fbpx
ಕ್ರಿಕೆಟ್

ಹೊಸ ಖ್ಯಾತಿಗೆ ಪಾತ್ರವಾದ ಕಿಂಗ್ ಕೊಹ್ಲಿ – ದ್ರಾವಿಡ್, ಲಕ್ಷ್ಮಣ್ ದಾಖಲೆ ಉಡೀಸ್ !

ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಹೊಸ ದಾಖಲೆಗಳನು ಸೃಷ್ಟಿಸಿದ್ದಾರೆ. ದಾಖಲೆಗಳ ಸರದಾರನಾಗಿರುವ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ 82 ರನ್ ಗಳಿಸಿ ಕೇವಲ 18 ರನ್ ಗಳ ಅಂತರದಲ್ಲಿ ತಮ್ಮ ವೃತ್ತಿ ಜೀವನದ 26ನೇ ಶತಕವನ್ನು ಮಿಸ್ ಮಾಡಿಕೊಂಡರು ಕೂಡ ಅದ್ಭುತ ಇನ್ನಿಂಗ್ಸ ಆಡುವುದರ ಮೂಲಕ ಕೊಹ್ಲಿ ಅಂತಾರಾಷ್ಟ್ರೀಯ ದಾಖಲೆಗಳನ್ನು ಸರಿಗಟ್ಟಿದ್ದಾರೆ.

ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ದಾಖಲೆಯನ್ನು ಉಡೀಸ್ ಮಾಡಿದ ಕೊಹ್ಲಿ :

ಪ್ರಸಕ್ತ ಕಾಲೆಂಡರ್ ವರ್ಷದಲ್ಲಿ ವಿದೇಶ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸಮನ್ ಎಂಬ ಖ್ಯಾತಿಗೆ ಪಾತ್ರರಾಗಿರುವ ಕೊಹ್ಲಿ ನಮ್ಮ ದೇಶದ ಹೆಮ್ಮೆಯ ಕ್ರಿಕೆಟ್ ಆಟಗಾರ ದಿ ವಾಲ್ ಎಂದೇ ಪ್ರಸಿದ್ಧಿಯಾಗಿದ್ದ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ . ಹೌದು, ಕೊಹ್ಲಿ 2018ನೇ ಸಾಲಿನಲ್ಲಿ ಇದುವರೆಗೆ 1138 ರನ್ ಗಳಿಸಿದ್ದಾರೆ. ಈ ಹಿಂದೆ 2002ರಲ್ಲಿ ರಾಹುಲ್ ದ್ರಾವಿಡ್ 1137 ರನ್ ಗಳಿಸಿದ್ದರೂ.

ಇನ್ನು ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸಮನ್‌ಗಳ ಸಾಲಿನಲ್ಲಿ ವಿವಿಎಸ್ ಲಕ್ಷ್ಮಣ್ (1236) ದಾಖಲೆಯನ್ನು ಕೊಹ್ಲಿ ಮುರಿದು ಇಲ್ಲಿಯವರೆಗೆ ಒಟ್ಟು 1809 ರನ್ ಕಲೆ ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top