fbpx
ಸಾಧನೆ

ಕರ್ನಾಟಕದ ಯುವ ವಿಜ್ಞಾನಿ ಪ್ರತಾಪ್ ರವರ ಮನಕಲಕುವ ಸಾಧನೆಯ ಹಾದಿ ಹೇಗಿದೆ ಗೊತ್ತಾ? ಮಿಸ್ ಮಾಡದೇ ಓದಿ!

“ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧಿಸುವ ಛಲ ಬೇಕಷ್ಟೆ” ಎನ್ನುವ ಅದ್ಭುತ ನಾಣ್ಣುಡಿಗೆ ಹಿಡಿದ ಕೈಗನ್ನಡಿಯಂತಿದ್ದಾರೆ ನಮ್ಮ ಯುವ ವಿಜ್ಞಾನಿ ಪ್ರತಾಪ್ . ಹೌದು., ಅಪ್ಪಟ ಕನ್ನಡದ ಪ್ರತಿಭೆಯಾದ ಎಂ.ಏನ್ ಪ್ರತಾಪ್ ಜಗತ್ತಿನಲ್ಲಿ ವಿನೂತನ ಡ್ರೋನ್ ಗಳನ್ನು ವಿನ್ಯಾಸ ಮಾಡುವ ಕ್ಷೇತ್ರದಲ್ಲಿ ತಮ್ಮದೇ ಆದ ವಿಭಿನ್ನ ಛಾಪನ್ನು ಮೂಡಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನೆಟ್ಕಲ್ ಗ್ರಾಮದವರಾದ ಪ್ರತಾಪ್ ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಬಾಲ್ಯದಿಂದಲೇ ವಿಜ್ಞಾನದ ಬಗ್ಗೆ ಅತೀವ ಕುತೂಹಲವನ್ನು ಬೆಳೆಸಿಕೊಂಡಿದ್ದ ಕಾರಣದಿಂದಲೋ ಏನೋ ಪ್ರತಾಪ್ ಮುಂದೊಂದು ದಿನ ಜಗತ್ತಿನಲ್ಲಿ ಯಾರು ಕಂಡು ಹಿಡಿಯದೇ ಇದ್ದ ಆವಿಷ್ಕಾರಕ್ಕೆ ನಾಂದಿ ಹಾಡಿದ್ದಾರೆ . ಹೌದು, ಎಂ ಏನ್ ಪ್ರತಾಪ್ ವಿಶೇಷವಾದ ಡ್ರೋನ್ ಅನ್ನು ಆವಿಷ್ಕಾರ ಮಾಡಿದ್ದಾರೆ . ತಮ್ಮ ಜೀವನದ ಪಯಣದಲಿ ಕಷ್ಟಗಳೆಂಬ ಮುಳ್ಳಿನ ಹಾದಿಯನ್ನು ಕ್ರಮಿಸಿ ಗೆದ್ದು ಬೀಗಿದ ಪ್ರತಾಪ್ ರವರ ಸಾಧನೆ ಈಗ ಇತಿಹಾಸವೇ ಸರೀ . ಹೀಗಿರುವಾಗ ಇಂತಹ ಮೇರು ಪ್ರತಿಭೆಯ ಮನಕಲಕುವ ಸಾಧನೆಯ ಹಾದಿಯಾ ಬಗ್ಗೆ ತಿಳಿಯೋಣ ಬನ್ನಿ :

ಜಪಾನಿನಲ್ಲಿ ನಡೆದಂತಹ ಅಂತರರಾಷ್ಟ್ರೀಯ ರೊಬೋಟಿಕ್ಸ್ ಪ್ರದರ್ಶನದಲ್ಲಿ ಜಯ ಗಳಿಸಿದ ಯುವ ವಿಜ್ಞಾನಿ :

ಪ್ರತಾಪ್ ರವರಿಗೆ ಕಳೆದ ವರ್ಷ ಜಪಾನಿನಲ್ಲಿ ನಡೆದಂತಹ ಅಂತರರಾಷ್ಟ್ರೀಯ ರೊಬೋಟಿಕ್ಸ್ ಪ್ರದರ್ಶನದಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದಿತ್ತು. ಆದರೆ ಈ ಸ್ಪರ್ಧೆಗೆ ಭಾಗವಹಿಸಲು ಪ್ರತಾಪ್ ರ ಬಳಿ ಸಾಕಷ್ಟು ಹಣದ ಕೊರತೆ ಇತ್ತು, ಅದರಲ್ಲೂ ಅವರ ಮನೆಯಲ್ಲಿ ಬಡತನ ಅನ್ನೋದು ಒಂದು ಲೆಕ್ಕದಲ್ಲಿ ತಾಂಡವವಾಡುತ್ತಿತ್ತು. ಹೀಗಿದ್ದಾಗ ಮಗ ಏನಾದರೂ ಸಾಧಿಸೆ ತೀರುತ್ತಾನೆಂದು ಅಚಲ ನಂಬಿಕೆ ಹೊಂದಿದ್ದ ಪ್ರತಾಪ್ ರವರ ತಾಯಿ ಮಾತ್ರ ಹೇಗಾದರೂ ತನ್ನ ಮಗ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಬೇಕೆಂದು ಅಂದುಕೊಂಡು ತಕ್ಷಣವೇ ತನ್ನ ತಾಯಿಯು ತನಗೆ ನೀಡಿದ ಮ್ಯಾಂಗಲ್ಯ ಸರವನ್ನು ಅಡವಿಟ್ಟು ಅದರಿಂದ ಬಂಡ ಹಣವನ್ನು ಪ್ರತಾಪ್ ಕೈಗಿಟ್ಟು ಜಪಾನ್ ಗೆ ಹೋಗಲು ಆಶೀರ್ವದಿಸಿದರು. ಅಷ್ಟೇ ಅಲ್ಲದೆ, ಸುತ್ತೂರು ಶ್ರೀಗಳ ಮತ್ತು ಕಾಲೇಜಿನವರ ಸಹಾಯವು ಪ್ರತಾಪ್ ರವರಿಗೆ ಒದಗಿ ಬಂತು. .ಕೊನೆಗೆ ತಮ್ಮ ಅದ್ಭುತ ಪರಿಶ್ರಮದಿಂದ , ದೇಶಕ್ಕೆ ತಾನೂ ಏನಾದರು ಮಾಡಬೇಕು ಅನ್ನುವ ತುಡಿತ ದಿಂದ ಹಾಗೂ ಪೋಷಕರ ಮತ್ತು ಎಲ್ಲರ ಆಶೀರ್ವಾದದಿಂದಾಗಿ ಜಪಾನಿನಲ್ಲಿ ನಡೆದಂತಹ ಅಂತರರಾಷ್ಟ್ರೀಯ ರೊಬೋಟಿಕ್ಸ್ ಪ್ರದರ್ಶನದಲ್ಲಿ ಭಾಗವಹಿಸಿದ ಪ್ರತಾಪ್ ಮೊದಲ ಸ್ಥಾನವನ್ನು ಗಿಟ್ಟಿಸುವುದರೊಂದಿಗೆ 10 ಸಾವಿರ ಅಮೆರಿಕನ್ ಡಾಲರ್ ನಗದು ಬಹುಮಾನ ಗೆದ್ದರು ಮತ್ತು ‘ಯುವ ವಿಜ್ಞಾನಿ’ ಎಂಬ ಪಟ್ಟವನ್ನು ತಮ್ಮ ಮುಡಿಗೇರಿಸಕೊಂಡರು.

 

 

ಪ್ರತಾಪ್ ರ ಪ್ರತಿಭೆಗೆ ಮಾರು ಹೋದ ಜಪಾನಿನ ವಿಜ್ಞಾನಿ :

ಪ್ರತಾಪ್ ರ ಪ್ರತಿಭೆಯ ಕಂಡ ಅಚ್ಚರಿಗೊಳಗಾದ ಜಪಾನಿನ ಶ್ರೇಷ್ಠ ವಿಜ್ಞಾನಿ ಶಿರಕಾವಾ, ಖುದ್ದು ಬಂದು ಪ್ರತಾಪರನ್ನು ಮಾತನಾಡಿಸಿ ಪ್ರತಾಪ್ ರವರಿಗೆ ತಮ್ಮ ಮನೆಗೆ ಬರುವಂತೆ ಆಹ್ವಾನವಿತ್ತಿದ್ದರು.

 

ಭಾರತೀಯ ದಂಪತಿಗಳ ಉದಾರತೆ :

ಪ್ರತಾಪ್ ಜಪಾನಿಂದ ಮರಳಿ ಬರುವಾಗ ಅವರನ್ನು ಗುರುತಿಸಿದ ಅಲ್ಲಿನ ಭಾರತೀಯ ದಂಪತಿಗಳು ತತಕ್ಷಣವೇ ಪ್ರತಾಪ್ ರವರಿಗೆ ತಮ್ಮ ಬಳಿ ಇದ್ದ 33 ಸಾವಿರ ರೂಗಳನ್ನು ಕಾಣಿಕೆಯಾಗಿ ಕೊಟ್ಟು ಬೆನ್ನು ತಟ್ಟಿ ಕಣ್ಣೀರಾಕಿ ಹೋಗಿದ್ದರೂ.

 

ಹೆಲಿಕಾಪ್ಟರ್ ಹಾರಾಟದಿಂದ ಪ್ರೇರೇಪಿತರಾದ ಪ್ರತಾಪ್ :

ಹೆಲಿಕಾಪ್ಟರ್ ಹಾರಾಟದಿಂದ ಪ್ರೇರೇಪಿತರಾದ ಪ್ರತಾಪ್ ರವರೂ ಅದೇ ಪ್ರೇರೆಣೆಯಿಂದ ಡ್ರೋನ್ ತಯಾರಿಸಲೂ ಮುಂದಾಗಿ ಡ್ರೋನ್ ಚಲನ ವಲನಗಳ ಕುರಿತಾಗಿ ಯೌಟ್ಯೂಬ್ ನಲ್ಲಿ ವಿಡಿಯೋ ಗಳನು ನೋಡಿ ತಿಳಿದುಕೊಂಡರು. ನಂತರ ಅದರ ಬಗ್ಗೆ ತೀಕ್ಷ್ಣ ಅಧ್ಯಯನ ನಡೆಸಿ ಊರೂರು ಅಲೆದಾಡಿ ಅಲ್ಲಲ್ಲಿ ಸಿಕ್ಕ ಸಾಮಾನುಗಳನ್ನು ಸಂಗ್ರಹಿಸಿ ಡ್ರೋನ್ ತಯಾರಿಸಿದರು.

 

ಛಲ ಬಿಡದ ತ್ರಿವಿಕ್ರಮ :

ಪ್ರತಾಪ್ ತಾವು ಸಿದ್ದಪಡಿಸಿದ ಅಸೈನ್ ಮೆಂಟ್ ಅನ್ನು ಸಂಸ್ಥೆಗಳ ಎದುರು ಪ್ರಸ್ತುತ ಪಡಿಸಲು ಪ್ರತಿಷ್ಠಿತ ಐಐಟಿ ಪ್ರೊಫೆಸರ್ ಸಹಿ ಅಗತ್ಯವಾಗಿತ್ತು. ಪ್ರತಾಪ್ ಇಂಜಿನಿಯರಿಂಗ್ ವಿದ್ಯಾರ್ಥಿಯಲ್ಲದ ಕಾರಣಕ್ಕೆ ಆ ಪ್ರೊಫೆಸರ್ ಸಹಿ ಹಾಕಲು ಹಿಂಜರಿದಿದ್ದರಂತೆ.ಆದರೂ ಅಲ್ಲೇ ಹಲವು ದಿನಗಳನ್ನು ಕಳೆದ ಪ್ರತಾಪ್, ಪ್ರೊಫೆಸರ್ ಸಹಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದರು.

 

ಪ್ರತಾಪ್ ರ ಸಾಧನೆಯ ಹಿಂದಿನ ಶಕ್ತಿ ಯಾರು ಗೊತ್ತಾ ?

ಪ್ರತಾಪ್ ರವರ ಸಾಧನೆಗೆ ಪ್ರೇರಣಾ ಶಕ್ತಿ ಎಂದರೆ ಅಬ್ದುಲ್ ಕಲಾಂ ಹಾಗೂ ಅವರ ಪೋಷಕರು.

 

 

 

 

 

ದೇಶ ಸೇವೆಯೇ ನನ್ನ ಗುರಿ – ಪ್ರತಾಪ್.

ಈಗಾಗಲೇ ವಿದೇಶಗಳಿಂದ ಡ್ರೋನ್ ಗೆ ಆಫರ್ ಬಂದಿದೆ. ಆದರೆ ನನ್ನ ದೇಶಕ್ಕಾಗಿ ನೀಡುತ್ತೇನೆಯೇ ಹೊರತು ಯಾವುದೇ ದೇಶಕ್ಕೂ ನೀಡುವುದಿಲ್ಲ. ದೇಶ ಸೇವೆ ನನ್ನ ಗುರಿಯಾಗಿದೆ. ಆದುದರಿಂದ ದೇಶದ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಸಂಶೋಧನೆ ನಡೆಸಬೇಕೆಂಬ ಆಸೆಯಿದೆ. ಆದರಿಂದ ದೇಶ ಸೇವೆ ನನ್ನ ಗುರಿ ಎನ್ನುತ್ತಾರೆ ಪ್ರತಾಪ್.

 

ಪ್ರತಾಪ್ ರ ತಂದೆ ಅನಕ್ಷರಸ್ತರು :

ಪ್ರತಾಪ್ ತಂದೆ ಅನಕ್ಷರಸ್ಥ ಕೃಷಿಕರು, ತಾಯಿ ಮನೆಗೆಲಸಕ್ಕೆ ಮಾತ್ರ ಸೀಮಿತ. ಹೀಗಿದ್ದರೂ ಪ್ರತಾಪ್ ಜಗತ್ತೇ ಮೆಚ್ಚಹುವಂತಹ ಸಾಧನೆ ಮಾಡಿರುವುದು ಎಲ್ಲರಿಗೂ ಸ್ಪೂರ್ತಿದಾಯಕ ಅಲ್ಲವೇ?

ಸಾಧನೆಯ ಹಾದಿಯಲ್ಲಿ ಪ್ರತಾಪ್ ರವರಿಗೆ ಎದುರಾಗಿದ್ದು ನೊರೆಂಟು ತಾಪತ್ರಯಗಳು ಆದರೆ ಅವೆಲ್ಲವುಗಳನ್ನು ದಿಟ್ಟವಾಗಿ ಎದುರಿಸಿದ ಪ್ರತಾಪ್ ಇಂದು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top