ಹೆಚ್ಚಿನ

ದಕ್ಷಿಣ ಭಾರತದ ಸುಪ್ರಸಿದ್ದ ತಿಂಡಿಗಳನ್ನು ಪರಿಚಯಿಸಿದವರು ಯಾರು ಗೊತ್ತೇ?- ಗೊತ್ತಾದ್ರೆ ಹೆಮ್ಮೆ ಪಡ್ತಿರಾ !

ದಕ್ಷಿಣ ಭಾರತದ ತಿಂಡಿಗಳೆಂದರೆ ತಕ್ಷಣ ನೆನಪಿಗೆ ಬರೋದು ಮಸಾಲಾ ದೋಸೆ , ರವೇ ಇಡ್ಲಿ, ಚಿತ್ರಾನ್ನ….ಮುಂತಾದವುಗಳು. ಬಗೆಬಗೆಯ ಈ ತಿಂಡಿಗಳನ್ನು ನೆನೆಸಿಕೊಂಡರೆ ಸಾಕು ಎಂತವರ ಬಾಯಿಯಿಂದಲೂ ನೀರು ಬರುತ್ತದೆ ! ಅದ್ಭುತ ರುಚಿಗೆ ಹೆಸರುವಾಸಿಯಾದ ಈ ದಕ್ಷಿಣ ಭಾರತದ ತಿಂಡಿಗಳೂ ಎಲ್ಲರ ಮೋಸ್ಟ್ ಫೇವರಿಟ್. ಹೀಗಿರುವಾಗ ಅಸಲಿಗೆ ಈ ತಿಂಡಿಗಳನ್ನು ಯಾರು ಕಂಡು ಹಿಡಿದಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ನಮ್ಮೆಲ್ಲರ ಮೆಚ್ಚಿನ ಈ ಬಗೆಬಗೆಯ ತಿಂಡಿಗಳನ್ನು ಯಾರು ಕಂಡುಹಿಡಿದರೂ ಎಂದು ತಿಳಿಯುವ ಕುತೂಹಲ ನಿಮ್ಮಲಿದ್ದಾರೆ ಮುಂದೆ ಓದಿ.

ನಿಮಗೆ ಗೊತ್ತೇ? ರವಾ ಇಡ್ಲಿಯು ಮೊಟ್ಟ ಮೊದಲ ಬಾರಿಗೆ ತಯಾರಾಗಿದ್ದು ಕರ್ನಾಟಕದಲ್ಲಿ. ಹೌದು, ಎರಡನೇ ಮಹಾಯುದ್ಧದ ಸಮಯದಲ್ಲಿ, ಇಡ್ಲಿ ಮಾಡಲು ಅಕ್ಕಿ ಕಮ್ಮಿ ಬೀಳುತ್ತದೆ. ಆಗ ಎಂ. ಟಿ. ಆರ್ . ಅವರು ಸೀಮೋಲೀನಾ ಎಂಬ ಪದಾರ್ಥವನ್ನು ಬಳಸಿ ಒಂದು ಪ್ರಯೋಗ ನಡೆಸ್ತಾರೆ ಅಂದಹಾಗೆ ಆ ಪ್ರಯೋಗ ದಲ್ಲಿ ಹುಟ್ಟಿಕೊಂಡಿದ್ದೇ ನಮ್ಮ ನಿಮ್ಮೆಲ್ಲರ ಜನಪ್ರಿಯ ತಿಂಡಿಯಾದ ರವಾ ಇಡ್ಲಿ.

ಮಸಾಲೆ ದೋಸೆ ಯಾರು ತಾನೇ ತಿಂದಿರಲ್ಲ? ನೆನಸಿಕೊಂಡರೆ ಸಾಕು ಈಗಲೇ ಬಾಯಲ್ಲಿ ನೀರೂರಿಸುವ ಈ ತಿಂಡಿಯ ಬಗ್ಗೆ ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ? ಹಲವಾರು ಜನರು ಇಂದಿಗೂ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳಿಗೆ ಹೋದರೆ ಮೊದಲು ಆರ್ಡರ್ ಮಾಡೋದು ಮಸಾಲಾ ದೋಸೆಯನ್ನೇ. ಹೀಗಿರುವಾಗ ಹೆಮ್ಮೆಯ ವಿಷಯ ಏನೆಂದರೆ, ಈ ಬಗೆ-ಬಗೆಯ ತಿಂಡಿಗಳನ್ನು ಪರಿಚಯಿಸಿದ್ದು ನಮ್ಮ ಕನ್ನಡಿಗರು ಎಂಬುದು. ಹೌದು, ಮಸಾಲಾ ದೋಸೆಯನ್ನಷ್ಟೇ ಅಲ್ಲದೆ ರಾಗಿ ಮುದ್ದೆ, ಚಿತ್ರಾನ್ನ ,ಜೋಳದ ರೊಟ್ಟಿ ಮತ್ತು ಮೈಸೂರು ಪಾಕ್ ನಂತಹ ಮುಂತಾದ ತಿಂಡಿಗಳನ್ನು ಇಡೀ ದೇಶಕ್ಕೆ ಪರಿಚಯಸಿದ್ದು ಕರ್ನಾಟಕದವರೇ ಎಂಬುದು ಹೆಮ್ಮೆಯ ಸಂಕೇತ ಅನ್ನುವುದರಲ್ಲಿ ಎರಡು ಮಾತಿಲ್ಲ ಅಲ್ಲವೇ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top