fbpx
ಹೆಚ್ಚಿನ

ಧನವಂತರಾಗಿ ನಿಮ್ ಮನೆಯಲ್ಲಿ ಸದಾಕಾಲ ಸಂತೋಷ ತುಂಬಿ ತುಳುಕಬೇಕು ಅಂದ್ರೆ ತಪ್ಪದೆ ಈ ನಾಣ್ಯದಿಂದ ಈ ಪರಿಹಾರ ಮಾಡ್ಕೊಳ್ಳಿ

ಧನವಂತರಾಗುವ ಜೊತೆಗೆ ಸಂತೋಷ ನಿಮ್ಮ ಮನೆಯಲ್ಲಿ ಸದಾ ನೆಲೆಸಲು ಈ ಉಪಾಯಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.
ಇಂದಿನ ಯುಗದಲ್ಲಿ ಶ್ರೀಮಂತರಾಗುವುದು ಪ್ರತಿಯೊಬ್ಬನ ಕನಸು. ಅದಕ್ಕಾಗಿ ಕೆಲವರು ದಿನವಿಡೀ ದುಡಿದು ಮತ್ತೆ ಕೆಲವರು ಅನ್ಯ ಮಾರ್ಗವನ್ನು ಅನುಸರಿಸುತ್ತಾರೆ. ಎಷ್ಟೇ ದುಡಿದರೂ ವಾಸ್ತು ದೋಷವಿದ್ದರೆ ಶ್ರೀಮಂತರಾಗುವುದು ಕನಸಾಗಿಯೇ ಉಳಿದು ಬಿಡುತ್ತದೆ. ಫೆಂಗ್ ಶುಯಿ ಪ್ರಕಾರ ಕೆಲವೊಂದು ನಿಯಮಗಳನ್ನು ಅಳವಡಿಸಿ ಕೊಂಡರೆ ಸುಲಭವಾಗಿ ಧನವಂತರಾಗಬಹುದು.

 

 

 

ನಾಣ್ಯವನ್ನು ಕೆಂಪು ಬಣ್ಣದ ರಿಬ್ಬನ್ ನಲ್ಲಿ ಕಟ್ಟೆ ಮನೆಯ ಮುಖ್ಯದ್ವಾರದ ಒಳಭಾಗದಲ್ಲಿ ತೂಗುಹಾಕಿ. ಮುಖ್ಯದ್ವಾರದ ಹೊರಭಾಗದಲ್ಲಿ ಹಾಕಿದರೆ ಮನೆಯ ಬಾಗಿಲಿನಲ್ಲಿ ಇರುವ ಧನ ಮನೆ ಪ್ರವೇಶ ಮಾಡುತ್ತಿಲ್ಲ ಎಂದರ್ಥ. ಒಳಭಾಗದಲ್ಲಿ ತೂಗು ಹಾಕಿದರೆ ಮನೆಯನ್ನು ಈಗಾಗಲೇ ಪ್ರವೇಶ ಮಾಡಿದೆ ಎಂದರ್ಥ. 3 ನಾಣ್ಯವನ್ನು ಮಾತ್ರ ತೂಗುಹಾಕಬೇಕು. ಹೆಚ್ಚಿನ ಹಣ ತೂಗು ಹಾಕುವುದರಿಂದ ಹೆಚ್ಚಿನ ಸಂಪತ್ತು ಮನೆಯನ್ನು ಪ್ರವೇಶ ಮಾಡುವುದಿಲ್ಲ. ಒಂದು ನಾಣ್ಯವನ್ನು ಎಂದು ತೂಗು ಹಾಕಬಾರದು ಇದು ಧನ ಸಮೃದ್ಧಿಯ ವಿರೋಧ .ತಾಮ್ರದ ನಾಣ್ಯವನ್ನು ಹಾಕಬಹುದು ಆದರೆ ಚೀನಾದ ಹಳೆಯ ನಾಣ್ಯವನ್ನು ಹಾಕಿದರೆ ಬಹಳ ಒಳ್ಳೆಯದು.
ಮರೆತು ಕೂಡ ಮನೆಯ ಹಿಂಬಾಗಿಲಿಗೆ ನಾಣ್ಯವನ್ನು ತೂಗು ಹಾಕಬೇಡಿ. ಮನೆಯ ಮುಂಬಾಗಿಲಿನ ಒಳಭಾಗದಲ್ಲಿ ಮಾತ್ರ ನಾಣ್ಯವನ್ನು ಹಾಕಿ ಹಿಂದೆ ಹಾಕಿದರೆ ಮನೆ ಪ್ರವೇಶಿಸಿದ ಲಕ್ಷ್ಮಿ ಹಿಂದಿನಿಂದ ಹೊರಗೆ ಹೋಗುತ್ತಾಳೆ. ಹಾಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.

ಮನೆಯ ಪ್ರವೇಶ ದ್ವಾರದ ಹೊರಭಾಗದಲ್ಲಿ ಹ್ಯಾಂಗಿಂಗ್ ಗಂಟೆಯನ್ನು ತೂಗುಹಾಕಿ, ಗಂಟೆಯ ಶಬ್ದವು ಸುಖ ಸಮೃದ್ಧಿ ಪ್ರವೇಶ ಮಾಡುವ ಸಂಕೇತ ನೀಡುತ್ತದೆ. ಮನೆಯ ಮುಖ್ಯದ್ವಾರದ ಹೊರಕ್ಕೆ ಗಂಟೆ ಹಾಕುವುದರಿಂದ ಧನಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುತ್ತದೆ. ತುಂಬಾ ಗಂಟೆಯನ್ನು ಕಟ್ಟಬೇಡಿ ಕೆಂಪು ರಿಬ್ಬನ್ ನಲ್ಲಿ ಕಟ್ಟಿದ ಸಣ್ಣ ಸಣ್ಣ ಗಂಟೆಗಳು ಶುಭವನ್ನು ಉಂಟು ಮಾಡುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top