ದೇವರು

ಸದ್ಗುರು ಶ್ರೀ ಶಿರಡಿ ಸಾಯಿ ಬಾಬಾ ತಮ್ಮ ಭಕ್ತರಿಗಾಗಿ ನೀಡಿದ ಭರವಸೆಯ ವಚನಗಳು – ತಪ್ಪದೆ ಓದಿ ಸಾಯಿ ಕೃಪೆಗೆ ಪಾತ್ರರಾಗಿ !

ಸದಾ ನಿಂಬ ವೃಕ್ಷಸ್ಯ ಮೂಲಾಧಿವಾಸಾತ್
ಸುಧಾ ಸ್ರಾವಿಣಂ ತಿಕ್ತಮಪ್ಯಪ್ರಿಯಂತಂ 
ತರುಂ ಕಲ್ಪವೃಕ್ಷಾಧಿಕಂ ಸಾಧಯಂತಂ
ನಮಾಮೀಶ್ವರಂ ಸದ್ಗುರುಂ ಸಾಯಿನಾಥಂ||

ಕಹಿಯಾದ ಬೇವನ್ನು ಸಿಹಿ ಮಾಡಿದ , ಕಲ್ಪತರುವಿನಂತೆ ಬೇಡಿದ ವರಗಳನ್ನು ಕೊಡುವ ಶ್ರೀ ಸಾಯಿನಾಥ ಸದ್ಗುರುವಿಗೆ ನಮಸ್ಕಾರಗಳು ಎಂಬುದು ಈ ಮೇಲಿನ ಕಲಿಯುಗದ ನಿಜದೈವ ಎಂದೇ ಮನೆಮಾತಾಗಿರುವ ‘ಶ್ರೀ ಶಿರಡಿ ಸಾಯಿಬಾಬಾ’ ರವರ ಶ್ಲೋಕದ ತಾತ್ಪರ್ಯ. ಅಸಲಿಗೆ ಶ್ರೀ ಶಿರಡಿ ಸಾಯಿಬಾಬಾ ಕಾಮಧೇನು, ಕಲ್ಪವೃಕ್ಷಕ್ಕಿಂತಲೂ ಮಿಗಿಲು ಎಂಬುದರಲ್ಲಿ ಎರಡು ಮಾತಿಲ್ಲ. ಭಕ್ತಿಯಿಂದ ಓಡಿ ಬರುವ ಭಕ್ತರನ್ನು ತಾಯಿಯಂತೆ ಸಲುಹಿ ಆದರಿಸುವ, ನೊಂದು-ಬೆಂದು ಬರುವ ಭಕ್ತಾದಿಗಳ ಸಂಕಷ್ಟಗಳ ತಂದೆಯಂತೆ ನಿಂತು ಬಗೆಹರಿಸುವ ಸಾಯಿಬಾಬಾ ತಾಯಿಯು ಹೌದು, ತಂದೆಯು ಹೌದು. ಸುಮಾರು 60 ವರ್ಷಗಳ ಕಾಲ ಪುಣ್ಯಕ್ಷೇತ್ರ ಶಿರಡಿಯಲ್ಲಿ ಜೀವಿಸಿದ್ದ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶ್ರೀ ಸಾಯಿಬಾಬಾ ನಡೆಸಿದ ಚಮತ್ಕಾರಗಳು ಅಗಣಿತ, ಅನಂತ. ಮಹಾಮಹಿಮರಾದ ಶ್ರೀ ಸಾಯಿ ಬಾಬಾ ಇಂದಿಗೂ ತನ್ನನು ನಂಬಿ ಬಂದವರನ್ನು ಬರಿಗೈ ನಲ್ಲಿ ಕಳುಹಿಸಿದ ಉದಾಹರಣೆಗಳೇ ಇಲ್ಲಾ. ಸಂತರಲ್ಲಿ ಮಹಾನ್ ಸಂತರಾದ ಶ್ರೀ ಸಾಯಿನಾಥ ಇಂದಿಗೂ ದಿವ್ಯ ಪವಾಡಗಳನ್ನು ನಡೆಸುವುದರ ಮೂಲಕ ನಮ್ಮ- ನಿಮ್ಮ ನಡುವೆಯೇ ಇದ್ದಾರೆ ಹಾಗೂ ಇರುತ್ತಾರೆ ಕೂಡ . ‘ಸಾಯಿ-ಸಾಯಿ’ ಎಂದು ನನ್ನನ್ನು ಸ್ಮರಿಸಿದರೆ ಸಾಕು ಭಕ್ತನ ಬಳಿ ಓಡಿ ಬರುವೆ ಎಂದ ಶ್ರೀ ಸಾಯಿಬಾಬಾ ಇಂದಿಗೂ ತಮ್ಮ ಮಾತನ್ನು ತಪ್ಪಿಲ್ಲ. ನನ್ನ ಪ್ರಿಯ ಭಕ್ತ ಸಪ್ತಸಾಗರದ ಆಚೆ ಇದ್ದರೂ ನಾನು ಅವನನ್ನು ಗುಬ್ಬಿಯ ಕಾಲಿಗೆ ದಾರ ಕಟ್ಟಿ ಎಳೆದುಕೊಂಡು ಬರುವಂತೆ ನನ್ನೆಡೆಗೆ ಎಳೆದು ತರುತ್ತೇನೆ ಎಂದು ಹೇಳುತ್ತಿದ್ದ ಬಾಬಾರ ಮಾತುಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ. ಇಂತಹ ದಿವ್ಯ ಫಕೀರರಾದ ಶ್ರೀ ಸಾಯಿಬಾಬಾ ತಮ್ಮ ಭಕ್ತರಿಗಾಗಿ ಬೆಲೆಯೇ ಕಟ್ಟಲಾಗದ ಮಹೋನ್ನತ ವಚನಗಳನ್ನು ನೀಡಿದ್ದಾರೆ. ಯಾರೇ ಆದರೂ ಸರಿ ಜಾತಿ-ಮತ-ಧರ್ಮದ ಭೇದ-ಭಾವವಿಲ್ಲದೆ ಈ ದಿವ್ಯ ವಚನಗಳನ್ನು ಸ್ಮರಿಸಿ , ಶ್ರೀ ಸಾಯಿಬಾಬಾ ರವರನ್ನು ಅಖಂಡ ಭಕ್ತಿಯಿಂದ ಆರಾಧಿಸಲು ಶುರು ಮಾಡಿದರೆ ಸಾಕು ಅವರೆಂದಿಗೂ ಬಾಬಾರಿಂದ ನಿರಾಸೆಗೊಳಗಾಗುವುದೇ ಇಲ್ಲಾ. ನೀವು ಒಮ್ಮೆ ಬಾಬಾರನ್ನು ನೋಡಿ, ನಿಮ್ಮನ್ನು ಜೀವನ ಪರ್ಯಂತ ಬಾಬಾ ನೋಡಿಕೊಳ್ಳುತ್ತಾರೆ.

ಸದ್ಗುರು ಶ್ರೀ ಶಿರಡಿ ಸಾಯಿಬಾಬಾ ರವರು ಭಕ್ತ ಕೋಟಿಗೆ ನೀಡಿದ ಮಧುರ-ಮನೋಹರ ವಚನಗಳು ಇಂತಿವೆ :

 

 

 

 

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top