fbpx
ಆರೋಗ್ಯ

ಬ್ಲಾಕ್ ಟೀ , ಗ್ರೀನ್ ಟೀ ಆಯ್ತು ಈಗ ಹೊಸದಾಗಿ ಬಂದಿದೆ ಬ್ಲೂ ಟೀ – ಇದರ ವಿಶೇಷತೆಗಳೇನು ಗೊತ್ತಾ ?

ಟೀ ಎಂಬ ಅದ್ಭುತ ಪಾನೀಯ ಹಲವರ ಖಾಯಂ ಫೇವರಿಟ್. ಜಗತ್ತಿನಲ್ಲಿ ಎಷ್ಟೋ ಜನರ ದಿನಚರಿ ಶುರುವಾಗೋದೇ ಟೀ ಕುಡಿಯುವುದರ ಮೂಲಕ. ಇತ್ತೀಚಿಗಂತೂ ವಿವಿಧ ಟೀ ಗಳು ಮಾರುಕಟ್ಟೆಗೆ ಬಂದಿದ್ದು, ಜನರಂತೂ ಎಲ್ಲ ಬಗೆಯ ಟೀ ಗಳನ್ನೂ ಟೇಸ್ಟ್ ಮಾಡುವುದರಲ್ಲಿ ಉತ್ಸುಹಕರಾಗಿದ್ದರೆ. ಇದೀಗ ಮಾರುಕಟ್ಟೆಗೆ ಹೊಸದಾದ ಟೀ ಬಂದಿದೆ! ಹೌದು, ಬಗೆ ಬಗೆಯ ಟೀ ಗಳ ಲೋಕದಲ್ಲಿ “ಬ್ಲೂ ಟೀ” ಎಂಬ ಹೊಚ್ಚ ಹೊಸ ಟೀ ನ ಆಗಮವಾಗಿದೆ. ಬ್ಲೂ ಟೀ ಮಾರುಕಟ್ಟೆಯಲ್ಲಿ ‘ಊಲಾಂಗ್‘ ಮತ್ತು ‘ಬ್ಲಾಕ್​ ಡ್ರ್ಯಾಗನ್ ಟೀ‘ ಹೆಸರುಗಳಲ್ಲಿ ಲಭ್ಯವಿದೆ. ಈ ಟೀ ಯನ್ನು ಕುಡಿಯುವುದರಿಂದ ಆರೋಗ್ಯದಲ್ಲಿ ಸಕಾರಾತ್ಮಕ ಪರಿಣಾಮಗಳು ಉಂಟಾಗಲಿದೆ ಎಂದು ವರದಿಯಾಗಿದೆ..

ಬ್ಲೂ ಟೀ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳೇನು ಗೊತ್ತಾ ?

  • ಟೀ ಕುಡಿದರೆ ಯಕೃತ್ತಿನ ಸಮಸ್ಯೆಗಳು ದೂರವಾಗುತ್ತದೆ. ಅಲ್ಲದೆ ಚಯಾಪಚಯ ಕ್ರಿಯೆಯನ್ನು ಸುಧಾರಿಸಿ ಆರೋಗ್ಯವನ್ನು ಹತೋಟಿಯಲ್ಲಿಡುತ್ತದೆ.

 

  • ಊಟಕ್ಕೆ ಮುಂಚಿತವಾಗಿ ಅಥವಾ ಊಟದ ನಂತರ ಬ್ಲೂ ಟೀ ಕುಡಿಯುವುದು ಉತ್ತಮ. ಏಕೆಂದರೆ ಇದರಲ್ಲಿ ಟಾನಿನ್ಸ್​ ಅಂಶ ಸಮೃದ್ಧವಾಗಿದ್ದು, ಇದು ಆಹಾರದಲ್ಲಿರುವ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಕರಿಸುತ್ತದೆ

 

  • ನಿಯಮಿತವಾಗಿ ಬ್ಲೂ ಟೀ ಕುಡಿಯುವುದರಿಂದ ದೇಹದ ತೂಕ ಕಳೆದುಕೊಳ್ಳಬಹುದಾಗಿದೆ ಅದರೊಂದಿಗೆ ಬ್ಲೂ ಟೀ ಅಲ್ಲಿ ಆಂಟಿ ಅಕ್ಸಿಡೆಂಟ್ ಅಂಶಗಳು ಸಮೃದ್ಧವಾಗಿದ್ದು, ಇದನ್ನು ಕುಡಿಯುವುದರಿಂದ ದೇಹದೊತ್ತಡ ಕಡಿಮೆಯಾಗುತ್ತದೆ

 

  • ಬ್ಲೂ ಟೀ ಮೊದಲ ಹಂತದ ಮಧುಮೇಹ ರೋಗವನ್ನು ತಡೆಯುತ್ತದಂತೆ.

 

  • ಅಪಧಮನಿಗಳಲ್ಲಿನ ಬ್ಲಾಕ್​ಗಳನ್ನು ತೆರವುಗೊಳಿಸಿ ರಕ್ತ ಪರಿಚಲನೆಯನ್ನು ಸುಧಾರಿಸುವಲ್ಲಿ ಬ್ಲೂ ಟೀ ಪಾತ್ರ ದೊಡ್ಡದು. ಇದರಿಂದ ಹೃದಯನಾಳ ಕಾಯಿಲೆಗಳು ಉಂಟಾಗುವುದಿಲ್ಲ.

 

  • ಬ್ಲೂ ಟೀ ನಲ್ಲಿ ಆಂಟಿ ಅಕ್ಸಿಡೆಂಟ್ ಅಂಶ ಹೇರಳವಾಗಿದ್ದು, ಇದು ದೇಹದ ಜೀವಕೋಶಗಳು ಹಾನಿಯಾಗದಂತೆ ತಡೆಯುತ್ತದೆ. ಕೋಶಗಳ ಹಾನಿಯನ್ನು ತಡೆಯುವುದರಿಂದ ವಿವಿಧ ಕ್ಯಾನ್ಸರ್ ಅಪಾಯವನ್ನು ಬ್ಲೂ ಟೀ ದೂರ ಮಾಡುತ್ತದೆ.

ತಯಾರಿಸುವ ವಿಧಾನ :

ಬ್ಲೂ ಟೀಯನ್ನು ಬಿಸಿ ಮಿನರಲ್ ವಾಟರ್​ನಲ್ಲಿ ತಯಾರಿಸುವುದು ಉತ್ತಮ. ಇದಕ್ಕೆ ಸ್ವಲ್ಪ ಜೇನು, ನಿಂಬೆ ರಸ ಸೇರಿಸಿ ಕುಡಿದರೆ ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top