ಮೇಷ ರಾಶಿ
ಇಷ್ಟವಾದ ವಸ್ತುಗಳನ್ನು ಖರೀದಿ ಮಾಡುವಿರಿ,ಧನ ಲಾಭ, ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶಕ್ಕೆ ಪ್ರಯಾಣ ಮಾಡುವ ಸಾಧ್ಯತೆ ಇದೆ, ಮಹಿಳೆಯರಿಗೆ ಅನುಕೂಲ, ದೃಷ್ಟಿ ದೋಷದಿಂದ ತೊಂದರೆ ಉಂಟಾಗಲಿದೆ ,ಮನಸ್ಸಿನಲ್ಲಿ ಗೊಂದಲಮಯವಾದ ವಾತಾವರಣ, ತಾಳ್ಮೆ ಅತ್ಯಗತ್ಯ.
ಪರಿಹಾರ:ಪ್ರತಿನಿತ್ಯ ಗಾಯಿತ್ರಿ ಮಂತ್ರವನ್ನು ಪಾರಾಯಣ ಮಾಡಿ ಎಂಟು ಜನ ಸುಮಂಗಲಿಯರಿಗೆ ಅರಿಶಿನ-ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ.
ವೃಷಭ ರಾಶಿ
ಉದ್ಯೋಗದಲ್ಲಿ ಬಡ್ತಿ, ಯತ್ನ ಕಾರ್ಯದಲ್ಲಿ ಜಯ, ಸ್ತ್ರೀ ಜೊತೆಗಿನ ವ್ಯವಹಾರಗಳಿಂದ ತೊಂದರೆ ಉಂಟಾಗಲಿದೆ, ಮಾನಸಿಕ ಒತ್ತಡ,ವಾರದ ಮಧ್ಯ ಭಾಗದಲ್ಲಿ ಸಾಮಾನ್ಯ ನೆಮ್ಮದಿಗೆ ಧಕ್ಕೆ ಬರಲಿದೆ, ಕುಲದೇವರ ದರ್ಶನದಿಂದ ಅನುಕೂಲ, ವಾರಾಂತ್ಯದಲ್ಲಿ ಕುಲ ದೇವರ ಪೂಜೆ ಮಾಡಿ.
ಪರಿಹಾರ:“ಓಂ ಗಂ ಗಣಪತಯೇ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ ಮಂಗಳವಾರ ಗಣೇಶನಿಗೆ ದೂರ್ವಾರ್ಚನೆ ಮಾಡಿ 21 ಗರಿಕೆಯನ್ನು ಅರ್ಪಿಸಿ 21 ನಮಸ್ಕಾರವನ್ನು ಮಾಡಿ.
ಮಿಥುನ ರಾಶಿ
ಮಕ್ಕಳಿಂದ ತೊಂದರೆ ಉಂಟಾಗಲಿದೆ, ಇಲ್ಲ ಸಲ್ಲದ ಅಪವಾದ ನಿಂದನೆಗಳು ನಿಮ್ಮ ಮೇಲೆ ಬರಲಿವೆ, ಅಕಾಲ ಬೋಜನ ಪ್ರಾಪ್ತಿಯಾಗಲಿದೆ, ವಿದ್ಯಾರ್ಥಿಗಳಿಗೆ ಪ್ರಗತಿ, ಆಕಸ್ಮಿಕ ಧನಲಾಭ, ವಿವಾಹ ಯೋಗ, ನೀವಾಡುವ ಮಾತುಗಳಿಂದ ಕಲಹ ಉಂಟಾಗಲಿದೆ, ಎಲ್ಲೋ ಒಂದು ಕಡೆ ದಂಡ ಕಟ್ಟುವ ಸಾಧ್ಯತೆ ಇದೆ.
ಪರಿಹಾರ:ಅಂಧ ಮಕ್ಕಳಿಗೆ ಅನ್ನದಾನ ಮಾಡಿ ಅಥವಾ ಕೈಲಾದ ಸೇವೆಯನ್ನು ಮಾಡಿ.
ಕಟಕ ರಾಶಿ
ಮನೆಯಲ್ಲಿ ಶಾಂತಿಯ ವಾತಾವರಣ ನೆಲೆಸಲಿದೆ, ಅಧಿಕವಾದ ಖರ್ಚು, ಸರ್ಕಾರೀ ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾಗಲಿದೆ, ದೂರ ಪ್ರಯಾಣ, ಋಣಬಾಧೆ, ದುಷ್ಟರ ಸಹವಾಸದಿಂದ ದೂರವಿರುವುದು ಉತ್ತಮ.
ಪರಿಹಾರ:ಪ್ರತಿನಿತ್ಯ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿ, ಬುಧವಾರ ವಿಷ್ಣು ದೇವಾಲಯಕ್ಕೆ ಹೋಗಿ ನಾಟಿ ತುಳಸಿಯನ್ನು ಅರ್ಪಿಸಿ ದೀರ್ಘದಂಡ ನಮಸ್ಕಾರ ಮಾಡಿ.
ಸಿಂಹ ರಾಶಿ
ವ್ಯವಹಾರಗಳಲ್ಲಿ ಲಾಭ, ದಾಯಾದಿಗಳ ಕಲಹ, ಆತ್ಮೀಯರ ಭಯ, ಮನಃಕ್ಲೇಶ , ಕೃಷಿಯಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ, ಪ್ರಿಯ ಜನರ ಭೇಟಿ ಮಾಡಲಿದ್ದೇವೆ, ಶ್ರೀಘ್ರದಲ್ಲಿಯೇ ಸಂತಸದ ಸುದ್ದಿ ಕೇಳುವಿರಿ.
ಪರಿಹಾರ:ಪ್ರತಿನಿತ್ಯ ಲಲಿತ ಸಹಸ್ರನಾಮವನ್ನು ಪಾರಾಯಣ ಮಾಡಿ ವಟು ಬ್ರಾಹ್ಮಣರಿಗೆ ಸ್ವಯಂಪಾಕವನ್ನು ನೀಡಿ ನಮಸ್ಕಾರ ಮಾಡಿ.
ಕನ್ಯಾ ರಾಶಿ
ಸಜ್ಜನರ ಸಹವಾಸದಿಂದ ಕೀರ್ತಿ, ಹಣಕಾಸಿನ ತೊಂದರೆ ಉಂಟಾಗಲಿದೆ,ವಿದ್ಯಾರ್ಥಿಗಳಿಗೆ ಉತ್ತಮವಾದ ಸಮಯವಾಗಿದೆ, ಯತ್ನ ಕಾರ್ಯದಲ್ಲಿ ಅನುಕೂಲ, ಮೇಲಧಿಕಾರಿಗಳಿಂದ ತೊಂದರೆ, ಮಾನಸಿಕ ಚಿಂತೆ ಕಾಡಲಿದೆ, ಮನಸ್ಸನ್ನು ಏಕಾಗ್ರತೆಗೆ ತರುವ ಕೆಲಸವನ್ನು ಮಾಡಿ.
ಪರಿಹಾರ:ಪ್ರತಿನಿತ್ಯ “ಓಂ ನಾರಸಿಂಹ ಸುದರ್ಶನಾಯ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ ಬುಧವಾರ ಮತ್ತು ಶನಿವಾರ ವಿಷ್ಣು ದೇವಾಲಯಕ್ಕೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ.
ತುಲಾ ರಾಶಿ
ಈ ವಾರ ವ್ಯರ್ಥ ಧನಹಾನಿ, ಪರಸ್ಥಳ ವಾಸ, ದ್ರವ್ಯಲಾಭ, ಆರೋಗ್ಯ ಸಮಸ್ಯೆ ಎದುರಾಗಲಿದೆ, ಆತ್ಮೀಯರೊಂದಿಗೆ ಮನಸ್ತಾಪ, ಯತ್ನ ಕಾರ್ಯದಲ್ಲಿ ವಿಳಂಬ, ಮನಸ್ಸಿನಲ್ಲಿ ಭಯ ಭೀತಿ ಕಾಡಲಿದೆ, ಅಧಿಕವಾದ ತಿರುಗಾಟ, ವಾರಾಂತ್ಯದಲ್ಲಿ ಆಲಸ್ಯ ಮನೋಭಾವ.
ಪರಿಹಾರ:ಪ್ರತಿನಿತ್ಯ “ ಓಂ ಪವಮಾನಾಯ ನಮಃ” ಈ ಮಂತ್ರವನ್ನು ಜಪಿಸಿ ವೃದ್ಧ ದಂಪತಿಗಳಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯಿರಿ.
ವೃಶ್ಚಿಕ ರಾಶಿ
ತೀರ್ಥಕ್ಷೇತ್ರ ದರ್ಶನ ಮಾಡುವ ಶುಭಯೋಗ, ಕಾರ್ಯ ಕ್ಷೇತ್ರದಲ್ಲಿ ಉತ್ತಮ ಫಲಗಳನ್ನು ಪಡೆಯುತ್ತೀರ, ವಿವಾದಗಳಿಂದ ಆದಷ್ಟು ದೂರವಿರಿ, ವಿವಾದಗಳಿಂದ ದೂರವಿರುವುದು ಉತ್ತಮ, ಮಕ್ಕಳಿಗಾಗಿ ಅಧಿಕ ಖರ್ಚು, ವ್ಯಾಪಾರದಲ್ಲಿ ಏರುಪೇರು ಉಂಟಾಗಲಿದೆ,ಶೀತ ಸಂಬಂಧಿತ ರೋಗಗಳಿಗೆ ತುತ್ತಾಗುವಿರಿ.
ಪರಿಹಾರ:ಪ್ರತಿನಿತ್ಯ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ ಆಂಜನೇಯನಿಗೆ ನಾಟಿ ತುಳಸಿಯನ್ನು ಅರ್ಪಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ.
ಧನಸ್ಸು ರಾಶಿ
ಹಿರಿಯರ ಆಗಮನ, ಮಹಿಳೆಯರಿಗೆ ಉತ್ತಮ ಪ್ರಗತಿ, ವ್ಯಾಪಾರದಲ್ಲಿ ಧನಲಾಭ , ಚಂಚಲ ಮನಸ್ಸು, ಉತ್ತಮ ಸ್ಥಾನಮಾನ ದೊರೆಯಲಿದೆ, ಆಲಂಕಾರಿಕ ವಸ್ತುಗಳಿಗಾಗಿ ಖರ್ಚು, ಋಣಬಾಧೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನೆಲೆಸಲಿದೆ.
ಪರಿಹಾರ:ಪ್ರತಿನಿತ್ಯ ದುರ್ಗಾ ಸಪ್ತಶತಿ ಪಾರಾಯಣ ಮಾಡಿ ಮಂಗಳವಾರ ದುರ್ಗಾ ಮಾತೆಗೆ 21 ನಿಂಬೆಹಣ್ಣಿನ ದೀಪವನ್ನು ಹಚ್ಚಿ ದೀರ್ಘದಂಡ ನಮಸ್ಕಾರವನ್ನು ಮಾಡಿ.
ಮಕರ ರಾಶಿ
ವೃತ ಅಲೆದಾಟ ಮತ್ತು ತಿರುಗಾಟ, ಆಕಸ್ಮಿಕ ಧನ ಲಾಭ, ಮಿತ್ರರಿಂದ ತೊಂದರೆ ಉಂಟಾಗಲಿದೆ, ಸ್ಥಳ ಬದಲಾವಣೆ ಮಾಡಲು ಆಲೋಚನೆ ಮಾಡಲಿದ್ದೀರಿ, ಅಲ್ಪ ಕಾರ್ಯಸಿದ್ಧಿ , ಉದ್ಯೋಗದಲ್ಲಿ ಅಲ್ಪ ಲಾಭ, ಯಾರನ್ನೂ ಹೆಚ್ಚಿಗಿ ನಂಬಬೇಡಿ, ಸಂತಾನ ಪ್ರಾಪ್ತಿ.
ಪರಿಹಾರ:ಪ್ರತಿನಿತ್ಯ ಶಿವ ಪಂಚಾಕ್ಷರಿ ಮಂತ್ರ ವಾದ “ಓಂ ನಮಃ ಶಿವಾಯ” ಈ ಮಂತ್ರವನ್ನು 108 ಬಾರಿ ಜಪಿಸಿ ತಂದೆ ತಾಯಿಗಳಿಗೆ ಪಾದ ಪೂಜೆ ಮಾಡಿ ನಮಸ್ಕರಿಸಿ ಆಶೀರ್ವಾದವನ್ನು ಪಡೆಯಿರಿ.
ಕುಂಭ ರಾಶಿ
ಸ್ಥಿರಾಸ್ತಿ ಮಾರಾಟ, ವಸ್ತ್ರಾಭರಣ ಪ್ರಾಪ್ತಿ, ಕೃಷಿಯಲ್ಲಿ ನಷ್ಟ, ಶತ್ರುಗಳ ನಾಶ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಮಂಗಳ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ.
ಪರಿಹಾರ:ಪ್ರತಿನಿತ್ಯ “ಓಂ ನಮೋ ನಾರಾಯಣಾಯ ನಮಃ” ಈ ಮಂತ್ರವನ್ನು 48 ಬಾರಿ ಜಪಿಸಿ ಅಂಧಮಕ್ಕಳಿಗೆ ನಿಮ್ಮ ಕೈಲಾದ ಸೇವೆಯನ್ನು ಮಾಡಿ.
ಮೀನ ರಾಶಿ
ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಲಿದೆ, ಮಾತಿನ ಚಕಮಕಿ ಉಂಟಾಗಲಿದೆ, ಅಧಿಕವಾದ ಧನವ್ಯಯ, ನೆಮ್ಮದಿ ಇಲ್ಲದ ಜೀವನ ನಿಮ್ಮದಾಗಲಿದೆ, ಪಾಪ ಕಾರ್ಯಕ್ಕೆ ಮನಸ್ಸು ಪ್ರಚೋದನೆ ನೀಡುತ್ತದೆ, ಸ್ವಗೃಹ ವಾಸ , ಇಷ್ಟಾರ್ಥ ಸಿದ್ಧಿಯಾಗಲಿದೆ, ಅಧಿಕವಾದ ತಿರುಗಾಟ.
ಪರಿಹಾರ:ಪ್ರತಿನಿತ್ಯ ಅಶ್ವಥ್ ವೃಕ್ಷಕ್ಕೆ ಹದಿನೆಂಟು ಬಾರಿ ಪ್ರದಕ್ಷಿಣೆ ಮಾಡಿ ಗೋಪೂಜೆಯನ್ನು ಮಾಡಿ ದೀರ್ಘದಂಡ ನಮಸ್ಕಾರವನ್ನು ಮಾಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
