fbpx
ದೇವರು

ಮಾರ್ಗಶಿರ ಮಾಸದ ಗುರುವಾರ ಹೀಗೆ ಲಕ್ಷ್ಮಿ ವ್ರತಚರಣೆ ಮಾಡಿದ್ರೆ ಏನ್ ಆಗುತ್ತೆ ಗೊತ್ತಾ,ಅದರ ವಿಶೇಷತೆ ಏನ್ ಗೊತ್ತಾ

ಮಾರ್ಗಶಿರ ಮಾಸದ ಗುರುವಾರಗಳಂದು ಲಕ್ಷ್ಮಿ ವ್ರತಚರಣೆಯ ಮತ್ತು ಪೂಜೆಯ ವಿಶೇಷತೆ ಏನು ?
ಮಾರ್ಗಶಿರ ಮಾಸದಲ್ಲಿ ಪ್ರತಿ ಗುರುವಾರ ಮಹಾಲಕ್ಷ್ಮಿಯ ವ್ರತವನ್ನು ಆಚರಣೆ ಮಾಡಬೇಕು. ಒಟ್ಟಾರೆಯಾಗಿ ಮಾರ್ಗಶಿರ ಮಾಸದಲ್ಲಿ ಐದು ಮಹಾಲಕ್ಷ್ಮಿ ವ್ರತ ಗಳು ಬರುತ್ತವೆ. ಸಂಪತ್ತು ವೃದ್ಧಿಸಿ ಸಂಕಷ್ಟಗಳನ್ನು ನಿವಾರಿಸುವ ಮಹಾಲಕ್ಷ್ಮಿ ವ್ರತ ಅತ್ಯಂತ ಶ್ರೇಷ್ಠ. ಮಾರ್ಗಶಿರ ಮಾಸದಲ್ಲಿ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಲಕ್ಷ್ಮಿ ಇಂದೂಗಳ ಆರಾಧ್ಯ ದೇವತೆ. ವೈಕುಂಠದ ಅಧಿಪತಿ ಶ್ರೀ ಮಹಾವಿಷ್ಣುವಿನ ಪತ್ನಿ, ಸಮುದ್ರ ಮಂಥನದ ವೇಳೆ ಜನಿಸಿದ ಈಕೆ ಹಣ , ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆ. ಭಾರತೀಯ ಪರಂಪರೆಯಲ್ಲಿ ಲಕ್ಷ್ಮಿ ಎಂದರೆ ಸಂಪತ್ತು, ಸೌಂದರ್ಯ, ಸಮೃದ್ಧಿ, ವಿಜಯ ಹಾಗೂ ಯಶಸ್ಸುಗಳ ಸಂಕೇತ.

ಇಂದೂ ಧರ್ಮದ ನಾಲ್ಕು ವೇದಗಳಲ್ಲಿ ಒಂದಾದ ಋಗ್ವೇದದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ಮತ್ತು ಅದೃಷ್ಟದ ಸಂಕೇತವಾಗಿ ಮಾತ್ರ ಬಳಸಿಲ್ಲ ಬದಲಾಗಿ ಲಕ್ಷ್ಮಿ ಎಂದರೆ ಮಂಗಳಕರ, ಐಶ್ವರ್ಯದ ಸಂಕೇತ ಎನ್ನಲಾಗುತ್ತದೆ. ಹಾಗೆ ಅಥರ್ವಣ ವೇದದಲ್ಲಿ ಲಕ್ಷ್ಮಿಯನ್ನು ಅದೃಷ್ಟ, ಐಶ್ವರ್ಯ, ಸಂಪತ್ತು ಮತ್ತು ಯಶಸ್ಸಿನ ಸಂಕೇತವಾಗಿ ಈ ಲಕ್ಷ್ಮಿಯನ್ನು ವರ್ಣಿಸಲಾಗಿದೆ.ಆದಿಲಕ್ಷ್ಮಿ , ದೈರ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನ ಲಕ್ಷ್ಮಿ, ವಿಜಯ ಲಕ್ಷ್ಮಿ, ವಿದ್ಯಾ ಲಕ್ಷ್ಮೀ ಮತ್ತು ಧನ ಲಕ್ಷ್ಮಿ ಈ ಅಷ್ಟಲಕ್ಷ್ಮಿಯರಲ್ಲಿ ಒಂದೊಂದು ಲಕ್ಷ್ಮಿಯ ಆರಾಧನೆಯಿಂದ ಒಂದೊಂದು ವಿಶೇಷ ಫಲ ಸಿಗುತ್ತದೆ. ಅದರಲ್ಲೂ ಮಾರ್ಗಶಿರ ಮಾಸದಲ್ಲಿ ಲಕ್ಷ್ಮಿ ವ್ರತ ಮಾಡುವುದರಿಂದ ವಿಶೇಷ ಫಲಗಳನ್ನು ಪಡೆಯಬಹುದು.
ಮಾರ್ಗಶಿರ ಮಾಸ ಹೇಳಿಕೇಳಿ ಮಹಾವಿಷ್ಣುವಿನ ಮಾಸ. ಇಂತಹ ಮಾಸದಲ್ಲಿ ವಿಷ್ಣುವಿನ ಮನದನ್ನೆಯ ಪೂಜೆ ಇಲ್ಲದೇ ಹೋದರೆ ಹೇಗೆ . ಹೌದು ಮಾರ್ಗಶಿರ ಮಾಸದಲ್ಲಿ ಮಹಾಲಕ್ಷ್ಮೀ ದೇವಿಯ ಪೂಜೆಯನ್ನು ಮಾಡಲೇಬೇಕು ಅದು ಕೂಡ ವಿಶೇಷವಾಗಿ ಗುರುವಾರಗಳಂದು ಲಕ್ಷ್ಮಿ ಪೂಜೆ ಮಾಡಿದರೆ ಸಂಪತ್ತಿನ ಹೊಳೆಯೇ ಹರಿಯುತ್ತದೆ.

 

 

 

ಮಾರ್ಗಶಿರ ಮಾಸದಲ್ಲಿ ಲಕ್ಷ್ಮಿ ಪೂಜೆ ಶ್ರೇಷ್ಠ ಏಕೆ ?
ಮಾರ್ಗಶಿರ ಮಾಸದ ಗುರುವಾರಗಳಂದು ಮಹಾಲಕ್ಷ್ಮೀಯನ್ನು ಪೂಜಿಸಿದರೆ ಸಂಪತ್ತಿನ ಅಭಿವೃದ್ಧಿಯಾಗುತ್ತದೆ. ಮಾರ್ಗಶಿರ ಮಾಸದಲ್ಲಿ ಲಕ್ಷ್ಮಿ ಪೂಜೆ ಅತ್ಯಂತ ಶ್ರೇಯಸ್ಕರ. ಮಾರ್ಗಶಿರ ಮಾಸದಲ್ಲಿ ಲಕ್ಷ್ಮಿ ಪೂಜೆಯ ವಿಧಾನ ಅತ್ಯಂತ ವಿಶೇಷ. ಗುರುವಾರಗಳಂದು ವಿಶೇಷವಾಗಿ ಲಕ್ಷ್ಮಿಯ ಸಹೋದರನಾದ ಶಂಖ ಪೂಜೆಯಿಂದ ಲಕ್ಷ್ಮಿ ಕಟಾಕ್ಷ ವಾಗುತ್ತದೆ. ಅದರಲ್ಲೂ ದಕ್ಷಿಣಾಭಿಮುಖವಾಗಿರುವ ಶಂಖ ಪೂಜೆ ಅತ್ಯಂತ ಶ್ರೇಷ್ಠ. ಶಂಖವನ್ನು ಯಾರ ಮನೆಯಲ್ಲಿ ಪೂಜಿಸುತ್ತಾರೋ ಅಲ್ಲಿ ಲಕ್ಷ್ಮಿ ದೇವಿಯ ಸಾನ್ನಿಧ್ಯವಿರುತ್ತದೆ.ಈ ಪ್ರಕಾರದಲ್ಲಿ ತ್ರಿಮೂರ್ತಿಗಳು ನೆಲೆಸಿದ್ದಾರೆ. ಮಾರ್ಗಶಿರ ಮಾಸದಲ್ಲಿ ಗುರುವಾರಗಳಂದು ಶಂಖನಾದ ಮಾಡುವುದರಿಂದ ಲಕ್ಷ್ಮಿ ತನ್ನ ಭಕ್ತರಿಗೆ ಸಂಪತ್ತು ನೀಡಿ ಉದ್ಧಾರ ಮಾಡುತ್ತಾಳೆ.

ಪ್ರಾತಃಕಾಲದಲ್ಲಿ ಎದ್ದು ಬ್ರಾಹ್ಮೀ ಮುಹೂರ್ತದಲ್ಲಿ ಲಕ್ಷ್ಮಿ ದೇವಿಯ ಆವಾಹನೆ ಮಾಡಿ, ಲಕ್ಷ್ಮೀದೇವಿಯನ್ನು “ಪದ್ಮಪ್ರಿಯೆ, ಪದ್ಮಿನಿ, ಪದ್ಮಹಸ್ತೆ, ಪದ್ಮಾಲಯೆ, ಪದ್ಮ ದಳಾಯತಾಕ್ಷೆ, ವಿಶ್ವಪ್ರಿಯೆ, ವಿಶ್ವ ಮನೋನುಕೂಲೆ, ಪದ್ಮದ ಪದ್ಮ ಮಹಿಸಂವಿದತ್ವ” ಈ ಮಂತ್ರವನ್ನು ಹೇಳಿ ಲಕ್ಷ್ಮೀದೇವಿಯನ್ನು ಆವಾಹನೆ ಮಾಡಿ, ವ್ಯವಸ್ಥಿತವಾಗಿ ಲಕ್ಷ್ಮೀದೇವಿಗೆ ಶೋಡಷ ಉಪಚಾರ ಮತ್ತು ಅರ್ಚನೆಯನ್ನು ಮಾಡಿ ಹೆಸರು ಬೇಳೆ ಕೋಸಂಬರಿ ಮತ್ತು ನಿಂಬೆಹಣ್ಣಿನ ಪಾನಕವನ್ನು ನೇವೇದ್ಯ ಮಾಡಿ ಸುಮಾರು ಜನರಿಗೆ ಯಥಾನುಶಕ್ತಿ ಹರಿಶಿಣ ಕುಂಕುಮಗಳನ್ನು ಕೊಟ್ಟು ಪ್ರಸಾದವನ್ನು ವಿನಿಯೋಗಿಸಿ ಸುಮಂಗಲಿಯರಿಗೆ ನಮಸ್ಕಾರವನ್ನು ಮಾಡಿ.
ಯಾರು ಈ ಮಾರ್ಗಶಿರ ಮಾಸದ ಗುರುವಾರದ 5 ಮಹಾಲಕ್ಷ್ಮಿ ವ್ರತವನ್ನು ನಿಯಮಬದ್ಧವಾಗಿ ಆಚರಣೆ ಮಾಡುತ್ತಾರೆ ಅವರಿಗೆ ದರಿದ್ರತೆ ಎನ್ನುವುದು ಕಾಡುವುದಿಲ್ಲ.ಸಕಲ ಸಂಪತ್ತುಗಳು ಲಭಿಸಿ ಲಕ್ಷ್ಮೀ ದೇವಿಯ ಕೃಪೆ ಸದಾಕಾಲ ನಿಮ್ಮ ಮೇಲೆ ಇರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top