fbpx
ಭವಿಷ್ಯ

ಏನೇ ಮಾಡಿದ್ರು ಮನಸ್ಸಿಗೆ ನೆಮ್ಮದಿಯಿಲ್ಲ ಅಂದ್ರೆ ಶಾಸ್ತ್ರದ ಪ್ರಕಾರ ಈ ಪರಿಹಾರ ಮಾಡ್ಕೊಳ್ಳಿ ಸರಿ ಹೋಗುತ್ತೆ

ಮಾನಸಿಕ ಒತ್ತಡ ಯಾವ ಗ್ರಹಗಳ ಪರಿಣಾಮದಿಂದ ಆಗುತ್ತದೆ ಎಂದು ನಿಮಗೆ ಗೊತ್ತೇ ? ಮಾನಸಿಕ ಒತ್ತಡವನ್ನು  ಕಡಿಮೆ ಮಾಡಿಕೊಳ್ಳಲು ಈ ಕೆಲವು ಪರಿಹಾರಗಳನ್ನು ಅವಶ್ಯವಾಗಿ  ಮಾಡಿಕೊಳ್ಳಿ 

ಸಮಯ ಮತ್ತು ಕಾಲದ ಹಿಂದೆ ಓಡುತ್ತಿರುವ ಈಗಿನ ಕಾಲದ  ಜನರಿಗೆ ಒತ್ತಡ ಸಾಮಾನ್ಯವಾಗಿದೆ. ಕೆಲವೊಮ್ಮೆ ವಿನಾ ಕಾರಣಕ್ಕೆ ಒತ್ತಡ ಕಾಣಿಸಿಕೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒತ್ತಡಕ್ಕೆ ಮಾನಸಿಕ ಒತ್ತಡ ಚಂದ್ರ ಕಾರಣನಾಗುತ್ತಾನೆ. ಮಹಿಳೆಯರಲ್ಲಿ ಒತ್ತಡ ಹೆಚ್ಚಾಗಲು ಮಂಗಳ ಗ್ರಹ ಹಾಗೂ ಗುರುವಿನ ಗ್ರಹದ ಪ್ರಭಾವವು ಸಹ ಇರುತ್ತದೆ .

ಗುರು, ಚಂದ್ರ , ಮಂಗಳ ಈ ಮೂರರಲ್ಲಿ ಒಂದು ಗ್ರಹದಲ್ಲಿ ವ್ಯತ್ಯಾಸವಾದರೂ, ಮಹಿಳೆಯರಿಗೆ ಒತ್ತಡ ಕಾಡುತ್ತದೆ. ಆರೋಗ್ಯ ಸಂಬಂಧಿತ ಒತ್ತಡ ಕಾಡುತ್ತಿದ್ದರೆ, ಚಂದ್ರ ಹಾಗೂ ಬುಧ ಗ್ರಹ ದುರ್ಬಲವಾಗಿದೆ ಎಂದರ್ಥ. ಚಂದ್ರನ ಜೊತೆ ರಾಹು ಕೆಟ್ಟ ಸ್ಥಾನದಲ್ಲಿ ಸ್ಥಿತನಿದ್ದರೆ ಸಹ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಾಡುತ್ತವೆ .

 

 

 

ಆರೋಗ್ಯ ಸಂಬಂಧಿತ ಒತ್ತಡ ಕಾಡುತ್ತಿದರೆ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ, ನಿಮ್ಮ ವಯಸ್ಸಿನಷ್ಟು ಮಿಠಾಯಿಯನ್ನು ದೇವರಿಗೆ ಅರ್ಪಿಸಿ. ಸಾಧ್ಯವಾದರೆ ಬೆಳ್ಳಿಯ ವಸ್ತುವನ್ನು ಶಿವಲಿಂಗಕ್ಕೆ ಅರ್ಪಿಸಿ .ಬೆಳ್ಳಿಯ ವಸ್ತುವೊಂದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಅದು ಒತ್ತಡ ಕಡಿಮೆ ಮಾಡಲು ನೆರವಾಗುತ್ತದೆ.

ಶುಕ್ರನ ಜತೆ ಚಂದ್ರ ದುರ್ಬಲವಾಗಿದ್ದರೆ, ಮದುವೆ ಸಂಬಂಧಿತ ಸಮಸ್ಯೆ ಮಹಿಳೆಯರನ್ನು ಕಾಡುತ್ತದೆ .ದಾಂಪತ್ಯದಲ್ಲಿ ಸಮಸ್ಯೆ ಕಂಡು ಬಂದಲ್ಲಿ , ಬುಧವಾರ ದೇವಿಯ ದೇವಸ್ಥಾನಕ್ಕೆ ಹೋಗಿ ಅಲಂಕಾರಿಕ ವಸ್ತುಗಳನ್ನು ದಾನ ಮಾಡಿ .ಸುಗಂಧವನ್ನು ನಿಯಮಿತ ರೂಪದಲ್ಲಿ ಬಳಸಿ.
ಮಕ್ಕಳ ಸಂಬಂಧಿತ ಒತ್ತಡ ಕಾಡುತ್ತಿದ್ದರೆ , ಇದಕ್ಕೆ ಚಂದ್ರ, ಬುಧನ ಜೊತೆ ಗುರು ದುರ್ಬಲನಾಗಿದ್ದಾನೆ ಎಂದರ್ಥ. ಸಂತಾನ ಪ್ರಾಪ್ತಿಗಾಗಿ  ಮಹಿಳೆಯರು ಗುರುವಾರ ದೇವಿಗೆ ಅರಿಶಿನದ ಕೊಂಬನ್ನು ಅರ್ಪಿಸಿ .

ಒಂದು ಹಳದಿ ಬಟ್ಟೆಯಲ್ಲಿ ಅರಿಶಿನದ ಕೊಂಬನ್ನು ಕಟ್ಟಿ, ನಿಮ್ಮ ಬಳಿ ಇಟ್ಟುಕೊಂಡರೂ ಸಹ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.ಗಂಡನ ಮನೆಯಿಂದ ಒತ್ತಡ ಅನುಭವಿಸುತ್ತಿದ್ದರೆ, ಮಹಿಳೆಯರು ಶುಕ್ರವಾರ ದೇವಿಯ ದೇವಸ್ಥಾನಕ್ಕೆ ಹೋಗಿ ಕುಂಕುಮವನ್ನು ಅರ್ಪಿಸಿ ನಿಯಮಿತ ರೂಪದಲ್ಲಿ ಕುಂಕುಮವನ್ನು ಇಟ್ಟುಕೊಳ್ಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top