fbpx
ರಾಜಕೀಯ

ಸರ್ಕಾರದ ಈ ನಿರ್ಧಾರದ ಬಗ್ಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ ಸಾರ​ಸ್ವತ ಲೋಕ – ಈ ನೀತಿಯನ್ನು ಕೈ ಬಿಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆಂದು ಸರ್ಕಾರಕ್ಕೆ ಎಚ್ಚರಿಕೆ ರವಾನೆ.

ಕುಮಾರ ಸ್ವಾಮಿ ನೇತೃತ್ವದ ರಾಜ್ಯ ಸರ್ಕಾ​ರ ಕೈ ಗೊಂಡಿರುವ ನಿರ್ಧಾ​ರಕ್ಕೆ ಇದೀಗ ಕನ್ನಡ ಸಾರ​ಸ್ವತ ಲೋಕ​ದಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸರ್ಕಾ​ರದ ಈ ನೀತಿಯ ವಿರುದ್ಧ ಅಗ್ರ​ಗಣ್ಯ ಸಾಹಿ​ತಿ​ಗಳು ಹಾಗೂ ಹೋರಾ​ಟ​ಗಾ​ರರು ಸಭೆ ಸೇರಿ ಈ ನಿರ್ಧಾರವನ್ನು ಇಲ್ಲೇ ಕೈ ಬಿಡದಿದ್ದರೆ ಗೋಕಾಕ್‌ ಮಾದರಿ ಚಳ​ವಳಿ ನಡೆ​ಸುತ್ತೇವೆ ಎಂಬ ಎಚ್ಚರಿಕೆಯನ್ನು ರಾಜ್ಯ ಸರ್ಕಾ​ರಕ್ಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸರ್ಕಾರ ತಾನು ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ಈಗಲೇ ಎಚ್ಚರ ವಹಿಸಲಿಲ್ಲವೆಂದಾದಲ್ಲಿ ಮುಂದೊಂದು ದಿನ ಭಾರಿ ಪ್ರಮಾಣದ ಹೋರಾಟವನ್ನು ಸರ್ಕಾರ ನೋಡಬೇಕಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಅಷ್ಟಕ್ಕೂ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಏನು ಗೊತ್ತೇ ?

ಮುಂದಿನ ಶೈಕ್ಷ​ಣಿಕ ವರ್ಷ​ದಿಂದ ರಾಜ್ಯದ ಸುಮಾರು ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿ​ಸುವ ನಿರ್ಧಾ​ರವನ್ನು ಸರ್ಕಾರ ಕೈ ಗೊಂಡಿದೆ .ಹೌದು, ಸರ್ಕಾರದ ಈ ನಿರ್ಧಾರದಿಂದಾಗಿ ರೊಚ್ಚಿಗೆದ್ದಿರುವ ಅಗ್ರ​ಗಣ್ಯ ಸಾಹಿ​ತಿ​ಗಳು ಹಾಗೂ ಹೋರಾ​ಟ​ಗಾ​ರರು ಸರ್ಕಾರ ಕೂಡಲೇ ಈ ನಿರ್ಧಾರನ್ನು ಕೈ ಬಿಡಬೇಕೆಂದು ತಾಕೀತು ಮಾಡದ್ದಾರೆ.

ಮುಖ್ಯ​ಮಂತ್ರಿ​ಯ​ವ​ರನ್ನು ಭೇಟಿ ಮಾಡಿ ಮನವಿ ಮಾಡಲು ನಿರ್ಧಾರ :

ಈ ಕುರಿತಂತೆ ಕನ್ನಡ ಸಾಹಿತ್ಯ ಪರಿ​ಷತ್‌ ಅಧ್ಯಕ್ಷ ಡಾ. ಮನು ಬಳಿ​ಗಾರ ನೇತೃ​ತ್ವ​ದಲ್ಲಿ ಬುಧ​ವಾರ ಸಭೆ​ಯೊಂದನ್ನು ನಡೆ​ಸಿದ ನಾಡಿನ ಅಗ್ರ​ಗಣ್ಯ ಸಾಹಿ​ತಿ​ಗ​ಳಾದ ಜ್ಞಾನಪೀಠ ಪುರ​ಸ್ಕೃತ ಡಾ. ಚಂದ್ರ​ಶೇ​ಖರ್‌ ಕಂಬಾರ, ಎಸ್‌.ಎಲ್‌.ಭೈರಪ್ಪ, ಕರ್ನಾ​ಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾ​ಯ​ಣ​ಗೌಡ, ಸಾಹಿ​ತಿ​ಗ​ಳಾದ ಪ್ರೊ.ಚಂದ್ರಶೇಖರ ಪಾಟೀಲ, ಡಾ.ಸಿದ್ದಲಿಂಗಯ್ಯ ಮೊದ​ಲಾ​ದ​ವರು ಈ ನಿಲುವನ್ನು ಸರ್ಕಾರ ಕೈ ಬಿಡಬೇಕೆಂದು ಮುಖ್ಯ​ಮಂತ್ರಿ​ಯ​ವ​ರನ್ನು ಭೇಟಿ ಮಾಡಿ ಮನವಿ ಮಾಡಲು ನಿರ್ಧ​ರಿ​ಸಿ​ದರು. ಸಭೆಯ ನಂತರ ಪತ್ರಿ​ಕಾ​ಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಈ ಮನ​ವಿಗೆ ಸರ್ಕಾರ ಸ್ಪಂದಿ​ಸ​ದಿ​ದ್ದರೆ ಹೋರಾಟದ ಮಾರ್ಗ​ವನ್ನು ಅನು​ಸ​ರಿ​ಸಲು ಸಭೆ​ಯಲ್ಲಿ ತೀರ್ಮಾ​ನಿ​ಸ​ಲಾ​ಗಿ​ದೆ ಎಂದ​ರು.

ಸರ್ಕಾರದ ಈ ನಿಲುವಿನ ಬಗ್ಗೆ ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌.ಎಲ್‌.ಭೈರಪ್ಪ, ರವರು  ಹೇಳಿದ್ದೇನು?

” ಪ್ರಾದೇಶಿಕ ಪಕ್ಷಗಳು ತಮಗೆ ಅನುಕೂಲವಾದಾಗ ಅಥವಾ ಅನುಕೂಲವಾಗಬೇಕು ಎನ್ನುವಾಗ ಸ್ಥಳೀಯ ಸಮಸ್ಯೆ, ಆರ್ಥಿಕತೆ, ಸಂಸ್ಕೃತಿ ಇದನ್ನೆಲ್ಲಾ ಬೆಳೆಸಲು ಪ್ರಾದೇಶಿಕ ಪಕ್ಷಗಳೇ ಮುಖ್ಯ, ರಾಷ್ಟ್ರೀಯ ಪಕ್ಷಗಳ ಕೈಯಿಂದ ಇದೆಲ್ಲಾ ಸಾಧ್ಯವಿಲ್ಲ ಎಂದು ಭಾಷಣ ಮಾಡುತ್ತವೆ. ಈ ಮೂಲಕ ತಮ್ಮ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುತ್ತವೆ. ಈಗ ಇಂತಹ ಪರಿಸ್ಥಿತಿ ಬಂದಾಗ ಸ್ಥಳೀಯ ಆದ್ಯತೆಯನ್ನು ಮರೆತೇಬಿಡುತ್ತಾರೆ. ಮಾತೃಭಾಷೆ ಕಲಿಕೆ ವಿಷಯದಲ್ಲಿ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ. ಅದನ್ನು ತಿದ್ದಿಕೊಳ್ಳುವ ಅವಶ್ಯಕತೆ ಇದೆ. ಸರ್ಕಾರ ತನ್ನ ತಪ್ಪು ಸರಿಪಡಿಸಿಕೊಳ್ಳದಿದ್ದರೆ ಹೋರಾಟಗಾರರು ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ” ಎಂದರು ಸಾಹಿತಿ ಎಸ್‌.ಎಲ್‌.ಭೈರಪ್ಪ .

ಒಟ್ಟಿನಲ್ಲಿ ಈ ಸರಕಾರದ ಈ ನಿರ್ಣಯದ ಕುರಿತಂತೆ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್‌ ಪಾಟೀಲ್‌, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮತ್ತು ಹಿರಿಯ ಕವಿ ಸಿದ್ದಲಿಂಗಯ್ಯ ರವರು ಸಹ ಆಕ್ರೋಶ ವ್ಯಕ್ತಪಡಿಸಿದ್ದು ಈ ನಿಟ್ಟಿನಲ್ಲಿ ಸರ್ಕಾರ ಮುಂದೆ ಯಾವ ರೀತಿಯ ಕ್ರಮಗಳನ್ನು ಜಾರಿಗೆ ತರಲಿದೆಯೋ ಇನ್ನಷ್ಟೇ ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top