fbpx
ಕ್ರಿಕೆಟ್

ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಮಾಯಾಂಕ್ ಅಗರ್ವಾಲ್ ಅವರ ಆಸ್ತಿಯ ಒಟ್ಟು ಮೊತ್ತ ಎಷ್ಟು ಗೊತ್ತೇ ?

ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಅತ್ಯದ್ಭುತ ಪ್ರದರ್ಶನ ನೀಡುತ್ತ, ಭಾರತ ಅಂತಾರಾಷ್ಟ್ರೀಯ ತಂಡದಲ್ಲಿ ಆಡಲು ಬಕಪಕ್ಷಿಯಂತೆ ಕಾದು, ಈಗಷ್ಟೇ ಅವಕಾಶ ಪಡೆದ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌, ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಆಸ್ಟ್ರೇಲಿಯ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಮಾಯಾಂಕ್‌ ಅಗರ್ವಾಲ್‌ 76 ರನ್‌ ಗಳಿಸುವುದರೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರೂ. ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಅದ್ಭುತವಾಗಿ ಆರಂಭಿಸಿರುವ ಮಾಯಾಂಕ್‌ ಅಗರ್ವಾಲ್‌ ಮುಂದೆ ತಮಗೆ ಬರುವ ಅವಕಾಶಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ. ಹಿಂದಿನೆರಡು ಟೆಸ್ಟ್‌ ಪಂದ್ಯಗಳಲ್ಲಿ ಕೆ.ಎಲ್‌. ರಾಹುಲ್‌ ಮತ್ತು ಮುರಳಿ ವಿಜಯ್‌ ಆರಂಭಕಾರರಾಗಿ ಉತ್ತಮ ಪ್ರದರ್ಶನ ನೀಡುವುದರಲ್ಲಿ ಸೋತಿದ್ದರು, ಇವರಿಬ್ಬರ ವೈಫಲ್ಯ ಕಂಡ ಟೀಮ್ ಇಂಡಿಯಾ ಈ ಬಾರಿ ಮಾಯಾಂಕ್‌ ಅಗರ್ವಾಲ್‌ ಮತ್ತು ಹನುಮ ವಿಹಾರಿಗೆ ಚಾನ್ಸ್ ಕೊಟ್ಟಿತು. ಒಟ್ಟಿನಲ್ಲಿ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬೆಳಸಿಕೊಂಡ ಆಟಗಾರ ಮಾಯಾಂಕ್‌ ಅಗರ್ವಾಲ್‌ ಭವಿಷ್ಯದಲ್ಲಿ ಉತ್ತಮ ಬ್ಯಾಟ್ಸಮನ್ ಆಗುವ ಸಾಧ್ಯತೆಗಳು ಹೆಚ್ಚಿವೆ.

ಕಳೆದ 8 ವರ್ಷಗಳಿಂದ ಮಾಯಾಂಕ್ ಅಗರ್ವಾಲ್ ಐಪಿಎಲ್ ಆಡುತ್ತಿದ್ದಾರೆ . ಹೀಗಿರುವಾಗ ಇದೀಗ ಅವರ ಆಸ್ತಿಯ ಬಗ್ಗೆ ಚರ್ಚೆ ನಡೆದಿದ್ದು. ಖಾಸಗಿ ನ್ಯೂಸ್ ಚಾನೆಲ್ ನ ವರದಿಯ ಪ್ರಕಾರ ಮಾಯಾಂಕ್‌ ಅಗರ್ವಾಲ್‌ ಅವರು 11 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top