ದೇವರು

ಅಪ್ಪಿತಪ್ಪಿನ್ನು ಈ ಸ್ಥಳಗಳಲ್ಲಿ ದೇವರ ಹೆಸರನ್ನು ಮನಸ್ಸಿನಲ್ಲಿ ನೆನೆಸಿಕೊಳ್ಳಬಾರದಂತೆ

ಯಾವುದೇ ಪರಿಸ್ಥಿತಿಯಲ್ಲಿಯೂ ಈ ಸ್ಥಳಗಳಲ್ಲಿ ದೇವರ ಹೆಸರನ್ನು ಮನಸ್ಸಿನಲ್ಲಿ ನೆನೆಸಿಕೊಳ್ಳಬಾರದು.
ಸಾಮಾನ್ಯವಾಗಿ ಪ್ರತಿಯೊಬ್ಬರು ಭಗವಂತನ ನಾಮ ಸ್ಮರಣೆಯನ್ನು ಮಾಡುವುದನ್ನು ನಾವು ನೋಡುತ್ತಿರುತ್ತೇವೆ. ಭಗವಂತನ ನಾಮಸ್ಮರಣೆ ಮಾಡಬೇಕಾದರೆ ಯಾವ ಸಮಯ ಸಂದರ್ಭ ಬೇಕಾಗಿಲ್ಲ. ನಾವು ಮಾಡುವ ನಾಮಸ್ಮರಣೆ ಕೆಲಸದಲ್ಲಿ ಸಕಾರಾತ್ಮಕ ಫಲವನ್ನು ಕಾಣುವುದು ಪ್ರತಿಯೊಬ್ಬರ ಉದ್ದೇಶವಾಗಿರುತ್ತದೆ. ಆದ್ದರಿಂದಲೇ ಹಿರಿಯರು ಅನಾದಿಕಾಲದಿಂದಲೂ ಬೆಳಗ್ಗೆ ಎದ್ದ ತಕ್ಷಣ ಭಗವಂತನ ನಾಮಸ್ಮರಣೆ ಮಾಡುತ್ತಾ ಎದ್ದೇಳಬೇಕು ಎಂದು ಹೇಳಿದ್ದಾರೆ.
ಹೀಗೆ ಭಗವಂತನನ್ನು ನಾಮ ಸ್ಮರಣೆ ಮಾಡುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ. ಆದರೆ ಯಾವಾಗ ಬೇಕೋ ಆವಾಗ ಎಲ್ಲೆಂದರಲ್ಲಿ ಭಗವಂತನ ನಾಮಸ್ಮರಣೆ ಮಾಡಬಾರದು. ಅದಕ್ಕೂ ಕೂಡ ಒಂದು ನಿಯಮ ಪದ್ಧತಿ ಇದೆ. ಹಾಗೆ ಮಾಡಿದರೆ ಮಾತ್ರ ಭಗವಂತನ ನಾಮಸ್ಮರಣೆಯಿಂದ ಪುಣ್ಯಫಲ ಬರುವುದು. ಅಷ್ಟೇ ಅಲ್ಲದೆ ಒಳ್ಳೆಯದಾಗಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಇಲ್ಲವೆಂದರೆ ಎಲ್ಲಿ ಬೇಕೋ ಅಲ್ಲಿ ಆ ಸಂದರ್ಭದಲ್ಲಿ ಭಗವಂತನ ನಾಮಸ್ಮರಣೆ ಮಾಡುವುದರಿಂದ ಪುಣ್ಯ ಬರುವುದಿಲ್ಲ ಎಂದು ಹೇಳುತ್ತಾರೆ.

 

ಅಂತಹ ಸಂದರ್ಭಗಳಲ್ಲಿ ಯಾವಾಗ ಬೇಕೋ ಆವಾಗ ಭಗವಂತನ ನಾಮ ಸ್ಮರಣೆಯನ್ನು ಮಾಡಬಾರದು. ಅದರಿಂದ ಮತ್ತೊಂದು ಜನ್ಮ ಸಿಗುವುದಿಲ್ಲ, ನರಕದಲ್ಲಿಯೂ ಸ್ಥಾನ ಸಿಗುವುದಿಲ್ಲ ಎನ್ನುವುದು ಹಿರಿಯರ ಮಾತು. ಪ್ರತಿಯೊಬ್ಬರೂ ಪರಮೇಶ್ವರನನ್ನು ಶ್ರೀಮನ್ನಾರಾಯಣನನ್ನು ಧ್ಯಾನ ಮಾಡುವುದು ಸಾಮಾನ್ಯ. ಯಾಕೆಂದರೆ ಭಗವಂತನ ಅನುಸಂಧಾನ ಆಗಬೇಕೆಂದರೆ ನಾಮ ಸಂಕೀರ್ತನೆ ಅತಿಮುಖ್ಯ. ಆದರೆ ಕೆಲವು ಜನ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ಪ್ರದೇಶಗಳಲ್ಲಿ ಭಗವಂತನ ನಾಮಸ್ಮರಣೆ ಮಾಡುತ್ತಾರೆ.

 

 

 

ಅಂತಹ ಪ್ರದೇಶಗಳಲ್ಲಿ ಭಗವಂತನ ನಾಮಸ್ಮರಣೆ ಮಾಡುವುದರಿಂದ ಪುಣ್ಯ ಬರುವುದಕ್ಕಿಂತ ಪಾಪದ ಮೂಟೆಯನ್ನೇ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಹೇಳುತ್ತಾರೆ ಹಿರಿಯರು.ಈಶ್ವರನ ಧ್ಯಾನ ಮಾಡಬೇಕು.ಭಗವಂತನ ಪವಿತ್ರ ನಾಮಜಪವನ್ನು ಎಲ್ಲೆಂದರಲ್ಲಿ ನಿಯಮವಿಲ್ಲದೆ ಭಕ್ತಿ, ಶ್ರದ್ಧೆ ಇಲ್ಲದೆ ಮಾಡಬಾರದು.ಆ ಪ್ರದೇಶಗಳು ಯಾವುವು ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಬಹಳಷ್ಟು ಜನ ಸ್ನಾನ ಮಾಡುವ ಸ್ಥಳದಲ್ಲಿ ಭಗವಂತನ ಭಕ್ತಿಗೀತೆಗಳನ್ನು ಹಾಡುತ್ತಾ ನಾಮ ಸಂಕೀರ್ತನೆ ಮಾಡುತ್ತಾ ಸ್ನಾನ ಮಾಡುತ್ತಿರುತ್ತಾರೆ. ಹಾಗೆ ಮಾಡುವುದರಿಂದ ಪುಣ್ಯ ಪಕ್ಕಕ್ಕಿಟ್ಟು ಪಾಪವೇ ಹೆಚ್ಚಾಗಿ ಬರುತ್ತದೆ ಎಂದು ಹೇಳುತ್ತಾರೆ ಪಂಡಿತರು.ಆ ಪ್ರದೇಶ ಭಗವಂತನ ನಾಮಸ್ಮರಣೆ ಮಾಡುವ ಪ್ರದೇಶ ಅಲ್ಲ.

ಪತಿ-ಪತ್ನಿಯರು ಸಖ್ಯತೆಯಲ್ಲಿ ಇರುವಾಗ ಅಥವಾ ಅನ್ಯೋನ್ಯವಾಗಿ ಇರುವಾಗ ಭಗವಂತನ ಧ್ಯಾನ ಮಾಡಬಾರದು. ಇದರಿಂದ ಪತಿ-ಪತ್ನಿಯರ ನಡುವೆ ವಿರಸ ಉಂಟಾಗುತ್ತದೆ.ಸಂಬಂಧಗಳು ಕೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪತಿ-ಪತ್ನಿಯರು ಒಂದಾಗುವ ಸಮಯದಲ್ಲಿ ಭಗವಂತನ ನಾಮಸ್ಮರಣೆ ಮಾಡಬಾರದು.

ಮಾಂಸಾಹಾರ ಭಕ್ಷಣೆ ಮಾಡುವಾಗ ಭಗವಂತನ ನಾಮ ಸ್ಮರಣೆಯನ್ನು ಮಾಡಬಾರದು. ಹಾಗೆ ಮಾಡುವುದರಿಂದ ಲಕ್ಷ್ಮಿ ಕೂಡ ಮನೆಯಿಂದ ಹೊರಗೆ ಹೋಗುತ್ತಾಳೆ.
ಪವಿತ್ರವಾದಂತಹ ಭಗವಂತನ ನಾಮಸ್ಮರಣೆ ಮಾಡಬೇಕಾದರೆ ಪವಿತ್ರವಾದಂತಹ ಸ್ಥಳದಲ್ಲಿ ದೇವರ ಕೋಣೆಯಲ್ಲಿ ಅಥವಾ ಅದಕ್ಕೆ ಸೂಕ್ತವಾದ ಸ್ಥಳದಲ್ಲಿ ಕುಳಿತು ಕೊಂಡು ಭಗವಂತನ ನಾಮ ಸ್ಮರಣೆಯನ್ನು ಮಾಡಬೇಕು. ಆದ್ದರಿಂದ ಭಗವಂತನ ನಾಮಸ್ಮರಣೆ ಮಾಡುವುದಕ್ಕೆ ಕೂಡ ಕೆಲವೊಂದು ಸ್ಥಳಗಳನ್ನು ಮೀಸಲಿಡಲಾಗಿದೆ. ಅಂತಹ ಪ್ರದೇಶದಲ್ಲಿ ಮಾತ್ರ ಜಪ,ತಪ, ಅನುಷ್ಠಾನ ನಾಮ ಸಂಕೀರ್ತನೆಯನ್ನು ಮಾಡುವುದು ಸೂಕ್ತ. ಅದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಮತ್ತು ಹಾಗೆಯೇ ಸಕಲ ಸಂಪತ್ತು ಲಭಿಸಿ ಜೀವನ ನೆಮ್ಮದಿಯಾಗಿ ಸಾಗುತ್ತದೆ. ಆದ್ದರಿಂದ ಈ ಕೆಲವು ಪ್ರದೇಶಗಳಲ್ಲಿ ಭಗವಂತನ ನಾಮ ಸ್ಮರಣೆಯನ್ನು ಮಾಡಲು ಹೋಗಬೇಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top