುವುದು ಯಾವಾಗಲೂ ಉತ್ತಮ.

 

 

 

ಎಲ್ಲಿ ಮನುಷ್ಯನಿಗೆ ತನಗೆ ಇಷ್ಟವಾದ ಕೆಲಸಕ್ಕೆ ಅಥವಾ ವ್ಯವಸಾಯಕ್ಕೆ ಅವಕಾಶಗಳು ಇರುವುದಿಲ್ಲ, ಅಂತಹ ಜಾಗದಲ್ಲಿ ಮನುಷ್ಯ ಯಾವತ್ತೂ ಇರಬಾರದು. ಒಂದು ವೇಳೆ ನೀವು ಮಾಡುವ ಕೆಲಸದಲ್ಲಿ ನಿಮಗೆ ಆನಂದ ಸಿಗುವುದಿಲ್ಲ ಎಂದರೆ ಯಾರದ್ದೋ ಒತ್ತಡದಿಂದ ನೀವು ಆ ಕೆಲಸವನ್ನು ಮಾಡುತ್ತಿದ್ದರೆ ನಿಮಗೆ ಅದನ್ನು ನಿಭಾಯಿಸುವುದು ಸಾಧ್ಯವಾಗದೇ ಹೋದರೆ ನೀವು ನಿಮ್ಮ ಇಷ್ಟದ ಕೆಲಸವನ್ನು ಹುಡುಕಬೇಕು. ಆದರೆ ಈಗಿನ ಜಗತ್ತಿನಲ್ಲಿ ನಿಮಗೆ ಇಷ್ಟವಾದ ಕೆಲಸ ಸಿಗುವುದು ಸ್ವಲ್ಪ ಕಷ್ಟವೇ. ಯಾಕೆಂದರೆ ಈಗಿನ ಸ್ಪರ್ದಾತ್ಮಕ ಜಗತ್ತಿನಲ್ಲಿ ತುಂಬಾ ಕಷ್ಟವಿದೆ. ಆದ್ದರಿಂದ ಸದ್ಯದಲ್ಲಿ ನೀವು ಯಾವ ಕೆಲಸ ಮಾಡುತ್ತಿದ್ದೀರ ಅದೇ ಕೆಲಸದಲ್ಲಿ ಆನಂದವನ್ನು ಹುಡುಕಲು ಪ್ರಯತ್ನಿಸಿ.

ನೀವು ಇರುವ ಜಾಗದಲ್ಲಿ ನಿಮ್ಮ ಜೊತೆ ನಿಮ್ಮ ಕುಟುಂಬದವರು ಮತ್ತು ಮಿತ್ರರು ಸರಿಯಾಗಿ ವರ್ತಿಸುವುದಿಲ್ಲ ಎಂದರೆ ಅಂತಹ ಜಾಗದಲ್ಲಿ ನೀವು ಯಾವತ್ತೂ ಇರಬಾರದು. ಮನುಷ್ಯ ಎಂದರೆ ಸಮಾಜದಲ್ಲಿ ಒಂದು ಪ್ರೀತಿಯ ಪ್ರಾಣಿ. ತನ್ನದೇ ಆದ ಭಾವನೆಗಳು ಇರುತ್ತವೆ. ಆದರೆ ಅವರು ಇರುವ ಜಾಗದಲ್ಲಿ ಅವರನ್ನು ಯಾರು ಇಷ್ಟ ಪಡುತ್ತಿಲ್ಲ ಎಂದರೆ ತನ್ನ ಸುಖ, ದುಃಖಗಳನ್ನು ಯಾರ ಜೊತೆ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕೆ ನಾವು ಪ್ರೀತಿಸುವವರ ಜೊತೆ ನಮ್ಮ ಜೊತೆ ಇದ್ದರೆ ಮಜವೇ ಬೇರೆ ಇರುತ್ತದೆ.

ಯಾವ ಜಾಗದಲ್ಲಿ ಮನುಷ್ಯನಿಗೆ ಹೊಸದಾಗಿ ಏನು ಕಲಿಯುವುದಕ್ಕೆ ಸಿಗುವುದಿಲ್ಲ, ಅಂತಹ ಜಾಗದಲ್ಲಿ ಮನುಷ್ಯ ಯಾವತ್ತೂ ಇರಬಾರದು.ಮನುಷ್ಯ ಕಲಿಯುವುದನ್ನು ನಿಲ್ಲಿಸಿದರೆ ಬದುಕು ನಿಲ್ಲುತ್ತದೆ. ಯಾಕೆಂದರೆ ಮನುಷ್ಯನಿಗೆ ಬುದ್ಧಿ ಆ ದೇವರು ಯಾಕೆ ? ಕೊಟ್ಟಿದ್ದಾನೆ ಎಂದರೆ ಹೊಸ ಹೊಸ ವಿಷಯಗಳ ಬಗ್ಗೆ ಕಲಿಯುವುದಕ್ಕೆ ಮತ್ತು ಪ್ರಗತಿಯನ್ನು ಸಾಧಿಸುವುದಕ್ಕೆ ಕೊಟ್ಟಿದ್ದಾನೆ.ಈ ಜಗತ್ತಿನಲ್ಲಿ ಎಷ್ಟು ಪ್ರಖ್ಯಾತ ವ್ಯಕ್ತಿಗಳು ಇದ್ದರೂ ಅವರೆಲ್ಲರೂ ಕೂಡ ಇರುವ ಒಂದು ಸಮಾನ ಗುಣ ಎಂದರೆ ಸತತವಾಗಿ ಹೊಸದಾಗಿ ಏನಾದರೂ ಒಂದನ್ನು ಕಲಿಯುವುದನ್ನು ಮಾಡುತ್ತಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top