ಹೆಚ್ಚಿನ

“ಅಗರಬತ್ತಿ” ಹಚ್ಚುವುದರಿಂದ ಆಗುವ ಉಪಯೋಗಳನ್ನು ನೀವು ತಿಳಿದುಕೊಂಡರೆ- ಇನ್ಮುಂದೆ ನೀವು ಮಿಸ್ ಮಾಡದೇ ಮನೆಯಲ್ಲಿ ಅಗರಬತ್ತಿ ಹಚ್ಚುತ್ತೀರಾ !

ಹಿಂದೂಗಳ ಪ್ರತಿಯೊಂದು ಆಚರಣೆಯ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳು ಸರ್ವೇಸಾಮಾನ್ಯವಾಗಿ ಇದ್ದೆ ಇರುತ್ತದೆ. ಇನ್ನು ದೇವರ ಪೂಜೆಯಲ್ಲಿ ದೀಪ ಬೆಳಗುವುದು, ಅಗರಬತ್ತಿ ಹಚ್ಚುವುದು, ಆರತಿ ಮಾಡುವ ಅನೇಕ ವಿಧದ ಆಚರಣೆಗಳ ಹಿಂದೆಯೋ ನಾವು ಅನೇಕ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳನ್ನು ಪತ್ತೆ ಹಚ್ಚಬಹುದು. ಉಡಾಹರಣೆಗೆ, ಧಾರ್ಮಿಕ ದೃಷ್ಟಿಯಿಂದ ನೋಡಿದರೆ ಅಗರಬತ್ತಿಯಿಂದ ಹೊರಹೊಮ್ಮುವ ಸುಗಂಧ ದೇವರನ್ನು ಸಂತುಷ್ಟಗೊಳಿಸುತ್ತದೆ ಎಂದು ಯೋಚಿಸಬಹುದು . ಅಂತೆಯೇ, ಅಗರಬತ್ತಿ ಹಚ್ಚುವ ಆಚರಣೆಯನ್ನು ನಾವು ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಅದರ ಹಿಂದೆ ಇರುವಂತಹ ಅನೇಕ ಲಾಭಗಳು ಬೆಳಕಿಗೆ ಬರುತ್ತದೆ.

“ಅಗರಬತ್ತಿ” ಹಚ್ಚುವುದರಿಂದೆ ವೈಜ್ಞಾನಿಕವಾಗಿ ಎಷ್ಟೆಲ್ಲ ಉಪಯೋಗಗಳಿವೆ ಎಂದು ತಿಳಿದುಕೊಳ್ಳಿ :

  • ಅಗರಬತ್ತಿಗಳಿಂದ ಬಿಡುಗಡೆಯಾಗುವ ಹೊಗೆ ಉಲ್ಲಾಸಮಯವಾದ ಹಾಗೂ ಕಾಂತಿವರ್ಧಕವಾದ ಸುವಾಸನೆಯನ್ನು ಹರಡಿಸುತ್ತದೆ ಹಾಗೂ ಅಗರ್ಬತ್ತಿಗಳಿಂದ ಹೊರ ಹೊಮ್ಮುವ ಸುಗಂಧವನ್ನು ಆಸ್ವಾದಿಸುವಾಗ TRPV3 ಪ್ರೋಟೀನ್ ಅನ್ನು ನಮ್ಮ ಮೆದುಳಿಗೆ ಪ್ರಚೋದಿಸುತ್ತದೆ. ಹಾಗಾಗಿ ಇದರಿಂದ ಮನಸ್ಸು ಪ್ರಶಾಂತಗೊಳ್ಳುತ್ತದೆ. ಆತಂಕ, ಒತ್ತಡ ಕಡಿಮೆಯಾಗುತ್ತದೆ.
  • ಅಗರಬತ್ತಿ ಹೊಗೆಯಲ್ಲಿ ಆಂಟಿ ಸೆಪ್ಟಿಕ್, ಆಸ್ಟ್ರಿಜೆಂಟ್ ಗುಣಗಳಿರುತ್ತವೆ. ನಮ್ಮ ಶರೀರದ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇನ್‍ಫೆಕ್ಷನ್‌ಗಳನ್ನು ಕಡಿಮೆ ಮಾಡುತ್ತದೆ.
    ಮುಖ್ಯವಾಗಿ ಅಗರಬತ್ತಿಯನ್ನು ಹೊತ್ತಿಸುವುದರಿಂದ ಸುತ್ತಮುತ್ತ ಇರುವ ಗಾಳಿ ಶುದ್ಧವಾಗುತ್ತದೆ. ಪರಿಶುದ್ಧವಾದ, ಸ್ವಚ್ಛವಾದ ಗಾಳಿ ನಮಗೆ ಲಭಿಸುತ್ತದೆ.
  • ವಾಸ್ತುಪ್ರಕಾರ ಅಗರಬತ್ತಿ ಹೊತ್ತಿಸುವುದರಿಂದ ಬಹಳಷ್ಟು ಒಳಿತಾಗುತ್ತದೆ . ಇದರಿಂದ ಮನೆಯಲ್ಲಿರುವ ನೆಗಟೀವ್ ಎನರ್ಜಿ ಕ್ರಮೇಣ ಹೊರಹೋಗಿ
    ಪಾಸಿಟೀಟ್ ಎನರ್ಜಿ ಆವರಿಸುತ್ತದೆ.
  • ಈಗ ಮಾರುಕಟ್ಟೆಯಲ್ಲಿ ನಾನಾ ಸುವಾಸನೆ ಬೀರುವ ಅಗರಬತ್ತಿಗಳು ಲಭ್ಯವಾಗುತ್ತದೆ . ಆದರೆ ಒಂದು ಕಾಲದಲ್ಲಿ ಲೋಬನ್, ಗುಗ್ಗುಲ್ ಎಂಬ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತಿತ್ತು. ಆ ರೀತಿಯ ಪದಾರ್ಥಗಳಿಂದ ತಯಾರಿಸಿದ ಅಗರಬತ್ತಿ ಹೊತ್ತಿಸುವುದರಿಂದ, ಅದರಲ್ಲಿನ ಧೂಪದಲ್ಲಿ ಅನೇಕ ಔಷಧಿ ಗುಣಗಳಿರುತ್ತಿತ್ತು ಹಾಗೂ ಆ ಹೊಗೆಯನ್ನು ಆಘ್ರಾಣಿಸಿದಾಗ ಮಿದುಳು ರಿಲ್ಯಾಕ್ಸ್ ಆಗುತ್ತಿತ್ತು. ಈಗಲೂ ಒಳ್ಳೆಯ ಅಗರಬತ್ತಿಗಳಿದ್ದು ಆರೋಗ್ಯಕರಲಾಭಗಳನ್ನು ಪಡೆಯ,ಬೇಕೆಂದಾದಲ್ಲಿ ನೋಡಿ ಮಾಡಿ ಶುದ್ಧ ಸಾರವಿರುವ, ಒಳ್ಳೆಯ ಗುಣಮಟ್ಟದ ಅಗರಬತ್ತಿಗಳನ್ನು ಕೊಂಡುಕೊಳ್ಳ ಬೇಕಷ್ಟೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top