fbpx
ದೇವರು

800 ವರ್ಷಗಳ ಇತಿಹಾಸವಿದ್ದು ಜನ್ಮಾಂತರದ ಪಾಪಗಳನ್ನು,ಭಕ್ತರಿಗೆ ಅಂಟಿದ ಗ್ರಹ ದೋಷಗಳನ್ನೂ, ಶಾಪಗಳನ್ನು ಕ್ಷಣಮಾತ್ರದಲ್ಲಿ ಪರಿಹಾರ ಮಾಡೋ ಈ ಮಹಿಮಯುತ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತಾ

ನವಗ್ರಹಗಳ ದೇವಾಲಯದ ವಿಶೇಷತೆ ಮತ್ತು ಮಹಿಮೆ ಏನು ?
ಈ ಭೂಮಿಯ ಮೇಲೆ ಜನ್ಮತಾಳಿದ ಪ್ರತಿಯೊಬ್ಬ ಮನುಷ್ಯ ಗ್ರಹ-ನಕ್ಷತ್ರಗಳ ಆಧಾರದ ಮೇಲೆ ಜೀವಿಸಲ್ಪಟ್ಟಿರುತ್ತಾನೆ. ಗ್ರಹ ನಕ್ಷತ್ರಗಳ ಆಧಾರದ ಮೇಲೆ ವ್ಯಕ್ತಿಯ ಜೀವನದ ಆಗುಹೋಗುಗಳು ನಡೆಯುತ್ತವೆ. ಅದು ಒಳ್ಳೆಯದಾದರೂ ಆಗಿರಬಹುದು ಅಥವಾ ಕೆಟ್ಟದ್ದಾದರೂ ಆಗಿರಬಹುದು. ಹೀಗೆ ಮಾನವನ ಜೀವನದಲ್ಲಿ ತೊಂದರೆಗಳಿದ್ದರೆ ಅವುಗಳನ್ನು ಪರಿಹರಿಸುವುದಕ್ಕೆಂದು ದೇವಸ್ಥಾನಗಳಿವೆ ಅವುಗಳಲ್ಲಿ ಈ ದೇಗುಲವೂ ಒಂದು. ಈ ದೇವಾಲಯದ ದರ್ಶನ ಪಡೆದರೆ ನಮ್ಮ ಜನ್ಮಾಂತರದ ಪಾಪಗಳ ಏನೇ ಇದ್ದರೂ ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಭಕ್ತರದ್ದು.

ತಮ್ಮ ಗ್ರಹಗಳಲ್ಲಿ ಉಂಟಾಗುವ ದೋಷ ಪರಿಹಾರಕ್ಕೆಂದೇ ದೇಶ ವಿದೇಶಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಈ ದೇವಾಲಯವನ್ನು ನೋಡಿದರೆ ಬೇರೆ ಕ್ಷೇತ್ರಗಳಿಗಿಂತ ಇದು ಸ್ವಲ್ಪ ವಿಭಿನ್ನ ಎನಿಸುತ್ತದೆ. ಇಲ್ಲಿ 9 ಗ್ರಹಗಳಿಗೂ ವಿಶೇಷವಾದ ಪೂಜೆ ನಡೆಯುತ್ತದೆ.ಈ ಕ್ಷೇತ್ರ ತನ್ನ ಭಕ್ತರಿಗೆ ಅಂಟಿದ ಶಾಪಗಳನ್ನು ಕ್ಷಣಮಾತ್ರದಲ್ಲಿ ನಾಶಗೊಳಿಸುತ್ತದೆಯಂತೆ. ಭಕ್ತರು ಗೊಂದಲ ಹಾಗೂ ನೊಂದ ಮನಸ್ಸಿನಿಂದ ಇಲ್ಲಿಗೆ ಬಂದರೆ ಅವರ ಕಷ್ಟ ಕಾರ್ಪಣ್ಯಗಳೆಲ್ಲಾ ಆ ಕೂಡಲೇ ಪರಿಹಾರವಾಗುತ್ತವೆ. ಮನುಷ್ಯನಲ್ಲಿ ಅಡಗಿರುವ ಅಹಂಕಾರ ಗುಣವನ್ನು ಇಲ್ಲಿರುವ ನವಗ್ರಹಗಳು ಭಸ್ಮ ಮಾಡುತ್ತವೆ. ಈ ಕ್ಷೇತ್ರಕ್ಕೆ ಬರುವ ಯಾವುದೇ ವ್ಯಕ್ತಿಯಾದರೂ ಕೂಡ ಅವರು ತಮ್ಮ ಅಹಂಕಾರವನ್ನು ಬದಿಗಿಟ್ಟು ಬರಬೇಕು.ಹೀಗೆ ಮಾಡಿದವರಿಗೆ ಕೂಡಲೇ ಈ ಕ್ಷೇತ್ರದಲ್ಲಿ ಶಿಕ್ಷೆ ಆಗುತ್ತದೆ ಎನ್ನುವ ನಂಬಿಕೆ ಕೂಡ ಇದೆ.

 

 

 

ಒಮ್ಮೆ ಈ ದೇವಾಲಯಕ್ಕೆ ಭಕ್ತರು ನಿಷ್ಠೆಯಿಂದ ಬಂದು ದೇವರ ದರ್ಶನ ಪಡೆದರೆ ಆ ಕೂಡಲೇ ಅವರ ಪಾಪಗಳೂ ನಾಶವಾಗಿ ಪುಣ್ಯದೊಂದಿಗೆ ಮೋಕ್ಷ ದೊರೆಯುತ್ತದೆ ಎನ್ನುವುದು ಭಕ್ತಾದಿಗಳ ನಂಬಿಕೆಯಾಗಿದೆ. ಹೀಗಾಗಿಯೇ ಪ್ರತಿ ಸಮಯದಲ್ಲೂ ದೇವಾಲಯದಲ್ಲಿ ಭಕ್ತ ಸಾಗರವೇ ಹರಿದಿರುತ್ತದೆ.ಈ ದೇವಾಲಯದ ಶಕ್ತಿ ಹಾಗೂ ಮಹತ್ವ ಏನು ಎನ್ನುವುದು ಇಲ್ಲಿಗೆ ಬರುವ ಭಕ್ತರನ್ನು ನೋಡಿದರೆ ತಿಳಿಯುತ್ತದೆ.ತನ್ನ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಇಲ್ಲಿಗೆ ಬಂದು ಈ ಪುಣ್ಯ ದೇವಾಲಯದ ದರ್ಶನ ಪಡೆದು ಇಲ್ಲಿಯ ಗಾಳಿಯನ್ನು ಆಸ್ವಾದಿಸಿದರೆ ಸಾಕು ಸ್ವರ್ಗ ಲೋಕ ಪ್ರಾಪ್ತಿಯಾಗುತ್ತದೆ. ಈ ಕ್ಷೇತ್ರ ಮನುಷ್ಯನ ಬದುಕನ್ನು ಬೆಳಗುವ ಜ್ಯೋತಿರ್ಮಯವಾದ ತಾಣ ಎಂದರೆ ತಪ್ಪಾಗುವುದಿಲ್ಲ. ಮನುಷ್ಯನಿಗೆ ಆತ್ಮಬಲವನ್ನು ತುಂಬುವ ಪುಣ್ಯಕ್ಷೇತ್ರವಿದು.

ಹೆಸರೇ ಸೂಚಿಸುವಂತೆ ಇದು ಒಂಬತ್ತು ಗ್ರಹಗಳನ್ನು ಆರಾಧಿಸುತ್ತಿರುವ ಕ್ಷೇತ್ರ. ಈ ದಿವ್ಯ ತಾಣ ಇರುವುದು ತಮಿಳುನಾಡಿನ ತಂಜಾವೂರಿನಲ್ಲಿ. ಈ ಒಂಬತ್ತು ಗ್ರಹಗಳಿಗೂ ತನ್ನದೇ ಆದ ವಿಶೇಷತೆಗಳಿವೆ. ಒಂದೇ ದೇಗುಲದೊಳಗೆ ಸೂರ್ಯ ,ಚಂದ್ರ ಮಂಗಳ, ಬುಧ , ಗುರು ,ಶುಕ್ರ, ಶನಿ, ರಾಹು ಮತ್ತು ಕೇತುಗಳಿಗೆ ಪ್ರತೀಕವಾದ ಪುಟ್ಟ ಪುಟ್ಟ ದೇವಾಲಯವನ್ನು ನಿರ್ಮಿಸಲಾಗಿದೆ. ಭಕ್ತರು ಈ ಕ್ಷೇತ್ರಕ್ಕೆ ಬಂದು ತಮ್ಮ ಗ್ರಹಗಳಲ್ಲಿ ಕಂಡುಬರುವ ದೋಷಗಳನ್ನು ಪರಿಹರಿಸಿಕೊಳ್ಳಬಹುದನ್ನು ನಾವು ಇಲ್ಲಿ ಕಾಣಬಹುದು. ಈ ಒಂಬತ್ತು ಗ್ರಹಗಳು ಒಂದೊಂದು ವಿಶೇಷತೆಯಿಂದ ಕೂಡಿದೆ. ಈ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ನವಗ್ರಹಗಳು ಇಲ್ಲಿ ಭಕ್ತರನ್ನು ಅನುಗ್ರಹಿಸುತ್ತಾರೆ. ಈ ಒಂಬತ್ತು ಗ್ರಹಗಳಲ್ಲಿ ಇಲ್ಲಿ ಮೂಲ ದೇವನಾಗಿ ಸೂರ್ಯದೇವ ಆರಾಧಿಸಲ್ಪಡುತ್ತಿದ್ದಾನೆ. “ಆದಿ ದೇವ ನಮಸ್ತುಭ್ಯಂ ಪ್ರಸಿದ ಮಮ ಭಾಸ್ಕರ ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಸ್ತುತೆ” ಈ ಜಗತ್ತನ್ನು ಬೆಳಗುವ ಸೂರ್ಯ ಪ್ರಾತಃಕಾಲದಲ್ಲಿ ಸೂರ್ಯನನ್ನು ನೋಡಿ ನಮಸ್ಕರಿಸುವುದು ನಮ್ಮ ಜನರು ಆಚರಿಸಿಕೊಂಡು ಬಂದಿರುವ ಸಂಪ್ರದಾಯ ಸೂರ್ಯನ ಬೆಳಕಿಲ್ಲದೆ ಬದುಕೇ ಇಲ್ಲ. ಅವನ ಆಗಮನಕ್ಕಾಗಿ ಸಕಲ ಜೀವರಾಶಿಗಳು ಪ್ರತಿನಿತ್ಯ ಬೆಳಕನ್ನು ಕಾಣುತ್ತಿವೆ. ಕತ್ತಲನ್ನು ಕಳೆದು ಬೆಳಕನ್ನು ಹರಿಸುವ ಎಲ್ಲರ ಬದುಕಿನ ಅಂಧಕಾರವನ್ನು ಕಳೆಯುತ್ತಾನೆ.

 

ಈ ಕ್ಷೇತ್ರದಲ್ಲಿ ಸ್ವಾಮಿ ಭಕ್ತರ ಪಾಪ ನಿವಾರಕನಾಗಿದ್ದಾನೆ. ಸೂರ್ಯದೇವ ತನ್ನ ಪತ್ನಿಯರೊಂದಿಗೆ ಈ ಕ್ಷೇತ್ರದಲ್ಲಿ ವಿರಾಜಮಾನನಾಗಿ ಬಂದವರನ್ನು ಸಲಹುತ್ತಿದ್ದಾನೆ. ಶಿವನ ಎಲ್ಲಾ ಕ್ಷೇತ್ರದಲ್ಲಿ ನಂದಿಯ ವಿಗ್ರಹ ಇರುವಂತೆ ಈ ದೇವಾಲಯದಲ್ಲಿ ಸೂರ್ಯನ ಗರ್ಭಗುಡಿಯ ಮುಂದೆ ಆತನ ವಾಹನ, ಕುದುರೆ ಇರುವುದನ್ನು ಕಾಣಬಹುದು. ದೇವಾಲಯದ ಪಕ್ಕದಲ್ಲಿ ನಿಂತು ಭಗವಂತನ ದರ್ಶನ ಪಡೆದರೆ ಜನ್ಮಜನ್ಮಾಂತರದ ಪಾಪಗಳೆಲ್ಲವೂ ನಾಶವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ ಯಾಗಿದೆ.ಈ ಶಕ್ತಿವಂತರ ದರ್ಶನಕ್ಕೆ ದೇಶ ವಿದೇಶಗಳಿಂದಲೂ ಭಕ್ತರು ಬರುತ್ತಾರೆ.ಇಲ್ಲಿಗೆ ಬಂದವರು ತಮ್ಮ ಜೀವನದಲ್ಲಿ ಗ್ರಹಗಳಿಂದ ಉಂಟಾಗಿರುವ ಏರುಪೇರುಗಳನ್ನು ದೇವರ ಮುಂದೆ ಇಡುತ್ತಾರೆ. ಇಲ್ಲಿ ಸೂರ್ಯ ದೇವರ ದರ್ಶನವಾದ ಬಳಿಕ ಇನ್ನುಳಿದ ಗ್ರಹಗಳನ್ನು ಕಾಣಬಹುದು.ಈ ಎಲ್ಲಾ ಗ್ರಹಗಳಿಗೂ ಪ್ರತ್ಯೇಕವಾದ ಗುಡಿಗಳನ್ನು ನಿರ್ಮಿಸಲಾಗಿದೆ. ಹಾಗೆಯೇ ಈ ಕ್ಷೇತ್ರದ ಗೋಪುರದ ಮಧ್ಯಭಾಗದಲ್ಲಿ ಸೂರ್ಯ ದೇವರನ್ನು ಕಾಣುವುದಕ್ಕೆ ಚೌಕಾಕಾರದ ಸ್ಥಳವಿದೆ. ಅಲ್ಲಿ ನಿಂತು ಭಕ್ತರು ಸೂರ್ಯ ನಮಸ್ಕಾರ ಮಾಡುತ್ತಾರೆ. ಭಕ್ತಿ ಭಾವದಿಂದ ಕೈಮುಗಿದು ತಮ್ಮ ಮನೋಭಿಲಾಷೆಗಳು ಈಡೇರುವಂತೆ ಪ್ರಾರ್ಥಿಸುತ್ತಾರೆ. ಇಲ್ಲಿ ಭಗವಂತನನ್ನು ಒಲಿಸಿಕೊಳ್ಳುವುದಕ್ಕೆ ಒಂದು ವಿಧಾನವಿದೆ. ಅದೇನೆಂದರೆ ಈ ದೇವಾಲಯದಲ್ಲಿ ದೀಪ ಹಚ್ಚಿಟ್ಟು ಪ್ರಾರ್ಥಿಸಿದರೆ ನಮ್ಮ ಪ್ರಾರ್ಥನೆಗಳು ಅತಿ ಬೇಗನೆ ನವಗ್ರಹಗಳನ್ನು ತಲುಪುತ್ತವೆ ಎನ್ನುವುದು ನಂಬಿಕೆ.

 

 

 

ಇಲ್ಲೊಂದು ದ್ವಜ ಸ್ಥಂಭವಿದೆ. ಆ ದ್ವಜ ಸ್ಥಂಬಕ್ಕೆ 9 ಬಾರಿ ಪ್ರದಕ್ಷಿಣೆಗಳನ್ನು ಹಾಕಿದರೆ ಮಾನವನ ಪಾಪ ಕರ್ಮಗಳಿಂದ ಮುಕ್ತಿ ಪಡೆಯುತ್ತಾನೆ ಎನ್ನುವ ನಂಬಿಕೆಯೂ ಇದೆ. ಪ್ರತಿಯೊಂದು ಕ್ಷೇತ್ರದಲ್ಲೂ ನಾವು ವಿಘ್ನ ವಿನಾಶಕನನ್ನು ಕಾಣಬಹುದು. ವಿನಾಯಕನಿಗೆ ಪೂಜೆ ಅರ್ಚನೆ ಆದ ನಂತರವೇ ಇಲ್ಲಿರುವ 9 ನವಗ್ರಹಗಳಿಗೆ ಪೂಜೆ ಸಲ್ಲುವುದು.ಈ ಕಾರಣಕ್ಕಾಗಿಯೇ ಗಣಪತಿಯನ್ನು ಪ್ರಥಮ ಪೂಜೆಗೆ ಅಧಿಪತಿ ಎಂದು ಕರೆಯುವುದು. ದೇವಾನು ದೇವತೆಗಳಿಂದ ಈ ಕ್ಷೇತ್ರ ಭಕ್ತರ ಬಾಳನ್ನು ಬೆಳಗುತ್ತಿರುವುದು. ಈ ಕ್ಷೇತ್ರದ ವೈಶಿಷ್ಟ್ಯತೆ ಭಕ್ತರು ನಕ್ಷತ್ರ ದೋಷ ನಿವಾರಣೆ, ಸುಖ ದಾಂಪತ್ಯ, ಮಕ್ಕಳ ಜೀವನ ಹಾಗೂ ಒಳ್ಳೆಯ ವಿದ್ಯಾಭ್ಯಾಸ ಹೊಂದಬೇಕು ಎನ್ನುವ ದೃಷ್ಟಿಯಿಂದ ಈ ದೇವಾಲಯಕ್ಕೆ ಬಂದು ಪೂಜೆಯನ್ನು ಸಲ್ಲಿಸುತ್ತಾರೆ. ಹೀಗೆ ಬರುವ ಭಕ್ತರು ದೇವರ ಅಭಿಷೇಕಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿ ಜೊತೆಗೆ ಇಲ್ಲಿರುವ ಮರಕ್ಕೆ ತೊಟ್ಟಿಲನ್ನು ಕಟ್ಟುವ ಪದ್ಧತಿಯೂ ಇದೆ. ಇಲ್ಲಿ ನೆಲೆ ನಿಂತಿರುವ ಮಹಿಮಾನ್ವಿತ ದೇವರು ಸಂಕಷ್ಟಗಳಿಂದ ಭಕ್ತರನ್ನು ಸದಾ ಪಾರು ಮಾಡುತ್ತಾ ಇದ್ದಾನೆ.

ಹೀಗಾಗಿ ಈ ಪುಣ್ಯ ಸ್ಥಳದಲ್ಲಿ ನಿತ್ಯವೂ ಧನ್ವಂತರಿ ಹೋಮ, ಶನೇಶ್ವರ ಪೂಜೆ, ಮಂಗಳ ಗ್ರಹದ ಪೂಜೆಗಳು ವಿಶೇಷವಾಗಿ ನಡೆಯುತ್ತಲೇ ಇರುತ್ತವೆ.ಇಂತಹ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರೆ ತಾವು ಮಾಡಿದ ಪಾಪಕರ್ಮಗಳೆಲ್ಲ ನಶಿಸಲಿ ಎಂದು ದೇವಾಲಯದಲ್ಲಿ ಭಕ್ತಿ ಭಾವದಿಂದ ಬೇಡಿಕೊಳ್ಳುತ್ತಾರೆ.ಈ ಕ್ಷೇತ್ರಗಳಲ್ಲಿ ನೆಲೆಸಿರುವ ದೇವರಿಗೆ ವಿಶೇಷವಾಗಿ ಪೂಜಾ ಕೈಂಕರ್ಯಗಳನ್ನು ಸೇವೆಗಳನ್ನು ಸಲ್ಲಿಸಿದರೆ ಬೇಗನೇ ಒಲಿಯುತ್ತಾನೆ ಎನ್ನುವ ನಂಬಿಕೆ ಇದೆ. ಇಲ್ಲಿ ನವಗ್ರಹ ಸೇವೆ, ಸೂರ್ಯ ಅರ್ಚನೆ, ನವಗ್ರಹ ಅಭಿಷೇಕ, ತುಲಾಭಾರ ಹೀಗೆ ಅನೇಕ ಸೇವೆಗಳು ಭಗವಂತನಿಗೇ ಸಲ್ಲುತ್ತದೆ. ಕೋನಾರ್ಕ್ ನಲ್ಲಿರುವ ಸೂರ್ಯದೇವನನ್ನು ಬಿಟ್ಟರೆ ಇಲ್ಲಿರುವ ಸೂರ್ಯ ಕ್ಷೇತ್ರವೇ ಅತೀ ಶಕ್ತಿವಂತ ಕ್ಷೇತ್ರ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ರಥಸಪ್ತಮಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂದು ಈ ಕ್ಷೇತ್ರಕ್ಕೆ ಸಹಸ್ರಾರು ಭಕ್ತರು ಬರುತ್ತಾರೆ.ಈ ಸಂದರ್ಭದಲ್ಲಿ ನವಗ್ರಹಗಳಿಗೆ ವಿಶೇಷವಾದ ಅಭಿಷೇಕ, ಅರ್ಚನೆಗಳು ಸಲ್ಲುತ್ತವೆ. ಹಾಗೆಯೇ ಇಲ್ಲಿ ನಡೆಯುವ ರಥೋತ್ಸವವನ್ನು ಕಣ್ತುಂಬಿಕೊಳ್ಳುವುದೇ ಪರಮೋಚ್ಛ ಭಾಗ್ಯ. ಇನ್ನು ಈ ಕ್ಷೇತ್ರದಲ್ಲಿ ಕುಳಿತು “ನವಗ್ರಹ ಮಂತ್ರವಾದ “ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ ಗುರು ಶುಕ್ರ ಶನೈಶ್ಚ ರಾಹುವೇ ಕೇತುವೇ ನಮಃ” ಎನ್ನುವ ಈ ಶ್ಲೋಕವನ್ನು ಪಠಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.

 

ಈ ಮಂತ್ರವನ್ನು ಪಠಿಸಿ ಈ ಕ್ಷೇತ್ರದಲ್ಲಿ ದೀಪ ಬೆಳಗುವುದರಿಂದ ನವಗ್ರಹ ಫಲ ಪ್ರಾಪ್ತಿಯಾಗುತ್ತದೆ. ಹಾಗೆಯೇ ಇಲ್ಲಿನ ಮೂಲ ದೇವನಾದ ಸೂರ್ಯ ಸಂಪ್ರೀತನಾಗುತ್ತಾನೆ. ಸೂರ್ಯನಿಗೆ ಬೆಳ್ಳಿಯ ದೀಪವನ್ನು ಬೆಳಗಿಸುವುದರಿಂದ ಬಡತನ ನಿವಾರಣೆಯಾಗಿ ಆರೋಗ್ಯ ಪ್ರಾಪ್ತಿಯಾಗುತ್ತದೆ ಮತ್ತು ಕಷ್ಟಗಳು ಶಮನವಾಗುತ್ತದೆ.ಈ ಕ್ಷೇತ್ರ ನಿಜಕ್ಕೂ ಮಾನವನ ಪಾಪವನ್ನು ನಿವಾರಿಸಿ ಜೀವನವನ್ನು ಹಸಿರಾಗಿಸುವ ದಿವ್ಯ ತಾಣ. ನೀವು ಕೂಡ ಈ ಪುಣ್ಯ ಕ್ಷೇತ್ರಕ್ಕೆ ಯಾತ್ರೆಯನ್ನು ಕೈಗೊಂಡು ನಿಮ್ಮ ಜಾತಕದಲ್ಲಿ ಗ್ರಹ ದೋಷಗಳು ಇದ್ದರೆ ಅವುಗಳನ್ನು ನಿವಾರಿಸಿಕೊಂಡು ಸಾರ್ಥಕವಾಗಿ ಪುಣ್ಯ ಸಂಪಾದನೆ ಪಡೆದುಕೊಳ್ಳಬಹುದು. ನವಗ್ರಹ ದೋಷಗಳನ್ನು ಪರಿಹರಿಸುವ ಈ ದೇವಾಲಯ ಇರುವುದು ತಮಿಳುನಾಡಿನ ತಾಂಜಾವೂರು ಪಟ್ಟಣದಲ್ಲಿ. ಬೆಂಗಳೂರಿನಿಂದ ಈ ಸ್ಥಳಕ್ಕೆ ನೇರವಾಗಿ ಬಸ್ ಸೌಲಭ್ಯವಿದ್ದು, ಇಲ್ಲಿಂದ 391 ಕಿಲೋಮೀಟರ್ ಅಂತರದಲ್ಲಿದೆ. ಈ ದೇವಾಲಯ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಹಾಗೂ ಮಧ್ಯಾಹ್ನ ನಾಲ್ಕು ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ. ಈ ಸಮಯದಲ್ಲಿ ಭಕ್ತರು ದೇವಾಲಯಕ್ಕೆ ಬಂದು ತಮ್ಮ ಗ್ರಹ ದೋಷ ಪರಿಹಾರ ಮಾಡಿಕೊಳ್ಳುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top