fbpx
ಕ್ರಿಕೆಟ್

ಆರ್‌ಸಿಬಿ ಸೇರಿಕೊಂಡ ವೆಸ್ಟ್ ಇಂಡೀಸ್ ಆಟಗಾರ ಶಿಮ್ರೊನ್ ಹೆಟ್ಮೆರ್ ವೀಡಿಯೋ ವೈರಲ್

ಡಿಸೆಂಬರ್ 18 ರಂದು ಜೈಪುರದಲ್ಲಿ ನಡೆದ 2019ನೇ ಇಂಡಿಯನ್ ಪ್ರೀಮಿಯರ್ ಲೀಗ್ ನ ಟ್ವೆಂಟಿ-20 ಆವೃತ್ತಿಯ ಕ್ರಿಕೆಟ್ ಚಾಂಪಿಯನ್‌ಶಿಪ್‌ಗಾಗಿ ಹರಾಜು ಪ್ರಕ್ರಿಯೆ ನಡೆಯಿತು. ಹರಾಜು ಪ್ರತಿಕ್ರಿಯೆ ಸುಗುಮವಾಗಿ ನಡೆದಿದ್ದು, ಅನೇಕ ಆಟಗಾರರು ಭಾರಿ ಮೊತ್ತಕ್ಕೆ ಹರಾಜಾದರು. ಈ ವೇಳೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊಸದಾಗಿ ಒಂದಿಷ್ಟು ಆಟಗಾರರನ್ನು ಕೊಂಡು ಕೊಂಡಿತು. ಅದರಲ್ಲೂ ವಿಶೇಷವಾಗಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯುವ ಆಲ್‌ರೌಂಡರ್ ಆಟಗಾರ ಶಿವಂ ದುಬೆ ಅವರನ್ನು ಬರೋಬ್ಬರಿ 5 ಕೋಟಿ ಗೆ ಖರೀದಿಸಿತು ಹಾಗೂ ವೆಸ್ಟ್‌ಇಂಡೀಸ್‌ನ ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಯಾಯೆರ್ ಅವರನ್ನು 4.2 ಕೋಟಿ ರೂ ಗೆ ಕೊಂಡು ಕೊಂಡಿತು.

ಈ ಸಂದರ್ಭ್ದಲ್ಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನನ್ನು ಖರೀದಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ವೆಸ್ಟ್‌ಇಂಡೀಸ್‌ನ ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಯಾಯೆರ್ ಅವರು ಅದರ ಕುರಿತಾಗಿ ಒಂದು ವಿಡಿಯೋ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಅಪ್ಲೋಡ್ ಮಾಡಿದ್ದಾರೆ. ಮೊದಲು ಫ್ರಾಂಚೈಸಿಗಳು ತನ್ನ ಹೆಸರಿಗೆ ಬಿಡ್ ಮಾಡುತ್ತಿದ್ದನ್ನು ಕಂಡ ಶಿಮ್ರಾನ್ ಕುಣಿದು ಕುಪ್ಪಳಿಸಿದ್ದಾರೆ ನಂತರ ದೇವರಿಗೆ ಕೈಮುಗಿದು ಪ್ರಾರ್ಥಿಸಿದ್ದಾರೆ.

 

 

ತಂದನಂತರ ನನ್ನನ್ನು ಹರಾಜಿನಲ್ಲಿ ಖರೀದಿ ಮಾಡಿದ RCB ತಂಡಕ್ಕೆ ಧನ್ಯವಾದ ಹೇಳಿದ ಶಿಮ್ರಾನ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳುತ್ತಿರುವ ವಿಡಿಯೋ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top