fbpx
ಕ್ರಿಕೆಟ್

ಕ್ರಿಕೆಟ್ ನಲ್ಲಿ ಇನ್ಮುಂದೆ ನಾಣ್ಯ ಬಳಸಿ ಟಾಸ್ ಹಾಕಲ್ವಂತೆ ಹಾಗಾದರೆ ನಾಣ್ಯದ ಬದಲಿಗೆ ಏನನ್ನು ಬಳಸಲಾಗುವುದು ಗೊತ್ತೇ?

ಕ್ರಿಕೆಟ್ ನಲ್ಲಿ ಬಹಳ ಹಿಂದಿನ ಕಾಲದಿಂದಲೂ ಪಂದ್ಯ ಶುರುವಾಗುವ ಮುನ್ನ ಎರಡು ತಂಡದ ನಾಯಕರನ್ನು ಕರೆಸಿ ಯಾರು ಬ್ಯಾಟಿಂಗ್ ಅಥವಾ ಯಾರು ಫೀಲ್ಡಿಂಗ್ ಆಯ್ಕೆ ತೆಗೆದುಕೊಳ್ಳಲು ಇಚ್ಛಿಸುವರು ಎಂಬುದನ್ನು ನಿರ್ಣಯಿಸುವ  ಸಲುವಾಗಿ ಟಾಸ್ ಮಾಡಲಾಗುತ್ತಿದೆ. ಆದರೆ ಈ ಸಾಂಪ್ರದಾಯಿಕ ಟಾಸ್ ಗೆ ಇದೀಗ ಗುಡ್ ಬೈ ಹೇಳುವ ಸಮಯ ಬಂದಿದು. ಹೌದು, ಇನ್ನೂ ಮುಂದೆ ಕ್ರಿಕೆಟ್ ನಲ್ಲಿ ನಾಣ್ಯದ ಬದಲಿಗೆ ಮತ್ತೇ ಬೇರೇನನ್ನೋ ಬಳಸಲಾಗುತ್ತದಂತೆ.

ಕ್ರಿಕೆಟ್ ನ ಬಿಗ್ ಬ್ಯಾಷ್ ಲೀಗ್ ಟಿ20 ಟೂರ್ನಿಯಲ್ಲಿ ನಾಣ್ಯದ ಬದಲಿಗೆ ಬ್ಯಾಟನ್ನೇ ಟಾಸ್ ಗೆ ಬಳಸಿಕೊಳ್ಳಲಾಗುತ್ತಿದೆ. ನಾಣ್ಯದಲ್ಲಾದರೇ ನಾಯಕನಾದವನು ಹೆಡ್ಸ್ ಅಥವಾ ಟೇಲ್ಸ್ ಎಂದು ಕೂಗಬೇಕಿತ್ತು.ಆದರೆ ಈಗ ಬ್ಯಾಟ್ ಚಿಮ್ಮಿಸುವ ವೇಳೆ ನಾಯಕರು ಹಿಲ್ಸ್ ಅಥವಾ ಫ್ಲಾಟ್ಸ್ ಎಂದು ಕೂಗಬೇಕಿದೆ. ಈ ಮೂಲಕ ಕ್ರಿಕೆಟ್ ನಲ್ಲಿ ಒಂದು ಹೊಸದಾದ ಅಧ್ಯಾಯ ಬರೆಯಲು ಬಿಗ್ ಬ್ಯಾಷ್ ಲೀಗ್ ಆಡಳಿತ ಮಂಡಳಿ ಮುಂದಾಗಿದೆ ಎಂದು ತಿಳಿದು ಬಂದಿದ್ದು ಈ ಮೂಲಕ ಹಳೆಯ ಟಾಸ್ ಪದ್ದತಿಯನ್ನು ಕೈ ಬಿಡಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top