fbpx
ಸಮಾಚಾರ

2000, 500, 200 ರೂ ಮುಖಬೆಲೆಯ ಹೊಸ ನೋಟುಗಳು ಬ್ಯಾನ್?

ಅರೆ! ಇದೇನು ಹೋದ ವರ್ಷ ತಾನೇ ಕೆಲವು ನೋಟುಗಳನ್ನ ಬ್ಯಾನ್ ಆಗಿ ಹೊಸ ನೋಟುಗಳು ಬಂದಿದ್ದವು.ಇದೀಗ ಮತ್ತೆ 200, 500 ಹಾಗೂ 2000 ರೂಪಾಯಿಯ ನೋಟುಗಳು ಬ್ಯಾನ್ ಆಗುತ್ತಾ ? ಅಯ್ಯೋ! ದೇವರೇ, ಹೇಗಪ್ಪಾ ಮತ್ತೆ ನೋಟುಗಳ ಎಕ್ಸ್ಚೇಂಜ್ ಗಾಗಿ ಬ್ಯಾಂಕ್ ಗಳ ಮುಂದೆ ಸರದಿ ಸಾಲಲ್ಲಿ ನಿಲ್ಲೋದು ಅಂತ ಕಳವಳಪಟ್ಕೋತಿದೀರಾ? ಹಾಗಾದರೆ ಡೋಂಟ್ ವರಿ. ಮೇಲೆ ಹೇಳಿದಂತೆ 200, 500 ಹಾಗೂ 2000 ರೂಪಾಯಿಯ ಭಾರತೀಯ ಕರೆನ್ಸಿ ಚಲಾವಣೆಗೆ ಸರ್ಕಾರ ನಿಷೇಧ ಹೇರಿರುವುದಂತೂ ನಿಜಾ..ಆದರೆ ಗಮನಿಸಬೇಕಾದ ವಿಷ್ಯ ಏನೆಂದರೆ ಈ ನೋಟುಗಳಿಗೆ ನಿಷೇಧ ಹೇರಿರೋದು ನೇಪಾಳ ಸರ್ಕಾರವೇ ಹೊರತು ನಮ್ಮ ಸರ್ಕಾರವಲ್ಲ.

ಯಾವುದೇ ಕಾರಣಕ್ಕೂ ಭಾರತದ ಹೊಸ ಕರೆನ್ಸಿ ನೋಟುಗಳನ್ನ ವ್ಯವಹಾರಕ್ಕೆ ಬಳಸಬಾರದು. ಜೊತೆಗೆ ಹಣ ಸಾಗಾಟ ಮಾಡಬಾರದು. 200 ರೂಪಾಯಿ, 500 ರೂಪಾಯಿ ಹಾಗೂ 2000 ರೂಪಾಯಿ ನೋಟುಗಳುನ್ನ ನೇಪಾಳದಲ್ಲಿ ಇಟ್ಟುಕೊಂಡರೆ ಅದನ್ನು ಕಾನೂನು ಬಾಹಿರ ಅಂತಾ ಪರಿಗಣಿಸಬೇಕು ಅಂತಾ ನೇಪಾಳ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ​ತಮ್ಮಲ್ಲಿರುವ 200, 500 ಮತ್ತು 2,000 ರೂಪಾಯಿ ಮುಖಬೆಲೆಯ ಕರೆನ್ಸಿಗಳನ್ನು ಬದಲಿಸಿಕೊಳ್ಳಿ ಎಂದು ನಾಗರಿಕರಿಗೆ ನೇಪಾಳ ಸರ್ಕಾರ ಕರೆ ನೀಡಿದೆ ಎಂದು ತಿಳಿದು ಬಂದಿದೆ.

ನೇಪಾಳಸರ್ಕಾರ ಹೀಗೆ ನೋಟುಗಳು ಬ್ಯಾನ್ ಮಾಡಿರುವುದರ ಹಿಂದಿನ ಕಾರಣ ಏನು ಗೊತ್ತಾ ?

ನೇಪಾಳ ಸರ್ಕಾರ 200, 500 ಹಾಗೂ 2000 ರೂಪಾಯಿಯ ಭಾರತೀಯ ಕರೆನ್ಸಿ ಚಲಾವಣೆಗೆ ನಿಷೇಧ ಹೇರಲು ಕಾರಣ ಏನೆಂದರೆ , ನೇಪಾಳದಲ್ಲಿ ನಮ್ಮ ಭಾರತದ ನೋಟುಗಳು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಇಲ್ಲದಿದ್ದರೂ ನೇಪಾಳ ಭಾರತದ ಗಡಿಭಾಗದಲ್ಲಿರುವವರು ವ್ಯಾಪಾರ ವಹಿವಾಟು ಸಂದರ್ಭದಲ್ಲಿ ಭಾರತದ ಕರೆನ್ಸಿಗಳ ಬಾಲಸುತ್ತಿದ್ದರು. ಹಾಗೂ ಭಾರತದಲ್ಲಿ ಕೆಲಸ ಮಾಡುವ ನೇಪಾಳಿಗರು ವಾಪಸ್ ಮನೆಗೆ ಹೋಗುವಾಗ ಹಾಗೂ ಪ್ರವಾಸಿಗರು ಹಿಮಾಲಯ ನೋಡಲು ಹೊರಟಾಗ ಭಾರತದ ಕರೆನ್ಸಿಯನ್ನೇ ಬಳಸುತ್ತಿದ್ದರು ಇದರಿಂದಾಗಿ ಕಳೆದ ಬಾರಿ ಭಾರತ ಸರ್ಕಾರ 500, 1000 ರೂಪಾಯಿ ನೋಟ್​ಬ್ಯಾನ್ ಮಾಡಿದಾಗ ನೇಪಾಳದಲ್ಲಿ ಬರೋಬ್ಬರಿ 950 ಕೋಟಿ ಚಲಾವಣೆಯಲ್ಲಿತ್ತು. ಇದರಿಂದಾಗಿ ನೇಪಾಳದ ಬೊಕ್ಕಸಕ್ಕೆ ನಷ್ಟ ಉಂಟಾಯಿತು ಆದ್ದರಿಂದಾಗಿ ಈ ನಷ್ಟ ಮತ್ತೆ ಘಟಿಸಬಾರದೆಂಬ ಕಾರಣಕ್ಕೆ ನೇಪಾಳದ ಸರಕಾರ 200, 500 ಹಾಗೂ 2000 ರೂಪಾಯಿಯ ಭಾರತೀಯ ಕರೆನ್ಸಿ ಚಲಾವಣೆಗೆ ನಿಷೇಧ ಹೇರಿದೆ. ಹಾಗೂ ಈ ಕುರಿತಂತೆ ಸವಿವರವಾಗಿ ಭಾರತ ಸರ್ಕಾರದ ಜೊತೆ ಚರ್ಚಿಸುತ್ತೇನೆ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top