fbpx
ಆಚಾರ - ವಿಚಾರ

ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯದ ಹಿಂದಿರುವ ಉದ್ದೇಶ ಏನೆಂದು ಗೊತ್ತೇ?

ಸಾಮಾನ್ಯವಾಗಿ ಪ್ರತಿಯೊಂದು ಹಿಂದೂ ಧರ್ಮದ ಆಚರಣೆಯ ಅಥವಾ ಸಂಪ್ರದಾಯದ ಹಿಂದೆ ಒಂದು ಮಹತ್ತರವಾದ ಉದ್ದೇಶವಿರುತ್ತದೆ. ನೀವು ಯಾವುದೇ ಹಿಂದೂ ಆಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ ಖಡಾಖಂಡಿತವಾಗಿ ನಿಮಗೆ ಆ ಆಚರಣೆಯ ಹಿಂದಿರುವ ವೈಜ್ಞಾನಿಕ ಕಾರಣಗಳು ಮತ್ತು ಆರೋಗ್ಯಕರ ಲಾಭಗಳು ಗೊತ್ತಾಗಿ ಬಿಡುತ್ತವೆ.

ಹೀಗೆ ಹಿಂದೂ ಧರ್ಮದ ಮಹತ್ತರ ಆಚರಣೆಗಳಲ್ಲಿ ಒಂದಾದ ‘ಮಕ್ಕಳಿಗೆ ಕಿವಿ ಚುಚ್ಚಿಸುವ ‘ ಸಂಪ್ರದಾಯದ ಹಿಂದೆಯೂ ಒಂದು ಉದ್ದೇಶವಿದೆ. ಅಸಲಿಗೆ ಇದು ಭಾರತದಲ್ಲಿ ಅತ್ಯಂತ ಪ್ರಮುಖವಾದ ಸಂಪ್ರದಾಯವಾಗಿದ್ದು. ಖುದ್ದು ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ವೈದ್ಯರುಗಳೇ ಈ ಸಂಪ್ರದಾಯಕ್ಕೆ ತಲೆದೂಗಿದ್ದಾರೆ.

ಹಾಗಾದರೆ ಮಕ್ಕಳಿಗೆ ಏಕೆ ಕಿವಿ ಚುಚ್ಚಿಸಲಾಗುತ್ತದೆ ಎಂದರೆ ” ಮಕ್ಕಳಿಗೆ ಕಿವಿ ಚುಚ್ಚಿಸುವದರಿಂದ ಬೌದ್ಧಿಕ ಬೆಳವಣಿಗೆ ಸರಾಗವಾಗಿ ಆಗುವುದಲ್ಲದೆ , ಅದು ಮಕ್ಕಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದಂತೆ. ಅಷ್ಟೇಅಲ್ಲದೆ, ಮಗುವಿಗೆ ಕಿವಿ ಚುಚ್ಚಿಸುವುದರಿಂದ ಆ ಮಗುವು ಕಿವಿಯ ನಾಳಗಳ ಕಾಯಿಲೆಗಳಿಂದ ಮುಕ್ತವಾಗುತ್ತದಂತೆ ಜೊತೆಗೆ ಮಗುವಿನಲ್ಲಿ ಮಾತನಾಡುವ ಸಮಸ್ಯೆ ಇದ್ದರೆ ಕ್ರಮೇಣ ಅದು ದೂರವಾಗುತ್ತದಂತೆ.” ಹಾಗಾಗಿ ಮಕ್ಕಳಿಗೆ ಕಿವಿ ಚುಚ್ಚಿಸಲಾಗುತ್ತದೆ ಎಂದು ತಿಳಿದು ಬರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top