fbpx
ದೇವರು

ಶ್ರೀ ವೆಂಕಟೇಶ್ವರ ದೇಗುಲದ ಗರ್ಭಗುಡಿಯೊಳಗೆ ಬಂದ ಗರುಡ ಪಕ್ಷಿ – ಅಚ್ಚರಿಗೊಳಗಾದ ಭಕ್ತ ಸಮುದಾಯ!

ತೆಲಂಗಾಣದ ಜಗಿತ್ಯಾಲ್‌ ಜಿಲ್ಲೆಯ ಕೊರುಟ್ಲದಲ್ಲಿರುವ ವೆಂಕಟೇಶ್ವರ ದೇಗುಲದ ಗರ್ಭಗುಡಿಯಲ್ಲಿ ಒಂದು ವಿಸ್ಮಯ ನಡೆದಿದೆ. ಈ ವಿಸ್ಮಯವನ್ನು ಕಂಡ ಜನರು ಅಕ್ಷರಶ ಮೂಕವಿಸ್ಮಿತ ರಾಗಿದ್ದಲ್ಲದೆ ಇದು ಸಾಕ್ಷತ್ ಭಗವಂತನ ಚಮತ್ಕಾರವೇ ಎಂದು ಭಾವಿಸದ್ದಾರೆ.

ಅಷ್ಟಕ್ಕೂ ನಡೆದ ಪವಾಡ ಏನು ಗೊತ್ತೇ ?

ಜಗಿತ್ಯಾಲ್‌ ಜಿಲ್ಲೆಯ ಕೊರುಟ್ಲದಲ್ಲಿರುವ ವೆಂಕಟೇಶ್ವರ ದೇಗುಲದ ಗರ್ಭಗುಡಿಯಲ್ಲಿ ಗರುಡ ಪಕ್ಷಿ ವಿಗ್ರಹದ ಪಾದದ ಬಳಿಯೇ ಬಂದು ಕುಳಿತಿದೆ. ಹೌದು, ಮೊದಲೇ ಶ್ರೀ ಮಹಾವಿಷ್ಣುವಿನ ವಾಹನವೆಂದೇ ಪ್ರಸಿದ್ಧಿಯಾಗಿರುವ ಗರುಡ ಪಕ್ಷಿ ದೇವರ ಪಾದದಲ್ಲೇ ಬಂದು ಕುಳಿತಿದ್ದು ಭಕ್ತರನ್ನು ಮಂತ್ರಮುಗ್ದರನ್ನಾಗಿಸಿದೆ. ನೆರದಿದ್ದ ಭಕ್ತಾದಿಗಳಂತೂ ಸ್ವಾಮಿಗೆ ಭಕ್ತಿಯ ಝೇಂಕಾರವನ್ನೇ ಹಾಕಿದ್ದಾರೆ.ಒಟ್ಟಿನಲ್ಲಿ ಇದು ಅಕ್ಷರಶ: ಭಗವಂತನ ಪವಾಡವೆಂದು ನಂಬಿದ ಭಕ್ತಾದಿಗಳು ಸಾಗರೋಪಾದಿಯಲ್ಲಿ ದೇವಸ್ಥಾನದತ್ತ ಬಂದಿದ್ದರಂತೆ.

ಯಾರೊಬ್ಬರಿಗೂ ಈ ಗರುಡ ಪಕ್ಷಿ ಹೇಗೆ ಗರ್ಭಗುಡಿಯೊಳಗೆ ಬಂತು ಎಂಬುದು ಗೊತ್ತಿಲ್ಲ . ಒಟ್ಟಿನಲ್ಲಿ ಈ ವಿಷಯ ಅರಣ್ಯಾಧಿಕಾರಿಗಳ ಕಿವಿಗೆ ಬೀಳುತ್ತಿದ್ದಂತೆ ಕೂಡಲೇ ದೇಗುಲಕ್ಕೆ ಬಂದ ಅಲ್ಲಿನ ಅರಣ್ಯಾಧಿಕಾರಿಗಳು
ಗರುಡ ಪಕ್ಷಿಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡಿದರು ಎಂಬ ಮಾಹಿತಿ ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top