ಹೆಚ್ಚಿನ

‘ಸುಧಾಮ’ ಶ್ರೀ ಕೃಷ್ಣ ನ ಪರಮಾಪ್ತ ಗೆಳೆಯನಾಗಿದ್ದರೂ ಕಡು ಬಡತನದ ಬೇಗೆಯಲ್ಲಿ ಏಕೆ ನರಳಬೇಕಾಯಿತು ಗೊತ್ತೇ? – ಇಲ್ಲಿದೆ ನೋಡಿ ಸ್ವಾರಸ್ಯಕರವಾದ ಕಥೆ

ಶ್ರೀ ಕೃಷ್ಣ ಮತ್ತು ಸುಧಾಮ ನ ಸ್ನೇಹದ ಬೆಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ? ಸ್ನೇಹಕ್ಕೆ ಮತ್ತೊಂದು ಹೆಸರಂತಿರುವ ಇವರಿಬ್ಬರ ಒಡನಾಟ ಎಲ್ಲರಿಗೂ ಚಿರಪರಿಚಿತವೇ. ಹೀಗಿರುವಾಗ ಸುಧಾಮ ಶ್ರೀ ಕೃಷ್ಣನ ಪರಮಾಪ್ತ ಗೆಳೆಯನಾದರೂ ತನ್ನ ಜೀವನದಲ್ಲಿ ಕಡು ಬಡತನದ ಕಾದ ಕುಲುಮೆಯಲ್ಲಿ ಏಕೆ ಬೆಯ್ಯಬೇಕಾಯಿತು ಅನ್ನೋ ಪ್ರಶ್ನೆ ನಿಮ್ಮನ್ನು ಕಾಡುವುದಿಲ್ಲವೇ? ಸದ್ಯಕ್ಕೆ ನಿಮ್ಮನು ಕಾಡುತ್ತಿರುವ ಪ್ರಶ್ನೆಗೆ ಉತ್ತರ ಕೃಷ್ಣ ಮತ್ತು ಸುಧಾಮ ರ ನಡುವೆ ನಡೆದ ‘ಆ ಒಂದು ಘಟನೆ‘..ಹಾಗಾದರೆ ‘ ಆ ಒಂದು ಘಟನೆ ‘ ಯಾವುದು ಎಂದು ತಿಳಿದುಕೊಳ್ಳಬೇಕೇ?- ಮುಂದೆ ಓದಿ!

ಶ್ರೀ ಕೃಷ್ಣ ಮತ್ತು ಅವನ ಸಹೋದರ ಬಲರಾಮ, ತಮ ಸಹಪಾಠಿಯಾದ ಸುದುಧಾಮನೊಡನೆ ಸಂದೀಪಿನಿ ಎಂಬ ಗುರುವಿನ ಆಶ್ರಯದ ಆಶ್ರಮದಲ್ಲಿ ವಾಸಿಸುತ್ತಿದ್ದರೂ . ಹೀಗಿರುವಾಗ ಒಂದು ದಿನ ಕೃಷ್ಣ ಮತ್ತು ಬಲರಾಮ ಸೌದೆ ತರಲು ಕಾಡಿಗೆ ಹೋದರು. ಆಗ ಸಂದೀಪಿನಿ ಋಷಿ ಪತ್ನಿಯು ಸುಧಾಮನನ್ನು ಕರೆದು ಮೂವರಿಗೂ ಸಾಕಾಗುವಷ್ಟು ಕಡಲೆ ಕೊಟ್ಟು ಸುಧಾಮನನ್ನು ಕಾಡಿಗೆ ಕಳುಹಿಸಿದಳು . ಕಾಡಿಗೆ ಬಂದ ಸುದಾಮನು ಕೃಷ್ಣನನ್ನು ಸಂದಿಸಿದನು.

ಸುಧಾಮನನ್ನು ಪ್ರೀತಿಯಿಂದ ಅಪ್ಪಿಕೊಂಡ ಶ್ರೀ ಕೃಷ್ಣ , ‘ಸುಧಾಮ ನನಗೆ ಬಹಳ ಬಾಯಾರಿಕೆಯಕಿಯಾಗಿದೆ, ಕುಡಿಯಲು ನೀರು ಬೇಕು’ ಎಂದನು . ಆಗ ಕೃಷ್ಣ ಮಾತಿಗೆ ಸ್ಪಂದಿಸಿದ ಸುಧಾಮ ತಾನು ‘ಕಡಲೆ’ ತಂದಿದ್ದೇನೆ ಎಂಬ ವಿಚಾರವನ್ನು ಹೇಳದೆ ‘ಹೊಟ್ಟೆ ಬರಿದಾಗಿರುವಾಗ ನೀರು ಕುಡಿಯಬಾರದು, ಸ್ವಲ್ಪ ಹೊತ್ತು ವಿಶ್ರಮಿಸಿಕೋ’ ಎಂದನು. ಆಪಾರ ಆಯಾಸವಾಗಿದ್ದರಿಂದಲೋ ಏನೋ ಕೃಷ್ಣ ಸುಧಾಮನ ತೊಡೆಯ ಮೇಲೆ ಮಲಗಿದ. ಕೃಷ್ಣ ನಿದ್ದಿಗೆ ಜಾರಿದ್ದಾನೆ ಎಂದು ಭಾವಿಸಿದ ಸುಧಾಮ ಜೇಬಿನಲ್ಲಿದ್ದ ಕಡಲೆಯನ್ನು ತೆಗೆದು ತಿನ್ನಲೂ ಪ್ರಾರಂಭಿಸಿದ. ಆಗ ಕೃಷ್ಣನಿಗೆ ಎಚ್ಚರವಾಗಿ ‘ಇದೇನಿದು ಏನು ತಿನ್ನುತ್ತಿರುವೆ? ಏನೋ ಸದ್ದಾಗುತ್ತಿದೆಯಲ್ಲ?’ ಎಂದು ಸುಧಾಮನ್ನು ಕೇಳಿದ. ಹಾಗಲಾದರೂ ನಾನು ಕಡಲೆ ತಂದಿದ್ದೇನೆ ನೀನು ತೆಗೆದಿಕೋ ಎಂದು ಸುಧಾಮ ಹೇಳುವ ಬದಲು ‘ಕೃಷ್ಣ, ತಿನ್ನುವುದಕ್ಕೆ ನನ್ನ ಬಳಿ ಏನಿದೆ? ‘ ಚಳಿ ಯಿಂದ ನಡಗುತ್ತಿದ್ದೇನೆ, ವಿಷ್ಣು ಸಹಸ್ರನಾಮವನ್ನು ಸಹ ಉಚ್ಛರಿಸಲಾಗುತ್ತಿಲ್ಲ ಎಂದ. ಸುಧಾಮ ತನ್ನೊಂದಿಗೆ ಸುಳ್ಳನ್ನು ಹೇಳುತ್ತಿದ್ದಾನೆ ಎಂದು ಮನಗಂಡ ಕೃಷ್ಣ ಸುಧಾಮನಿಗೆ ಪಾಠ ಕಲಿಸಲು ಮುಂದಾದ.

ಸುಳ್ಳು ಹೇಳುತ್ತಿದ್ದ ಸುಧಾಮನನ್ನು ಕೃಷ್ಣ , ನಿನಗೆ ಗೊತ್ತಾ ನಾನು ಈಗ ಮಲಗಿದ್ದಾಗ ಒಂದು ಕನಸು ಕಂಡೆ. ಆ ಕನಸಿನಲ್ಲಿ ಒಬ್ಬನು ಬೇರೆಯವರಿಗಾಗಿ ಕೊಟ್ಟ ಪದಾರ್ಥವನ್ನು ಅವರಿಗೆ ತಿಳಿಯದಂತೆ ತಿನ್ನುತ್ತಿದ್ದನು. ಆಗ ಅವನನ್ನು ವಿಚಾರಿಸಿದಾಗ ‘ಏನು ಮಣ್ಣು ತಿನ್ನಲಿ ?’ ಎಂದನು. ಅದಕ್ಕೆ ಪ್ರಶ್ನೆ ಕೇಳಿದವನು ‘ಅದು ಹಾಗೆಯೇ ಆಗಲಿ’ ಎಂದುಬಿಟ್ಟನು ಗೊತ್ತಾ? ಎಂದು ಸುಧಾಮನಿಗೆ ತಾನೇ ಹೆಣೆದ ಒಂದು ಕತೆಯನ್ನು ಹೇಳುತ್ತಾ ಸುಧಾಮ ನೀನು ಯೋಚಿಸಬೇಡ! ಇದು ಕನಸು ಮಾತ್ರ. ನೀನು ನನ್ನನ್ನು ಬಿಟ್ಟು ಏನು ತಿನ್ನುವುದಿಲ್ಲ ಎಂಬುದು ನನಗೆ ಗೊತ್ತಿದೆ. ಕನಸು ಬಿತ್ತಲ್ಲ ಎಂದು ಹೇಳಿಕೊಂಡೆ ಎಂದು ಪರೋಕ್ಷವಾಗಿ ಸುಧಾಮನ ತಪ್ಪಿಗೆ ಕೃಷ್ಣ ಪಾಠ ಕಲಿಸಿದ.

ಬಹುಶಃ ಸುಧಾಮನಿಗೆ ಶ್ರೀ ಕೃಷ್ಣನ ಸರ್ವಜ್ಞತೆಯ ಆಳದ ಬಗ್ಗೆ ಸಂಪೂರ್ಣವಾಗಿ ಅರಿವಿದ್ದಿದ್ದರೆ ಆತ ಹೀಗೆ ನಡೆದುಕೊಳ್ಳುತ್ತಿರಲಿಲ್ಲ. ಹಂಚಿ ತಿನ್ನಬೇಕಾಗಿದ್ದ ವಸ್ತುವನ್ನು ಬಚ್ಚಿಟ್ಟುಕೊಂಡು ತಿಂದಿದ್ದೂಕ್ಕೋ ಅಥವಾ ಕೃಷ್ಣ ಆಯಾಸವಾಗಿದ್ದನೆಂದು ತಿಳಿದರು ಅವನಿಗೆ ಕೊಡದೆ ಹಾಗೂ ಸ್ವತಃ ಕೃಷ್ಣನೇ ಕೇಳಿದರೂ ‘ತಿನ್ನುವುದಕ್ಕೆ ಏನಿದೆ?’ ಎಂದು ಸುಧಾಮ ಸುಳ್ಳು ಹೇಳಿದ ಪರಿಣಾಮವಾಗಿಯೇ ಆತ ಮುಂದೆ ತನ್ನ ಜೀವನದ ಎಷ್ಟೋ ಕಾಲವನ್ನು ಕಡು ಬಡತನದಲ್ಲಿ ಕಳೆಯ ಬೇಕಾದ ಸ್ಥಿತಿ ಬಂದೊದಗಿತು. ಕಟ್ಟಕಡೆಗೆ ತಾನೇ ಸ್ವತಃ ಮಾಡಿದ ‘ಒಂದು ಹಿಡಿ ಅವಲಕ್ಕಿ’ಅನ್ನು ಸುಧಾಮ ಶ್ರೀ ಕೃಷ್ಣನಿಗೆ ಆರ್ಪಿಸುವುದರ ಮೂಲಕ ಬಡತನದ ಕಪಿಮುಷ್ಠಿಯಿಂದ ಮುಕ್ತನಾಗಿ ಪ್ರಿಯ ಗೆಳೆಯ ಶ್ರೀ ಕೃಷ್ಣನಿಂದ ಸ್ವರ್ಣ ನಗರವನ್ನೇ ಉಡುಗೊರೆಯಾಗಿ ಪಡೆದುಕೊಂಡ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top