fbpx
ರಾಜಕೀಯ

ಅಸ್ಸಾಂ ನಲ್ಲಿ ಅರಳಿತು ಕಮಲ – ಸಿಕ್ಕಿತು ಗೆಲುವು

ಇತ್ತೀಚೆಗಷ್ಟೇ ನಡೆದ ಪಂಚರಾಜ್ಯ ಚುನಾವಣೆಯಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿ ಸಂಕಷ್ಟಕ್ಕೆ ಗುರಿಯಾಗಿತ್ತು. ಬಿಜೆಪಿ ಸೋತಾಗಿನಿಂದ ತನ್ನ ಸೋಲಿನ ಪರಮಾಸ್ರ್ಶೆ ಮಾಡುತ್ತಿದ್ದು. ಪಂಚ ರಾಜ್ಯಗಳು ತಮ್ಮ ಕೈ ಬಿಟ್ಟು ಹೋಗಲು ಕಾರಣಗಳೇನು ಎಂದು ಚರ್ಚಿಸುತ್ತಿದೆ, ಇದೀಗ ಈ ಬೆನ್ನಲ್ಲೇ ಬಿಜೆಪಿ ಕೊಂಚ ನೆಮ್ಮದಿ ಕಾಣಬಹುದಾದ ವಿಚಾರವೊಂದು ಬಂದಿದ್ದು. ಸೋಲಿನ ಕಹಿ ಅನುಭದಿಂದ ಬಸವಳಿದಿದ್ದ ಬಿಜೆಪಿ ಗೆ ಅಸ್ಸಾಂನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆ ಮತ್ತೆ ಶಕ್ತಿ ತುಂಬಿದಂತಾಗಿದೆ. ಹೌದು, ಅಲ್ಲಿ ಬಿಜೆಪಿ ತನ್ನ ಜಯದ ಹಾದಿಯನ್ನು ಮುಂದುವರಿಸಿದ್ದು, ಅಸ್ಸಾಂ ಪಂಚಾಯತ್ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಈ ಮೂಲಕ ಗೆಲುವಿನ ಸಿಹಿ ಉಂಡಿದೆ. ಇದರಿಂದಾಗಿ ಲೋಕಸಭಾ ಚುನಾವಣೆಯ ಕುರಿತಾಗಿ ಮತ್ತೆ ಭರವಸೆ ಚಿಗುರಿದೆ.

ಡಿಸೆಂಬರ್ 5 ಹಾಗೂ 9 ರಂದು 2 ಹಂತದಲ್ಲಿ ನಡೆದ ಚನಾವಣೆಯ ಫಲಿತಾಂಶ ಡಿಸೆಂಬರ್ 14ರ ಶುಕ್ರವಾರ ಪ್ರಕಟವಾಗಿದ್ದು, ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ವಿಜಯ ಪತಾಕೆಯನ್ನು ಹಾರಿಸಿದೆ
ಎಂದು ತಿಳಿದು ಬಂದಿದೆ.

ಚುನಾವಣೆಯ ವಿವರ ಇಂತಿದೆ :

ಅಸ್ಸಾಂನ 2199 ಗ್ರಾಮ ಪಂಚಾಯತ್ ಅಧ್ಯಕ್ಷರು, 21,999 ಪಂಚಾಯತ್ ಸದಸ್ಯ ಹುದ್ದೆಗೆ, 2199 ಅಂಚಾಲಿಕ್ ಪಂಚಾಯತ್ ಅಧ್ಯಕ್ಷ ಹುದ್ದೆಗೆ, 420 ಜಿಲ್ಲಾ ಪಂಚಾಯತ್ ಸದಸ್ಯ ಹುದ್ದೆಗೆ ಚುನಾವಣೆ ನಡೆದಿದ್ದು, ಶೇ.82ರಷ್ಟು ಮತದಾನ ನಡೆದಿತ್ತು ಎಂದು ತಿಳಿದು ಬಂದಿದೆ.

ಒಟ್ಟು 7769 ಪಂಚಾಯತ್ ಸೀಟುಗಳಲ್ಲಿ ಬಿಜೆಪಿ ಗೆದ್ದಿದ್ದು, ಕಾಂಗ್ರೆಸ್ 5896 ಸೀಟುಗಳನ್ನು ಪಡೆದಿದೆ. ಇನ್ನು ಎಜಿಪಿ 1372, AIUDF 755 ಇತರೆ 2112 ಗೆಲುವು ಪಡೆದಿವೆ. ಇನ್ನು ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 223, ಕಾಂಗ್ರೆಸ್ 139, ಎಜಿಪಿ 18 ಸೀಟುಗಳನ್ನು ಗೆದ್ದುಕೊಂಡಿವೆ.

ಒಟ್ಟಿನಲ್ಲಿ ಈ ಜಯದಿಂದ ಬಿಜೆಪಿ ಪಾಳೆಯದವರ ಮೊಗದಲ್ಲಿ ಮುಗುಳುನಗೆ ಮೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top