fbpx
ದೇವರು

ಡಿಸೆಂಬರ್ 16ನೇ ತಾರೀಖಿನಿಂದ ಧನುರ್ಮಾಸ ಪ್ರಾರಂಭವಾಗಿದೆ,ನಿಮ್ಮ ಎಲ್ಲ ಕಷ್ಟಗಳು ಮಾಯವಾಗಿ ಮನದ ಸಕಲ ಇಷ್ಟಾರ್ಥ ಸಿದ್ಧಿಯಾಗಬೇಕು ಅಂದ್ರೆ ಈ ಮಾಸವನ್ನು ಹೀಗೆ ಆಚರಿಸಿ

ಡಿಸೆಂಬರ್ 16 ನೇ ತಾರೀಖಿನಿಂದ ಧನುರ್ಮಾಸ ಪ್ರಾರಂಭವಾಗಿದೆ. ಪೂಜೆ-ಪುನಸ್ಕಾರಗಳನ್ನು ಮಾಡುವುದಕ್ಕೆ ಇದು ಉತ್ತಮವಾದ ಮಾಸ.ಈ ಮಾಸದ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಇದನ್ನು ಹೇಗೆ ಆಚರಣೆ ಮಾಡಬೇಕು ? ಇದರಿಂದ ಯಾವೆಲ್ಲಾ ಪಲಗಳು ಲಭಿಸುತ್ತವೆ ?
ಧನಸ್ಸು ರಾಶಿಗೆ ಅಧಿಪತಿ ಗುರು ಗ್ರಹ, ನಾವು ಯಾವುದೇ ಪೂಜೆ, ಪುನಸ್ಕಾರ,ಯಜ್ಞ,ಯಾಗಾದಿಗನ್ನು ಮಾಡಲು ಹೋದಾಗ ನಾವು ಹೀಗೆ ಹೇಳುತ್ತೇವೆ “ಆಚಾರ್ಯ ಮುಖೇನ ಕರಹಿ” ಆಚಾರ್ಯ ಎಂದರೆ ಗುರುಗಳು, ಮುಖೇನ ಎಂದರೆ ಮುಖಾಂತರ , ಕರಹಿ ಎಂದರೆ ಮಾಡುವುದು. ನಾವು ಇದೇ ರೀತಿಯಾಗಿ ಸಂಕಲ್ಪವನ್ನು ಮಾಡುತ್ತೇವೆ. ಆದರೆ ಗುರುವಿನ ಮನೆಯಲ್ಲಿ ಧನಸ್ಸು ರಾಶಿಯಲ್ಲಿ ರವಿ ಸಂಚಾರ ಮಾಡುವುದರಿಂದ ಗುರುವಿನ ಅನುಗ್ರಹ ಲಭಿಸಲಿದೆ.
ಈಗಲೂ ಅನೇಕ ಕಡೆಗಳಲ್ಲಿ ಕೇಳುತ್ತಾರೆ. ನಾವು ಶುಭ ಕಾರ್ಯಗಳನ್ನು ಮಾಡಬೇಕು. ಮನೆ ಕಟ್ಟಬೇಕು, ಗೃಹಪ್ರವೇಶ ಮಾಡಬೇಕು, ಗುರುಬಲ ಇದೆಯೇ ಎಂದು ಕೇಳುತ್ತಾರೆ.ಗುರು ಬಲ ಎನ್ನುವುದು ಮನುಷ್ಯನಿಗೆ ಜೀವನದಲ್ಲಿ ಬೇಕು ಎಂದರೆ ನಿಯಮಬದ್ಧವಾಗಿ ಧನುರ್ಮಾಸವನ್ನು ಆಚರಣೆ ಮಾಡಿ. ಅದಕ್ಕೋಸ್ಕರ ಪ್ರಾತಃಕಾಲದಲ್ಲಿ ದೇವಾಲಯಗಳಲ್ಲಿ ಸೂರ್ಯೋದಯಕ್ಕೆ ಮುನ್ನ ನೈವೇದ್ಯವನ್ನು ಇಟ್ಟು, ಮಂತ್ರ ಹೇಳಿ, ಪುಷ್ಪಗಳನ್ನು ಹಾಕಿ, ಆರತಿಯನ್ನು ಮಾಡುವಂತಹ ಪದ್ಧತಿ ಜಾರಿಯಲ್ಲಿದೆ.

 

 

 

ವ್ಯವಸ್ಥಿತವಾಗಿ ನಾವು ಏನು ಮಾಡಬೇಕು ಎಂದರೆ ಪ್ರತಿನಿತ್ಯ ಸೂರ್ಯೋದಯಕ್ಕೆ ಮುನ್ನ ಎದ್ದು ಶುಚಿರ್ಭೂತರಾಗಿ ಅಶ್ವತ ವೃಕ್ಷ ಪ್ರದಕ್ಷಿಣೆಯನ್ನು ಮಾಡಬೇಕು. ಅದಕ್ಕೆ ಅಶ್ವಥ ವೃಕ್ಷಕ್ಕೆ “ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣುರೂಪಾಯ, ಅದಿ ಶಿವರೂಪಾಯ” ಅಂದರೆ ಅಶ್ವತ್ಥ ವೃಕ್ಷದಲ್ಲಿ ಮೂಲದಲ್ಲಿ ಬುಡದಲ್ಲಿ ಬ್ರಹ್ಮ,ಕಾಂಡದಲ್ಲಿ ವಿಷ್ಣು ಮತ್ತು ಮೇಲಿನ ಭಾಗದ ಎಲೆಗಳಲ್ಲಿ ಶಿವ. ಈ 3 ತ್ರಿಮೂರ್ತಿಗಳು ಅಶ್ವಥ ವೃಕ್ಷದಲ್ಲಿ ವಾಸ ಮಾಡಿರುತ್ತಾರೆ. ತ್ರಿಮೂರ್ತಿಗಳು ವಾಸ ಮಾಡುವ ಈ ಮರಕ್ಕೆ ನಾವು ಪ್ರದಕ್ಷಿಣೆಯನ್ನು ವ್ಯವಸ್ಥಿತವಾಗಿ ಪ್ರಾತಃಕಾಲದಲ್ಲಿ ಸೂರ್ಯೋದಯಕ್ಕೆ ಮುನ್ನ ಮಾಡಬೇಕು.

ಹಾಗೂ ದೀರ್ಘದಂಡ ನಮಸ್ಕಾರವನ್ನು ಮಾಡಿದಾಗ ನಮ್ಮ ಗ್ರಹಚಾರ ದೋಷ ದೂರವಾಗುತ್ತದೆ. 30 ದಿನಗಳ ಕಾಲ ಸತತವಾಗಿ ಮಕರ ಸಂಕ್ರಮಣದ ಹೊರಗೆ ಪ್ರದಕ್ಷಿಣೆಯನ್ನು ಹಾಕಬೇಕು.ಧನುರ್ಮಾಸ ಅತ್ಯಂತ ಶ್ರೇಷ್ಠ ಎಂದು ಎಲ್ಲರೂ ಹೇಳುತ್ತಾರೆ. ಅಲ್ಲಿಯವರೆಗೂ ಪ್ರಾತಃಕಾಲದಲ್ಲಿ ಬ್ರಾಹ್ಮಿ ಲಗ್ನದಲ್ಲಿ ಅಶ್ವತ ವೃಕ್ಷ ಪ್ರದಕ್ಷಿಣೆಯನ್ನು ಮಾಡಿ ನವಗ್ರಹಗಳಿಗೆ ಪ್ರದಕ್ಷಿಣೆಯನ್ನು ಮಾಡಿ, ನಮಸ್ಕಾರ ಮಾಡಿ ನವಗ್ರಹ ಮಂತ್ರವಾದ “ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ ಗುರು ಶುಕ್ರ ರಾಹು ಕೇತುವೇ ನಮಃ” ಈ ಮಂತ್ರವನ್ನು ಪ್ರತಿನಿತ್ಯ ಪ್ರಾತಃಕಾಲದಲ್ಲಿ 108 ಬಾರಿ ಯಾರು ಜಪವನ್ನು ಮಾಡುತ್ತಾರೋ ಅಂಥವರಿಗೆ ನವ ಗ್ರಹಗಳ ದೋಷ ನಿವಾರಣೆಯಾಗುತ್ತದೆ.ಧನುರ್ಮಾಸದಲ್ಲಿ ನವಗ್ರಹ ಹೋಮ,ನವಗ್ರಹ ಶಾಂತಿಗಳನ್ನು, ದಾನಗಳನ್ನು ಯಾರು ಮಾಡುತ್ತಾರೋ ಅಂಥವರಿಗೆ ನವ ಗ್ರಹಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top