fbpx
ಭವಿಷ್ಯ

ನಾಳೆ ಧನುರ್ಮಾಸದ ಅಂಗಾರಕ ಸಂಕಷ್ಟಹರ ಚತುರ್ಥಿ,ಈ ಚತುರ್ಥಿಯನ್ನು ಹೇಗೆ ಆಚರಣೆ ಮಾಡಿದ್ರೆ ಯಾವೆಲ್ಲ ಫಲಗಳು ಸಿಗುತ್ತೆ ಗೊತ್ತಾ

ಇದೇ ಮಂಗಳವಾರ ಧನುರ್ಮಾಸದ ಅಂಗಾರಕ ಸಂಕಷ್ಟಹರ ಚತುರ್ಥಿ.ಯಾವ ರೀತಿ ಆಚರಣೆ ಮಾಡಬೇಕು ? ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ? ಯಾವೆಲ್ಲಾ ಫಲಗಳು ಲಭಿಸುತ್ತವೆ ?
ಮಂಗಳವಾರ ,ಡಿಸೆಂಬರ್ 25 ನೇ ತಾರೀಖು, ಧನುರ್ಮಾಸದಲ್ಲಿ ಬಂದಿರುವ ಅಂಗಾರಕ ಸಂಕಷ್ಟಹರ ಚತುರ್ಥಿ ತುಂಬಾ ವಿಶೇಷವಾಗಿದೆ. ಈ ದಿನ ಮಹಿಳೆಯರು ಉಪವಾಸ ಮಾಡುವರು, ಸಾಮಾನ್ಯವಾಗಿ ಈ ಅಂಗಾರಕ ಸಂಕಷ್ಟಹರ ಚತುರ್ಥಿಯನ್ನು ಯಾವ ರೀತಿ ಆಚರಣೆ ಮಾಡಬೇಕು ? ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ.

ಧನುರ್ಮಾಸದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ನಮಗೆ ಪ್ರಾಪ್ತಿಯಾಗಿದೆ.ಇದು ತುಂಬಾ ಶುಭವಾದದ್ದು, ಅಂಗಾರಕ ಸಂಕಷ್ಟಹರ ಚತುರ್ಥಿಯನ್ನು ನಾವೆಲ್ಲಾ ಭಕ್ತಿ ಶ್ರದ್ಧೆಯಿಂದ ಆಚರಿಸಿದರೆ, ನಮ್ಮೆಲ್ಲ ದುಃಖಗಳು ದೂರವಾಗುತ್ತದೆ. ಇಂತಹ ಒಂದು ಸುಸಂದರ್ಭವನ್ನು ಆ ಭಗವಂತನೇ ನಮ್ಮ ಸಂಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ನೀಡಿದ್ದಾನೆ.

ಪ್ರತಿಯೊಬ್ಬರೂ ಕೂಡ ಈ ಅಂಗಾರಕ ಸಂಕಷ್ಟಹರ ಚತುರ್ಥಿ ವ್ರತವನ್ನು ಆಚರಣೆ ಮಾಡಬೇಕು. ಹೇಗೆ ಮಾಡಬೇಕು ? ಇದರಿಂದ ಏನು ಫಲ ? ಎನ್ನುವ ಪ್ರಶ್ನೆ ಬಹಳಷ್ಟು ಜನರಲ್ಲಿ ಇರುತ್ತದೆ. ಪ್ರತಿನಿತ್ಯವೂ ನಾವು ನೋಡುತ್ತಿದ್ದೇವೆ ಭೀಕರ ಅಪಘಾತಗಳು, ಅವಘಡದ ಸುದ್ದಿಗಳು. ಮುಂದೆ ಬರುವ ಅಪಘಾತ, ಅವಘಡಗಳನ್ನು ಮತ್ತು ಜೀವನದಲ್ಲಿರುವ ಸಂಕಷ್ಟಗಳನ್ನು ನಿವಾರಿಸುತ್ತದೆ ಈ ಅಂಗಾರಕ ಸಂಕಷ್ಟಹರ ಚತುರ್ಥಿ.
ಬರುವ ತೊಂದರೆ, ಸಂಕಷ್ಟ ಅಪಘಾತ ಅವಘಡಗಳನ್ನು ಸಣ್ಣ ಪ್ರಮಾಣವನ್ನಾಗಿಸುತ್ತದೆ ನಮ್ಮ ಭಕ್ತಿ ಮತ್ತು ಶ್ರದ್ಧೆ. ಅದಕ್ಕಾಗಿಯೇ ಯಜ್ಞಗಳು,ವ್ರತಗಳು, ಆಚರಣೆಗಳು, ಹೋಮಗಳನ್ನು ಮಾಡುವುದು.ಹಾಗಾಗಿ ಇಂತಹ ಅಂಗಾರಕ ಸಂಕಷ್ಟಹರ ಚತುರ್ಥಿ ವ್ರತವನ್ನು ಪ್ರಾತಃಕಾಲದಲ್ಲಿ ಎದ್ದು ಸೂರ್ಯೋದಯಕ್ಕೆ ಮುಂಚೆ ಸ್ನಾನ ಮಾಡಿ ಶ್ವೇತ ವಸ್ತ್ರಗಳನ್ನು ಧಾರಣೆ ಮಾಡಿ, ನಿಮ್ಮ ಮನೆಯ ಹತ್ತಿರ ಇರುವ ಅಶ್ವತ್ಥ ವೃಕ್ಷದ ಬಳಿ ಹೋಗಿ ಹದಿನೆಂಟು ಬಾರಿ ಪ್ರದಕ್ಷಿಣೆ ಮಾಡಿ.

 

 

 

“ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣು ರೂಪಿಣಿ, ಅಗ್ರತೋ ಶಿವರೂಪಾಯ, ವೃಕ್ಷ ರಾಜಾಯ ನಮಃ” ಈ ಮಂತ್ರವನ್ನು ಹೇಳಿಕೊಂಡು ಹದಿನೆಂಟು ಬಾರಿ ಪ್ರದಕ್ಷಿಣೆಯನ್ನು ಮಾಡಿ ಪೂರ್ವಾಭಿಮುಖವಾಗಿ ಕೂತು ಸಂಕಲ್ಪ ಮಾಡಿ, ಮಹಾ ಗಣಪತಿಯೇ ಜಗತ್ತಿಗೆ ಬರುವ ಸಂಕಷ್ಟ, ಅವಘಡಗಳನ್ನು ನಿವಾರಣೆ ಮಾಡಿ ನನ್ನ ಕುಟುಂಬ ದಲ್ಲಿ ಬರುವ ಸಂಕಷ್ಟಗಳನ್ನು ನಿವಾರಣೆ ಮಾಡು, ಮಾಡುವ ಕೆಲಸ ಕಾರ್ಯಗಳಲ್ಲಿ ವಿಘ್ನಗಳನ್ನು ದೂರ ಮಾಡಿ ನಿರ್ವಿಘ್ನವಾಗಿ ಕೆಲಸ ಕಾರ್ಯಗಳನ್ನು ನಮಗೆ ಮಾಡಿಸಿ ಕೊಡಿ. ಸುಖಜೀವನವನ್ನು ಅನುಗ್ರಹಿಸು ಎಂದು ಪೂರ್ವಾಭಿಮುಖವಾಗಿ ಕುಳಿತು ಸಂಕಲ್ಪ ಮಾಡಿ.
ಸಂಕಲ್ಪ ಮಾಡಿದ ನಂತರ ಬೆಳಗ್ಗೆಯಿಂದ ಸಂಜೆಯವರೆಗೆ ಉಪವಾಸವನ್ನು ಮಾಡಬೇಕು. ನಿರಾಹಾರರಾಗಿರಬೇಕು. ಸಾಯಂಕಾಲ ಗಣೇಶನ ದೇವಾಲಯಕ್ಕೆ ಹೋಗಬೇಕು, ಅದರಲ್ಲೂ ಉತ್ತರಾಭಿಮುಖವಾಗಿರುವ ಗಣೇಶನ ದೇವಾಲಯಕ್ಕೆ ಹೋಗಿ ವ್ಯವಸ್ಥಿತವಾಗಿ ಸಂಕಷ್ಟಹರ ಚತುರ್ಥಿ ವ್ರತವನ್ನು ಆಚರಿಸಿ ಉಪವಾಸದ ಅಂತ್ಯವನ್ನು ಮಾಡಿ, ಮಹಾ ಮಂಗಳಾರತಿ ಆದ ಮೇಲೆ ಚಂದ್ರ ಅರ್ಘ್ಯವನ್ನು ಬಿಟ್ಟು ಚಂದ್ರನ ದರ್ಶನ ಮಾಡಿ ಲವಣವಿಲ್ಲದ ಭೋಜನವನ್ನು ಸ್ವೀಕರಿಸಬೇಕು.

ನಂತರ ಬೆಳಗ್ಗೆ ಸೂರ್ಯನ ದರ್ಶನ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡಿ ಆಹಾರವನ್ನು ಸ್ವೀಕರಿಸಬಹುದು. ಅಂಗಾರಕ ಸಂಕಷ್ಟಹರ ಚತುರ್ಥಿಯನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಿ ನೀವು ಕೂಡ ಇದರ ಪುಣ್ಯ ಫಲವನ್ನು ಪಡೆದುಕೊಳ್ಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top