ಹೆಚ್ಚಿನ

ಶ್ರೀ ಸಿದ್ದಗಂಗಾ ಕ್ಷೇತ್ರಕ್ಕೆ ‘ಸಿದ್ಧಗಂಗೆ/ ಸಿದ್ದಗಂಗಾ ‘ ಎಂದು ಹೆಸರು ಬರುವುದರ ಹಿಂದಿರುವ ರೋಚಕ ಕಾರಣವನ್ನು ತಪ್ಪದೆ ತಿಳಿದುಕೊಳ್ಳಿ !

ಸಿದ್ದಗಂಗಾ ಕ್ಷೇತ್ರಕ್ಕೆ ಅಸಲಿಗೆ ‘ಸಿದ್ದಗಂಗಾ’ ಎಂದು ಹೆಸರು ಬರುವುದರ ಹಿಂದಿನ ಕಾರಣ ನಿಮಗೆ ತಿಳಿದಿದೆಯೇ? ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ!

ಸಿದ್ದಗಂಗಾ ಶ್ರೀಗಳಾದ ‘ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು’ ಯಾರಿಗೆ ಗೊತ್ತಿಲ್ಲ ಹೇಳಿ? ತಮ್ಮ 111 ರ ವಯಸ್ಸಿನಲ್ಲಿಯೂ ಅತ್ಯಂತ ಕ್ರಿಯಾಶೀಲರಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳು ನಡೆದಾಡುವ ದೇವರೆಂದೇ ಖ್ಯಾತಿ ಗಳಿಸಿದ್ದಾರೆ. ಇಂತಹ ಮಹಾತ್ಮ ರಿರುವ ಬೀಡಾದ ಶ್ರೀ ಸಿದ್ಧಗಂಗಾ ಕ್ಷೇತ್ರವು ತುಮಕೂರು ನಗರದಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ. ಊಟ, ವಿದ್ಯೆ ಮತ್ತು ವಸತಿಯ ಉಚಿತ ವ್ಯವಸ್ಥೆ ಇಲ್ಲಿ ಇದ್ದು, ಇದೇ ಕಾರಣದಿಂದ ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಈ ಸ್ಥಳ ಪ್ರಸಿದ್ಧಿ ಪಡೆದಿದೆ. ನಿತ್ಯ ಇಲ್ಲಿ ಸುಮಾರು ಹತ್ತು ಸಾವಿರ ಮಕ್ಕಳಿಗೆ ತ್ರಿವಿಧ ದಾಸೋಹ ಕಾರ್ಯ ನಡೆಯುತ್ತದೆ. ಹೀಗಿರುವಾಗ ಸಿದ್ದಗಂಗಾ ಕ್ಷೇತ್ರಕ್ಕೆ ಸಿದ್ಧಗಂಗೆ/ ಸಿದ್ದಗಂಗಾ ಎಂದು ಹೆಸರು ಬಂದಿರುವುದರ ಹಿಂದೆ ಒಂದು ಬಲವಾದ ಕಾರಣವಿರಬಹುದಲ್ಲವೇ? ಹಾಗಾದರೆ ಅದೇನು ಅಂತೀರಾ ?ಮುಂದೆ ಓದಿ..

ಶ್ರೀ ಸಿದ್ದಗಂಗಾ ಕ್ಷೇತ್ರಕ್ಕೆ ಸುದೀರ್ಘ‌ವಾದ ಇತಿಹಾಸವಿದ್ದು ಈ ಸಿದ್ದಗಂಗಾ ಮಠವನ್ನು ಸ್ಥಾಪಿಸಿದವರು ‘ಶ್ರೀ ಗೋಸಲ ಸಿದ್ದೇಶ್ವರರು’ ಎಂದು ಇತಿಹಾಸ ಹೇಳುತ್ತದೆ. ಹರದನಹಳ್ಳಿಯಲ್ಲಿ ಸ್ಥಾಪಿಸಲ್ಪಟ್ಟ ಶೂನ್ಯ ಸಿಂಹಾಸನದ ಪ್ರಭುಗಳಾದ ಸಿದ್ದೇಶ್ವರರು ಸಿದ್ಧಗಂಗಾ ಕ್ಷೇತ್ರವನ್ನು ತಮ್ಮ ಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡ ವಿಚಾರ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.

ಸಿದ್ದಗಂಗಾ ಎಂದು ಹೆಸರು ಬಂದಿದ್ದು ಹೇಗೆ ?

ಶ್ರೀ ಗೋಸಲ ಸಿದ್ದೇಶ್ವರರು ಮಹಾನ್ ತಪಸ್ವಿಗಳು. ಹೀಗಿರುವಾಗ ಒಮ್ಮೆ ಅವರ ಸಮಕಾಲೀನರಾದ ನೂರೆಂಟು ತಪಸ್ವಿಗಳು ಸಿದ್ಧಗಂಗಾ ಬೆಟ್ಟದ ಗುಹೆಯಲ್ಲಿ ತಪಸ್ಸು ಮಾಡುತ್ತಿರುತ್ತಾರಂತೆ ಆಗ ಅವರಲ್ಲಿ ಒಬ್ಬರಿಗೆ ರಾತ್ರಿ ವೇಳೆ ತೀವ್ರವಾದ ಬಾಯಾರಿಕೆಯಾಗಿ ಆಗ ಆ ವೃದ್ಧ ತಪಸ್ವಿಗಳು ಶ್ರೀ ಗೋಸಲ ಸಿದ್ದೇಶ್ವರರನ್ನು ಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾರಂತೆ , ಆ ವೃದ್ಧ ತಪಸ್ವಿಗಳು ಶ್ರೀ ಗೋಸಲರನ್ನು ನೆನಪಿಸಿಕೊಂಡ ತಕ್ಷಣವೇ  ಪ್ರತ್ಯಕ್ಷರಾದ ಗೋಸಲ ಸಿದ್ದೇಶ್ವರರು ತಮ್ಮ ಪವಿತ್ರವಾದ ಹಸ್ತದಿಂದ ಅಲ್ಲಿದ್ದ ಒಂದು ಬಂಡೆಯನ್ನು ಬಲಗೈಯಿಂದ ಸ್ಪರ್ಶಿಸಿದಾಗ ಅಲ್ಲಿ ಕ್ಷಣಮಾತ್ರದಲ್ಲಿ ಗಂಗೆ ಉದ್ಭವವಾಯಿತಂತೆ ಆದ ಕಾರಣದಿಂದ ಈ ಕ್ಷೇತ್ರಕ್ಕೆ ಸಿದ್ಧಗಂಗೆ
/ಸಿದ್ದಗಂಗಾ ಎಂಬ ಹೆಸರು ಬಂದಿತು ಎಂಬ ಪ್ರತೀತಿ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top